ಮೋದಿ ಭಾಷಣಕ್ಕೆ ‘ಭಾಷಿಣಿ’ ಕೃತಕ ಬುದ್ಧಿಮತ್ತೆ ಸಾಥ್ – ವಾರಣಾಸಿಯಲ್ಲಿ ಮೊದಲ ಪ್ರಯೋಗ

ಮೋದಿ ಭಾಷಣಕ್ಕೆ ‘ಭಾಷಿಣಿ’ ಕೃತಕ ಬುದ್ಧಿಮತ್ತೆ ಸಾಥ್ – ವಾರಣಾಸಿಯಲ್ಲಿ ಮೊದಲ ಪ್ರಯೋಗ

ಮನುಷ್ಯ ತನ್ನ ಬೌದ್ಧಿಕ ಮತ್ತು ದೈಹಿಕವಾಗಿ ಮಾಡಬಹುದಾದ ಕೆಲಸಗಳನ್ನು ಕೃತಕ ಬುದ್ಧಿಮತ್ತೆ (Artificial Intelligence-AI) ಮೂಲಕ ಮಾಡಿಸಲು ಮುಂದಾಗಿದ್ದಾನೆ. ಅದಕ್ಕಾಗಿ ಸಾಕಷ್ಟು ಆವಿಷ್ಕಾರಗಳು ದಿನದಿಂದ ದಿನ ಹೆಚ್ಚುತ್ತಲೇ ಇದೆ. ಇದಕ್ಕೆ ನಿದರ್ಶನವೆಂದರೆ ಇತ್ತೀಚೆಗಷ್ಟೆ ಸದ್ದು ಮಾಡಿದ ಸುದ್ದಿ ಮನೆ ಹುಡುಗಿ (ಎಐ) ಯನ್ನು ನೋಡಬಹುದು!

ಇದರ ಬೆನ್ನಲ್ಲೇ, ಪ್ರಧಾನ ಮಂತ್ರಿಯ ಭಾಷಣವನ್ನು ನೈಜ ಸಮಯದಲ್ಲಿ ಭಾಷಾಂತರಿಸಲು ಮೊದಲ ಭಾರಿಗೆ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಡಿಸೆಂಬರ್ 17ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಹಮ್ಮಿಕೊಂಡಿದ್ದ ಕಾಶಿ ತಮಿಳು ಸಂಗಮದ ಕಾರ್ಯಕ್ರಮದಲ್ಲಿ ಅನುವಾದಿಸಿದ್ದು, ಯಶಸ್ವಿಯಾಗಿದೆ.

ಈ ಕುರಿತು ಮಾತನಾಡಿದ ಪ್ರಧಾನಮಂತ್ರಿ ಮೋದಿ ಅವರು, ಇದು ನನ್ನ ಮೊದಲ ಅನುಭವ. ನಾನು ಎಂದಿನಂತೆ ಹಿಂದಿ ಭಾಷೆಯಲ್ಲೆ ಮಾತನಾಡಿದೆ. ಎಐ ತಂತ್ರಜ್ಞಾನವು ತಮಿಳು ಭಾಷೆಗೆ ಅನುವಾದಿಸಿದ್ದು, ಖುಷಿ ತಂದಿದೆ. ಈ ಆವಿಷ್ಕಾರದಿಂದ ನನ್ನ ಭಾಷಣವನ್ನು ಅಲ್ಲಿ ನೆರೆದಿದ್ದ ಎಲ್ಲಾ ಜನರಿಗೂ ತಲುಪಿದ್ದು ಆಶಾದಾಯಕವಾಗಿದೆ. ಅಲ್ಲದೇ ಮೂಲಭಾಷೆಯಲ್ಲಿ ಮಾತನಾಡುವ ಭಾರತೀಯರೊಂದಿಗೆ ಸಂಭಾಷಣೆ ಮಾಡಲು ಸುಲಭವಾಗಿದೆ ಎಂದು ತಿಳಿಸಿದರು.

ಎಐ ಆಧಾರಿತ ಅನುವಾದ ಸಾಧನಕ್ಕೆ “ಭಾಷಿಣಿ” ಎಂದು ನಾಮಕಾರಣ:

ನಮ್ಮ ಭಾರತ ಹಲವು ಭಾಷೆಗಳ ಬೀಡು. ಪ್ರಧಾನಿ ಮಂತ್ರಿಯಂತಹ ಉನ್ನತ ಮಟ್ಟದಲ್ಲಿರುವ ಅಧಿಕಾರಿಗಳು ತಮ್ಮ ಅನಿಸಿಕೆ, ಯೋಜನೆ, ವಿಚಾರಗಳನ್ನು ಎಲ್ಲಾ ಭಾಷೆಯ ಜನರಿಗೆ ಮುಟ್ಟಿಸುವುದು ಸುಲಭದ ವಿಚಾರವಲ್ಲ. ಹಾಗೆಂದು ಅವರಿಗೆ ದೇಶದ ಎಲ್ಲಾ ಭಾಷೆಗಳನ್ನು ತಿಳಿದುಕೊಳ್ಳಬೇಕೆಂಬ ಷರತ್ತು ಇಲ್ಲ.

ಇಲ್ಲಿಯವರೆಗೂ ಉನ್ನತ ಅಧಿಕಾರಿಗಳು ಮಾತನಾಡುವ ಭಾಷೆಯನ್ನು ಆಯಾ ರಾಜ್ಯದ ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಅನುವಾದಕರನ್ನು ಆಯ್ಕೆ ಮಾಡುತ್ತಿದ್ದು, ಅವರು ಆಯಾ ಭಾಷೆಗಳಿಗೆ ಭಾಷಾಂತರಿಸುತ್ತಿದ್ದರು. ಕೆಲವೊಮ್ಮೆ ಉನ್ನತಾಧಿಕಾರಿಗಳು ಮಾತನಾಡುವ ಭಾಷೆ ಅರ್ಥವಾಗದಿದ್ದಲ್ಲಿ ಅವರು ಮಾಡುವ ಅನುವಾದದಲ್ಲಿ ಎಡವಟ್ಟಾಗಿರುವುದನ್ನು ನಾವು ನಾನಾ ಕಡೆಗಳಲ್ಲಿ ಗಮನಿಸಿದ್ದೇವೆ.

ಆದರೆ, ಈ ಕೃತಕ ಬುದ್ಧಿಮತ್ತೆಗಳಿಂದ ದೇಶದ ನಾನಾ ರೀತಿಯ ಭಾಷೆಗಳ ಅನುವಾದಕ್ಕೆ ಸುಲಭವಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಸಾರ್ವಜನಿಕರನ್ನು ತಲುಪುವಲ್ಲಿ ಮತ್ತಷ್ಟು ದಾರಿ ಮಾಡಿಕೊಟ್ಟಿದೆ.

‘ಭಾಷಿಣಿ’ ಇದರ ಮುಖ್ಯ ಧ್ಯೇಯ ಏನು?

ಇದೊಂದು ಕೃತಕ ಬುದ್ದಿಮತ್ತೆಯಾಗಿದ್ದು, ನಾವು ನಮ್ಮ ಮೂಲಭಾಷೆಯಲ್ಲಿ ಮಾತನಾಡುವಾಗ ಭಾರತೀಯ ಬೇರೆ ಭಾಷಿಗರು ತಮ್ಮ ಸ್ವಂತ ಭಾಷೆಯಲ್ಲಿ ಕೇಳಿಸಿಕೊಳ್ಳಲು ಸುಲಭ ಮಾರ್ಗವಾಗಿದೆ. ಹಾಗೂ ಧ್ವನಿ ಆಧಾರಿತ ಪ್ರವೇಶವನ್ನು ಸಂಯೋಜಿಸುವುದು, ಆಯಾ ಭಾಷೆಗಳಲ್ಲಿ ವಿಷಯದ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ದೇಶಿಯ ಭಾಷೆಗಳಲ್ಲಿ ಇಂಟರ್’ನೆಟ್ ಮತ್ತು ಡಿಜಿಟಲ್ ಸೇವೆಯನ್ನು ಸುಲಭಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ.

You might also like
Leave A Reply

Your email address will not be published.