ಸ್ಮೃತಿ ಮಂದಾನಗೆ ʼಸೂಪರ್‌ ವುಮೆನ್‌ʼ ಎಂದ ವಿರಾಟ್ ಕೊಹ್ಲಿ

ಕಳೆದ 16 ವರ್ಷಗಳಿಂದ ಪುರುಷರು ಸಾಧಿಸಲಾಗದ್ದನ್ನ ಮಹಿಳೆಯರು ಕೆವಲ ಎರಡು ವರ್ಷಗಳಲ್ಲಿ ಅದು ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್ 2024 ರ ಫೈನಲ್ʼನ ಗೆಲುವಿನೊಂದಿಗೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ಮಹಿಳಾ ತಂಡದ ಗೆಲುವು ಆರ್.ಸಿ.ಬಿ ಪುರುಷರ ತಂಡಕ್ಕೂ ಸಂತಸ ಮೂಡಿದ್ದು, ತಕ್ಷಣವೇ ವಿರಾಟ್ ಕೊಹ್ಲಿ ಅವರು ಸ್ಮೃತಿ ಮಂದಾನಗೆ ವಿಡಿಯೋ ಕರೆ ಮಾಡುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದಲ್ಲದೇ, ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಸ್ಮೃತಿ ಮಂದಾನಗೆ ವಿಡಿಯೋ ಕರೆ ಮಾಡಿದ ವಿರಾಟ್ ಕೊಹ್ಲಿ ವಿಡಿಯೋ:

ಅಂತೆಯೆ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಮೃತಿ ಮಂದಾನ ಮತ್ತು ತಂಡಕ್ಕೆ ಟ್ರೋಫಿ ಗೆದ್ದ ಬಳಿಕ ವಿಶೇಷ ಸಂದೇಶವನ್ನು ಹಂಚಿಕೊಂಡರು. ಅವರು ತಮ್ಮ ಸ್ಟೋರಿಯಲ್ಲಿ ‘ಸೂಪರ್ ವುಮೆನ್’ ಎಂಬ ಶೀರ್ಷಿಕೆ ಬರೆದು ಫೋಟೋ ಹಂಚಿಕೊಂಡಿದ್ದಾರೆ.

You might also like
Leave A Reply

Your email address will not be published.