ಗಾಯಕಿ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ – ಮೂವರಿಗೆ ಗಾಯ

ಖ್ಯಾತ ಗಾಯಕಿ ಮಂಗ್ಲಿ (Singer Mangli) ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಈ ದುರ್ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಮಂಗ್ಲಿ ಸ್ಪಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಂಗ್ಲಿ (Singer Mangli) ಎಂದೇ ಖ್ಯಾತರಾಗಿರುವ ಸತ್ಯವತಿ ರಾಥೋಡ್ (Satyavati Rathod) ಅವರು ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ನಂದಿ ಗ್ರಾಮ ಮಂಡಲದ ಕನ್ಹಾ ಶಾಂತಿ ವಲಂನಲ್ಲಿ ನಡೆದ ವಿಶ್ವ ಆಧ್ಯಾತ್ಮಿಕ ಮಹೋತ್ಸವದದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ತರುವಾಯ ಮರಳಿದ್ದ ಅವರ ಕಾರಿಗೆ ಹಿಂದಿನಿಂದ ಬಂದ ಕಾರೊಂದು ಶಂಶಾಭಾದ್ ಬಳಿಯ ತೊಂಡಂಪಲ್ಲಿ ಎನ್ನುವಲ್ಲಿ ಡಿಕ್ಕಿ ಹೊಡೆದಿದೆ.

Singer Mangli Car Accident - 3 Injured

ಅದೃಷ್ಟವಶಾತ್ ಮಂಗ್ಲಿ ಸೇರಿದಂತೆ 3 ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಗಾಯಗೊಂಡು ಈ ಮೂರು ಜನರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ಮಂಗ್ಲಿಯವರ (Singer Mangli) ಜೊತೆ ಮನೋಹರ್ ಹಾಗೂ ಮೇಘರಾಜ್ ಎನ್ನುವವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಈ ಅಪಘಾತ ಪ್ರಕರಣದ ಕುರಿತು ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

You might also like
Leave A Reply

Your email address will not be published.