ಮಹಿಳಾ ಮಣಿಗಳ ಪವರ್’ಗೆ ಉಡಿಸ್ ಆಯ್ತು ವಿರಾಟ್ ಪೋಸ್ಟ್

ವುಮೆನ್ಸ್ ಪ್ರೀಮಿಯರ್ ಲೀಗ್ʼನ (WPL 2024) 2ನೇ ಸೀಸನ್ʼನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ RCB ಅಭಿಮಾನಿಗಳ ಕಪ್ ಗೆಲ್ಲುವ ಕನಸು ಕೊನೆಗೂ ಈಡೇರಿದ್ದೇನೋ ಸರಿ. ಆದರೆ ನಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಸುದ್ದಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ ಅಂದ್ರೆ ನೀವ್ ನಂಬ್ತಿರಾ? ಏನದು ಬನ್ನಿ ನೋಡೋಣ..

ಅತ್ತ ಕಡೆ ರಾಯಲ್ ಚಾಲೆಂಜರ್ಸ್ ಮಹಿಳಾ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ, ಆರ್’ಸಿಬಿ ತಂಡವು ಇನ್’ಸ್ಟಾಗ್ರಾಮ್‌ʼನಲ್ಲಿ ಹಂಚಿಕೊಂಡ ʼಚಾಂಪಿಯನ್ಸ್ʼ ಪೋಸ್ಟ್ ಕೇವಲ 9 ನಿಮಿಷಗಳಲ್ಲಿ 1 ಮಿಲಿಯನ್ (10 ಲಕ್ಷ) ಲೈಕ್ಸ್ ಪಡೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಅತೀ ಕಡಿಮೆ ಸಮಯದಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡ ಇನ್’ಸ್ಟಾಗ್ರಾಮ್ ಪೋಸ್ಟ್ ಎಂಬ ದಾಖಲೆ ಆರ್ʼಸಿಬಿಯ ಚಾಂಪಿಯನ್ಸ್ ಫೋಟೋ ಪಾಲಾಗಿದೆ.

ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ ಫೆಬ್ರವರಿ 20 ರಂದು 2ನೇ ಮಗುವಿನ ಆಗಮನದ ಶುಭಸುದ್ದಿಯನ್ನು ಇನ್’ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದರು. ಈ ಪೋಸ್ಟ್ ಕೇವಲ 10 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆಯುವ ಮೂಲಕ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ದಾಖಲೆ ಬರೆದಿತ್ತು.

 

View this post on Instagram

 

A post shared by Virat Kohli (@virat.kohli)

ಇದೀಗ ಆರ್’ಸಿಬಿ ತಂಡವು ಚಾಂಪಿಯನ್ ಪಟ್ಟಕ್ಕೇರಿರುವ ಪೋಸ್ಟ್ ಕೇವಲ 9 ನಿಮಿಷಗಳಲ್ಲಿ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಇನ್’ಸ್ಟಾಗ್ರಾಮ್ ಲೈಕ್ಸ್ ದಾಖಲೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದಾಗಿಸಿಕೊಂಡಿರುವುದು ವಿಶೇಷ.

 

You might also like
Leave A Reply

Your email address will not be published.