ಸತತ ಐದನೇ ಬಾರಿಗೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್!

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ಐದನೇ ಅಧ್ಯಕ್ಷೀಯ ಚುನಾವಣೆಯಲ್ಲಿ 87.17% ಮತಗಳನ್ನು‌ ಪಡೆಯುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ ಎಂದು ರಷ್ಯಾ ಮೂಲದ TASS ವರದಿ ಮಾಡಿದೆ. ‌ರಷ್ಯಾ ಒಕ್ಕೂಟದ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಅವರು 4.8% ಮತಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ನ್ಯೂ ಪೀಪಲ್ ಪಾರ್ಟಿಯ ಅಭ್ಯರ್ಥಿ ವ್ಲಾಡಿಸ್ಲಾವ್ ದಾವಂಕೋವ್ 4.1% ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾದ ಅಭ್ಯರ್ಥಿ ಲಿಯೊನಿಡ್ ಸ್ಲಟ್ಸ್ಕಿ ಅವರು 3.15% ಮತಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಮೊದಲಬಾರಿಗೆ ರಿಮೋಟ್ ಎಲೆಕ್ಟ್ರಾನಿಕ್ ಬಳಸಿ ಮತದಾನ ಮಾಡಲಾಗಿದೆ ಅಲ್ಲದೇ ಮಾರ್ಚ್ 15 ರಿಂದ 17 ರವರೆಗೆ ನಡೆದ ಮೂರು ದಿನದ ಅಧ್ಯಕ್ಷೀಯ ಮತದಾನದಲ್ಲಿ 2018ಕ್ಕೆ ಹೋಲಿಸಿದರೆ ಮತದಾನದ ಶೇಕಡಾವಾರು ಪ್ರಮಾಣವು 67.54 ರಿಂದ 74.22% ರಷ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಅಲ್ಲದೇ 2018 ರ‌ ಮತದಾನಕ್ಕೆ ಹೋಲಿಸಿದರೆ ಈ ಬಾರಿ ಪುಟಿನ್ ಅವರು ಅತೀ ಹೆಚ್ಚು ಮತಗಳನ್ನು ಪಡೆದಿರುವುದು ದಾಖಲಾಗಿದೆ.

Putin was elected as the President of Russia for the fifth time in a row

ಮಾಸ್ಕೋದಲ್ಲಿ ಪುಟಿನ್ 89.1% ಮತಗಳನ್ನು ಗಳಿಸಿದರೆ, ಡಾನ್ಬಾಸ್‌ ಮತ್ತು ನೊವೊರೊಸಿಯಾ ಪ್ರಾಂತ್ಯಗಳಲ್ಲಿ ಬಾರೀ ಅಂತರದ ಗೆಲುವನ್ನು ಪಡೆದಿದ್ದು, ಖೆರ್ಸನ್, ಲುಹಾನ್ಸ್ಕ್, ಜಪೋರಿಝಿಯಾ ಮತ್ತು ಡೊನೆಟ್ಸ್ಕ್ ಹಾಗೂ ಉಕ್ರೇನಿನ ಗಡಿಭಾಗಗಳಲ್ಲೂ ವಿಜಯಶಾಲಿಯಾಗಿದ್ದಾರೆ ಎನ್ನಲಾಗಿದೆ.

ಗೆಲುವಿನ ನಂತರ ಚುನಾವಣಾ ಪ್ರಧಾನ ಕಛೇರಿಗೆ ಆಗಮಿಸಿದ ಪುಟಿನ್ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು ಹಾಗೂ ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಂಧರ್ಭದಲ್ಲಿ ತಮಗೆ ಮತ ಚಲಾಯಿಸಿದ ರಷ್ಯಾದ ಜನತೆಗೂ ಧನ್ಯವಾದ ತಿಳಿಸಿದರು.

You might also like
Leave A Reply

Your email address will not be published.