ರಷ್ಯಾದಲ್ಲಿ ಕೊನೆಗಾಣದ ರಾಜಕೀಯ ನಾಯಕರ ಹತ್ಯೆ

ರಷ್ಯಾದ ಯಮಲೋ-ನೆನೆಟ್ಸ್ ಪ್ರಾಂತ್ಯದ ಜೈಲಿನಲ್ಲಿ ಸೆರೆವಾಸದಲ್ಲಿದ್ದಾಗ ರಷ್ಯಾದ ವಿರೋಧ ಪಕ್ಷದ ನಾಯಕರಾದ ಅಲೆಕ್ಸಿ ನವಲ್ನಿ ಅವರು ಮೃತಪಟ್ಟಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ವಾಕ್‌ನ ನಂತರ ಅಸ್ವಸ್ಥರಾಗಿ ಕುಸಿದ ಅವರು ತಕ್ಷಣವೇ ಪ್ರಜ್ಞೆ ಕಳೆದುಕೊಂಡರು. ಕೂಡಲೇ ಆ್ಯಂಬುಲೆನ್ಸ್ ಬರಹೇಳಿ, ವೈದ್ಯಕೀಯ ಚಿಕಿತ್ಸೆಯನ್ನು ತ್ವರಿತವಾಗಿ ನೀಡಲಾಯಿತು. ಅವರನ್ನು ಉಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನ ಮಾಡಲಾಯಿತು. ಆದರೂ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ತೋರಲಿಲ್ಲ ಹಾಗೂ ವೈದ್ಯಾಧಿಕಾರಿಗಳು ಸಾವನ್ನು ಖಚಿತಪಡಿಸಿದ್ದಾರೆ.‌ ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ ಹಾಗೂ ಪ್ರಸ್ತುತ ತನಿಖೆಯಲ್ಲಿವೆ ಎಂದು ವರದಿ ಮಾಡಲಾಗಿದೆ.

ಕಳೆದ ಡಿಸೆಂಬರ್ ನಲ್ಲಿ ಅಲೆಕ್ಸಿ ನವಲ್ನಿಯನ್ನು ಮಾಸ್ಕೊದಿಂದ ಸುಮಾರು 2000 km ದೂರದಲ್ಲಿರುವ ಖಾರ್ಪ್‌ನ ಉತ್ತರದಲ್ಲಿರುವ ಪೋಲಾರ್ ವುಲ್ಫ್ ಎಂದು ಕರೆಯಲ್ಪಡುವ IK-3 ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು. ರಷ್ಯಾದಲ್ಲಿ ಗಂಭೀರವಾದ ಅಪರಾಧಗಳಿಗೆ ಒಳಗಾಗುವ ವ್ಯಕ್ತಿಗಳಿಗೆ ನೀಡುವ ಜೈಲು ವಾಸಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗುತ್ತದೆ.

Nonstop Assassination of Political Leaders in Russia

ಇತ್ತೀಚೆಗೆ ವಿಡಿಯೋ ಕರೆ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಅಲೆಕ್ಸಿ ಅವರು ಉತ್ಸಾಹದಲ್ಲಿದ್ದಂತೆ ತೋರುತ್ತಿತ್ತು. ತಾನು ಇನ್ನು ಯಾವುದೇ ಕ್ರಿಸ್ಮಸ್ ಮೇಲ್ ಅನ್ನು ಸ್ವೀಕರಿಸಿಲ್ಲ। ಬಹುಶಃ ಅದು ತುಂಬಾ ದೂರದ ವಿಷಯ ಎಂದು ಹಾಸ್ಯಮಯವಾಗಿ ಮಾತನಾಡಿದ್ದರು.

ಈ ಸುದ್ದಿಗೆ ಪ್ರತಿಕ್ರಿಯೆಯಾಗಿ ಅಲೆಕ್ಸಿ‌ ಅವರ ಸಾವಿನ ಕಾರಣದ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ದೊರೆತಿಲ್ಲ. ಹಾಗೂ ಅಲ್ಲಿನ ಅಂದರೆ ಅವರ ಜೈಲು ಸೇವೆಯ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಅಲ್ಲದೆ ಅವರ ಮರಣದ ಬಗ್ಗೆ ಪುಟಿನ್ ಅವರಿಗೂ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

You might also like
Leave A Reply

Your email address will not be published.