ದಾಳಿಕೋರ ಮೊಘಲರಿಂದ ತನ್ನ ಪೂರ್ವಜರ ಮತಾಂತರ – ಹಿಂದೂ ಧರ್ಮಕ್ಕೆ ಮರಳಿ‌ ಮೀನಾಕ್ಷಿಯಾದ ನಸೀಮಾ

ಎಲ್ಲೆಂದರಲ್ಲಿ ಲವ್ ಜಿಹಾದ್‌ದೇ ಸುದ್ದಿಯಾಗುತ್ತಿರುವಾಗ ಉತ್ತರ ಪ್ರದೇಶದ ಬರೇಲಿಯಲ್ಲಿ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಯುವತಿಯೋರ್ವಳು ಮತಾಂತರಗೊಂಡ ಘಟನೆ ನಡೆದಿದೆ. ಬಿಹಾರದ ಪೂರ್ಣಿಯ ನಿವಾಸಿಯಾದ ನಸೀಮಾ ಖಾತೂನ್ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡವರು. ಫೆಬ್ರವರಿ 16ರಂದು ಬರೇಲಿಯ ಅಗಸ್ತ್ಯಮುನಿ ಆಶ್ರಮದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ತನ್ನ ಸ್ನೇಹಿತ ಮಹೇಶ್ ಶರ್ಮ ಅವರನ್ನು ಸೀಮಾ ಖಾತೂನ್ ಮೀನಾಕ್ಷಿಯಾಗಿ ಪರಿವರ್ತನೆಗೊಂಡು ಮತಾಂತರಗೊಂಡು ಹಿಂದೂ ಧರ್ಮದ ವಿಧಿ ವಿಧಾನದ ಪ್ರಕಾರ ಮದುವೆಯಾಗಿದ್ದಾರೆ. ಇನ್ನು ಮೊದಲ ಪತಿಯಿಂದ ಆರು ತಿಂಗಳ ಹಿಂದೆ ತಲಾಖ್ ಪಡೆದ ನಸೀಮಾ ವಿಚ್ಛೇದನದ ನಂತರ ಇಸ್ಲಾಂ ಧರ್ಮದಂತೆ ಹಲಾಲ ಪ್ರಕ್ರಿಯೆಗೆ ಒಳಗಾಗುವಂತೆ ಪತಿ ಮತ್ತು ಅತ್ತೆಯಿಂದ ಒತ್ತಡವನ್ನು ಎದುರಿಸುತ್ತಿದ್ದರು ಹಾಗೂ ಆಕೆ ಕಳೆದ ಆರು ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸವಿದ್ದು ಮೊದಲಿನ ಪತಿಯಿಂದ ಈಕೆಗೆ ಒಂದುವರೆ ವರ್ಷದ ಮಗಳು ಇದ್ದಾಳೆ.

ನಸೀಮಾ ಹಾಗೂ ಮಹೇಶ್ ಅವರು ಸಾಮಾಜಿಕ ಜಾಲತಾಣ ಅಂದರೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಹೊಂದಿದ್ದು, ಮಹೇಶ್ ಅವರು ಉತ್ತರಪ್ರದೇಶದ ಬರೇಲಿಯ ನಿವಾಸಿ. ಆರಂಭಿಕ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೇಮವಾಗಿ ನಂತರ ಮದುವೆಯಾಗಲು ಅವರು ನಿರ್ಧರಿಸಿದರು. ಮದುವೆಗಾಗಿ ನಸೀಮಾ ಖಾತುನ್, ಪೂರ್ಣಿಯಾದಿಂದ ಬರೇಲಿಗೆ ಪ್ರಯಾಣ ಬೆಳೆಸಿದರು ಹಾಗೂ ಜನವರಿ 10, 2024 ರಂದು ತನು ಮತಾಂತರಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೆ ಅರ್ಜಿಯನ್ನು ಕೂಡ ಸಲ್ಲಿಸಿದ್ದಳು. 20 ವರ್ಷ ವಯಸ್ಸಿನ ಈಕೆ, ತನಗೆ ಯಾವುದು ಪ್ರಯೋಜನಕಾರಿ ಮತ್ತು ಯಾವುದು ಹಾನಿಕಾರಕ ಎಂಬ ಆಲೋಚನೆ ಮಾಡುವ ಸಂಪೂರ್ಣ ಸಾಮರ್ಥ್ಯವಿದೆ ಹಾಗೂ ಆದ್ದರಿಂದ ದಯವಿಟ್ಟು ತನ್ನ ಅರ್ಜಿಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಿನಂತಿಸಿಕೊಂಡಿದ್ದರು. ತನ್ನ ಅರ್ಜಿಯಲ್ಲಿ ನಸೀಮಾರವರು, ‘ದಾಳಿಕೋರರಿಂದಾಗಿ ತನ್ನ ಪೂರ್ವಜರು ಇಸ್ಲಾಂಗೆ ಮತಾಂತರಗೊಂಡಿದ್ದರು ಆದರೆ ನನ್ನ ನಂಬಿಕೆ ಇಂದಿಗೂ ಕೂಡ ಹಿಂದೂ ಸನಾತನ ಧರ್ಮದಲ್ಲಿಯೇ ಇದೆ. ನಾನು ಹಿಂದೂ ದೇವತೆಗಳನ್ನು ಪೂಜಿಸುತ್ತೇನೆ. ನನ್ನ ಹಿಂದಿನ ಧರ್ಮಕ್ಕೆ ಅಂದರೆ ಹಿಂದೂ ಧರ್ಮಕ್ಕೆ ಹಿಂತಿರುಗಲು ಬಯಸುತ್ತೇನೆ’ ಎಂದು ಉಲ್ಲೇಖಿಸಿದ್ದಾರೆ.

Meenakshi Naseema reverted to Hinduism – the conversion of her ancestors by the invading Mughals

ಮತಾಂತರ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡ ಬಳಿಕವೇ ಈಕೆ ಬರೇಲಿಯ ಅಗಸ್ತ್ಯ ಮುನಿ ಆಶ್ರಮ ತಲುಪಿ ಅವರ ಘರ್ ವಾಪಸಿ ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ನಸೀಮಾ ಅವರಿಗೆ ಮೀನಾಕ್ಷಿ ಎಂಬ ಹೊಸ ಹೆಸರು ಬಂದಿದ್ದು, ತದನಂತರವಷ್ಟೇ ತನ್ನ ಸ್ನೇಹಿತ ಮಹೇಶ್ ಶರ್ಮರನ್ನು ಮೀನಾಕ್ಷಿ ಎಂಬ ಹೆಸರಿನಿಂದ ಮದುವೆಯಾದಳು. ನಸೀಮಾ ಈಗ ತನ್ನ ಮನೆಯವರಿಗೆ ಹೆದರಿ, ಬರೇಲಿಯ ಎಸ್‌ಎಸ್‌ಪಿ ಗೆ ಪತ್ರವನ್ನು ಬರೆದಿದ್ದು, ಪತ್ರದಲ್ಲಿ ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾಗಿದ್ದು ತನ್ನ ಕುಟುಂಬಕ್ಕೆ ಇಷ್ಟವಿಲ್ಲ ಹಾಗೂ ಅವರು ನನ್ನ ಪತಿ ಮತ್ತು ಅತ್ತೆಯ ಮನೆಯವರಿಗೆ ಹಾನಿ ಉಂಟು‌ಮಾಡಬಹುದು ಅಥವಾ ನಮ್ಮನ್ನು ಕೊಲ್ಲಬಹುದು ಹಾಗಾಗಿ ದಯವಿಟ್ಟು ನಮಗೆ ರಕ್ಷಣೆ ನೀಡಿ ಎಂದು ಕೇಳಿಕೊಂಡಿದ್ದಾರೆ.

ಇನ್ನು ಈ ಘಟನೆಯ ಕುರಿತು OpIndia ಸುದ್ದಿ ಸಂಸ್ಥೆಯು ವಿಸ್ತಾರವಾಗಿ ವಿವರಿಸಿದ್ದು, ನಸೀಮಾ ಅವರ ಮತಾಂತರದ ಕೆಲದಿನಗಳ ಹಿಂದೆ ಉತ್ತರ ಪ್ರದೇಶದ ಶಾಹಿದ ಎಂಬ ಮುಸ್ಲಿಂ ಮಹಿಳೆ ತನ್ನ ಗೆಳೆಯ ಓಂ ಪ್ರಕಾಶ್ ಅವರನ್ನು ವಿವಾಹವಾಗಲು ಮತಾಂತರಗೊಂಡಿದ್ದರು. ಮತಾಂತರಗೊಂಡ ಶಾಹಿದ ಅವರನ್ನು ಈಗ ಶಾರದಾ ಎಂದು ಕರೆಯಲಾಗುತ್ತದೆ ಹಾಗೂ ಮೊದಲ ಪತಿಯಿಂದ ಶಾಹಿದ ಅವರು ಇಬ್ಬರು ಪುತ್ರರನ್ನು ಪಡೆದಿದ್ದು, ಈಗ ಅವರು ಕೂಡ ಹಿಂದೂ ಧರ್ಮದ ಪ್ರಕಾರ ಬದುಕಲಿದ್ದಾರೆ ಎಂದು ವರದಿ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಶಾಹಿದಾರವರಿಗೆ ಹಲವಾರು ಹಿಂದೂ ಸಂಘಟನೆಗಳು ಸಹಾಯ ಮಾಡಿವೆ ಎಂಬುದು ತಿಳಿದು ಬಂದಿದೆ.

You might also like
Leave A Reply

Your email address will not be published.