ಭಾರತದ ಪುಟ್ಟ ಗ್ರಾಮದಲ್ಲಿ ಹುದುಗಿರುವ ಕೌತುಕ – ಇತಿಹಾಸಕಾರರ ಅಚ್ಚರಿ

ಭಾರತದ ಪುಟ್ಟ ಗ್ರಾಮದಲ್ಲಿ ಕ್ರಿ.ಪೂ 2 ಸಾವಿರದ ಕಾಲದ ಯೋಧರ ಅವಶೇಷಗಳು ಪತ್ತೆಯಾಗಿದ್ದು, ಜಗತ್ತಿನ ಇತಿಹಾಸ ಆಸಕ್ತರಿಗೆ ಅಚ್ಚರಿಯಾಗಿತ್ತು. ಒಂದು ಪುಟ್ಟ ಗ್ರಾಮದಲ್ಲಿ ಇಂತಹದೊಂದು ಅವಶೇಷಗಳು ನಡೆಯುತ್ತದ? ಯಾಕೆ ಆ ಗ್ರಾಮದ ಜನರೆ ನಮ್ಮೂರಲ್ಲೂ ಇಂತಹದೊಂದು ಅಚ್ಚರಿ ನಡೆಯುತ್ತಾ ಎಂಬುದನ್ನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಪ್ರಸ್ತುತ ಈ ಪುಟ್ಟ ಗ್ರಾಮ ಇಡೀ ಜಗತ್ತಿನ ಇತಿಹಾಸ ಆಸಕ್ತರಿಗೆ ಕೌತುಕದ ಕೇಂದ್ರಬಿಂದುವಾಗಿದೆ. ಯಾವುದದು ಗ್ರಾಮ? ಅಲ್ಲಿ ನಡೆದ ಘಟನೆಯಾದರು ಯಾವುದು? ಈ ಕುರಿತಾದ ಮಾಹಿತಿಗಾಗಿ ಈ ಸ್ಟೋರಿ ಓದಿ!

ಉತ್ತರ ಪ್ರದೇಶದ ಬಾಗ್’ಪತ್ ಜಿಲ್ಲೆಯ ಸಿನೌಲಿ ನವದೆಹಲಿಯಿಂದ 70 ಕಿಮೀ ದೂರದಲ್ಲಿ ಗಂಗಾ ಮತ್ತು ಯಮುನಾ ನದಿಗಳ ಗ್ರಾಮ. ಈ ಊರಲ್ಲಿ ಕ್ರಿ.ಪೂ 2 ಸಾವಿರದ ಕಾಲದ ಯೋಧರ ಅವಶೇಷಗಳು ಪತ್ತೆಯಾಗಿ ಜಗತಿಗೆ ಅಚ್ಚರಿಮೂಡಿಸಿದೆ.

ಭಾರತದ ಅತೀ ದೊಡ್ಡ ಪುರಾತನ ಸಮಾಧಿಗಳಿರುವ ತಾಣ ಎಂದೇ ಖ್ಯಾತಿ ಪಡೆದ ಸಿನೌಲಿ ಬರೋಬ್ಬರಿ ಸುಮಾರು 25 ವರ್ಷಗಳ ಹಿಂದೆ ಉತ್ಖನ ಶುರುವಾಗಿ ಕೇವಲ ಒಂದು ವರ್ಷದೊಳಗೆ 116 ಸಮಾಧಿ ಸ್ಥಳಗಳನ್ನು ಕಂಡುಹಿಡಿಯಲಾಗಿತ್ತು. ಇದರಲ್ಲೇನು ವಿಶೇಷ ಅಂತೀರ?

ಸಿನೌಲಿಯ ಪ್ರತೀ ಸಮಾಧಿಗೆ ಭೂಗತ ಕೋಣೆಯನ್ನು ಅಳವಡಿಸಲಾಗಿತ್ತು!

ಹೌದು. ಸಿನೌಲಿಯ ಸಮಾಧಿ ಸ್ಥಳ ಸಿಂಧೂ ಕಣಿವೆಯ ನಾಗರಿಕತೆಯಿಂದ ಭಿನ್ನವಾಗಿದೆ. ಇಲ್ಲಿ ಬಳಸಲಾದ ಶವಪೆಟ್ಟಿಗೆಗಳಿಗೆ 4 ಕಾಲುಗಳಿವೆ. ಹಾಗೂ ಭೂಗತ ಕೋಣೆಗಳನ್ನು ಹೊಂದಿದೆ. ಸಮಾಧಿಗಳಲ್ಲಿ ದೇಹದ ಬಳಿ ವ್ಯವಸ್ಥಿತವಾಗಿ ಜೋಡಿಸಲಾದ ಹೂದಾನಿಗಳು, ಬಟ್ಟಲುಗಳು ಮತ್ತು ಮಡಕೆಗಳು ಕಂಡುಬರುತ್ತವೆ. ಆ ಮಡಿಕೆಗಳಲ್ಲಿ ಅಕ್ಕಿ ಇದೆ. ಸೈನಿಕರ ಶವಗಳ ಜೊತೆಗೆ ಹೂಳಲಾದ ಈ ವಸ್ತುಗಳು ಪ್ರಾಚ್ಯವಸ್ತು ಪರಿಣಿತರ ಗಮನಸೆಳೆದಿರುವುದು ನಮಗೂ ಅಚ್ಚರಿಯೇ!

ಉತ್ಖನದ ನಂತರ ಒಂದು ಶವಪೆಟ್ಟಿಗೆಯಲ್ಲಿ, 8 ಮಾನವ ರೂಪದ ಆಕೃತಿಗಳು ಕಂಡುಬಂದಿವೆ. ಅಚ್ಚರಿಯೆಂದರೆ ಇವು ವೈದಿಕ ಸಂಸ್ಕೃತಿಯನ್ನು ಹೋಲುತ್ತವೆಯೇ ಹೊರತು ಸಿಂಧೂ ಕಣಿವೆಯ ಸಂಸ್ಕೃತಿಯಲ್ಲ. ಅಂದರೆ ಸಿಂಧೂ ಸಂಸ್ಕೃತಿಗಿಂತ ಮುನ್ನವೇ ವೈದಿಕ ಸಂಸ್ಕೃತಿ ರೂಢಿಯಲ್ಲಿತ್ತು ಎಂಬುದು ತಿಳಿದುಬರುತ್ತದೆ.

A wonder embedded in a small village in India - a surprise for historians

ಪುಟ್ಟ ಗ್ರಾಮ ವಿಸಿಟ್ ತಾಣವಾಗಿ ಬದಲಾದ ಬಗೆ ಹೇಗೆ?

ಸುಮಾರು 2006 ರಲ್ಲಿ ಒಂದುಮಟ್ಟಿಗೆ ಉತ್ಖನನ ಮುಗಿದಿತ್ತು. ತದನಂತರ ದಿನಗಳು ತಿಂಗಳಾಗಿ, ವರ್ಷಗಳಾಗಿ 2018ರವರೆಗೂ ಸಿನೌಲಿಯಲ್ಲಿ ಅಂತಹ ಮಹತ್ವದ ಐತಿಹಾಸಿಕ ಹಿನ್ನೆಲೆಯ ಯಾವ ಘಟನೆಯೂ ನಡೆದಿರಲಿಲ್ಲ. ಆದರೆ 2018ರಲ್ಲಿ ನಡೆದ ಆ ಘಟನೆ ಮಾತ್ರ ಎಲ್ಲರನ್ನೊಮ್ಮೆ ಬೆಚ್ಚಿಬೀಳಿಸುತ್ತದೆ. ಏನದು?

ಸಿನೌಲಿಯ ರೈತರೊಬ್ಬರು ಹೊಲವನ್ನು ಉಳುಮೆ ಮಾಡುತ್ತಿರುವಾಗ ಅವರ ನೇಗಿಲಿಗೆ ಯಾವುದೋ ವಸ್ತುವೊಂದು ಬಡಿದ ಶಬ್ದವಾಗುತ್ತದೆ. ಸ್ವಲ್ಪ ಮಣ್ಣು ಅಗೆದು ನೋಡಿದ ಅವರಿಗೆ ಸಿಕ್ಕಿದ್ದು ತಾಮ್ರದ ತುಂಡುಗಳು. ಇದನ್ನು ಪ್ರಾಚ್ಯವಸ್ತು ಇಲಾಖೆಗೆ ತಿಳಿಸುತ್ತಾರೆ.

ತಾಮ್ರದ ಪ್ರಾಚೀನ ವಸ್ತುಗಳು ಪತ್ತೆಯಾದ ಸ್ಥಳದಿಂದ ಎ.ಎಸ್.ಐ ಅಗೆಯಲು ಪ್ರಾರಂಭಿಸಿತು. ಈ ವೇಳೆ ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದಾದ ಕುದುರೆ ಎಳೆಯುವ ರಥಗಳು ಪತ್ತೆಯಾದವು. ಈ ರಥಗಳು ಒಂದು ಸಣ್ಣ ನೊಗಕ್ಕೆ ಉದ್ದವಾದ ಕಂಬದ ಮೂಲಕ ಜೋಡಿಸಲಾದ ಸ್ಥಿರವಾದ ಪಾದವನ್ನು ಹೊಂದಿರುತ್ತದೆ. ಈ ರಥಗಳು ಈ ಕಾಲದಲ್ಲಿ ಬಳಕೆಯಲ್ಲಿರುವ ರಥಗಳ ಹೋಲಿಕೆಯನ್ನೇ ಹೊಂದಿದ್ದವು. ಅಲ್ಲದೇ ಪ್ರಾಣಿಗಳು ಎಳೆಯುವಂತ ವಿನ್ಯಾಸವು ಇತ್ತು. ಅಲ್ಲದೇ ತಾಮ್ರದ ಖಡ್ಗಗಳು, ಯುದ್ಧ ಗುರಾಣಿಗಳು ಮುಂತಾದ ಅನೇಕ ಆಯುಧಗಳು, ಕಾಲುಗಳಿರುವ ಶವಪೆಟ್ಟಿಗೆಗಳು, ಪ್ರಾಣಿಗ

A wonder embedded in a small village in India - a surprise for historians

ಳನ್ನು ನಿಯಂತ್ರಣದಲ್ಲಿಡಲು ಬಳಸುವ ಛಾವಟಿಯು ದೊರೆಯುತ್ತವೆ.

ಪ್ರಾಚ್ಯವಸ್ತು ಇಲಾಖೆ ಹೇಳಿದ್ದೇನು?

ಇದನ್ನೆಲ್ಲ ನೋಡುತ್ತಿದ್ದರೆ, ಇಲ್ಲಿನ ನಿವಾಸಿಗಳು ಆ ಕಾಲದಲ್ಲೇ ಛಾವಟಿಗಳ ಮೂಲಕ ಪ್ರಾಣಿಗಳನ್ನು ನಿಯಂತ್ರಸಿವುದ್ದನ್ನು ಕಲಿತ್ತಿದ್ದರು. ಅಚ್ಚರಿಯೆಂದರೆ, ಪುರುಷ ಯೋಧರ ಸಮಾಧಿಯೊಂದಿಗೆ ಮಹಿಳಾ ಯೋಧರ ಸಮಾಧಿಯು ಕಂಡುಬಂದಿದೆ. ಅಲ್ಲದೇ ಈ ಪ್ರದೇಶವು ಫಲವತ್ತಾಗಿದ್ದು ಕೃಷಿಗೆ ಸೂಕ್ತವಾಗಿದೆ. ಇಲ್ಲಿ ದೊಡ್ಡ ಸಾಮ್ರಾಜ್ಯದ ಅಸ್ತಿತ್ವದ ಸುಳಿವು ಇರುವುದು ಕಂಡುಬರುತ್ತಿದೆ ಎಂದು ಪ್ರಾಚ್ಯವಸ್ತು ಇಲಾಖೆ ತಿಳಿಸಿದೆ.

You might also like
Leave A Reply

Your email address will not be published.