KSRTC ಹೆಸರು ಕನ್ನಡಿಗರಿಗೆ ಸ್ವಂತ – ಕೇರಳದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

“ಕೆಎಸ್ಆರ್ಟಿಸಿ” ಎಂಬುದು ಬರೀ ಹೆಸರಲ್ಲ ಅಥವಾ ಸರ್ಕಾರಿ ನಿಗಮವಲ್ಲ. ಕನ್ನಡಿಗರಿಗೆ ಅದೊಂದು ಟ್ರೇಡ್ ಮಾರ್ಕ್ ಆಗಿ ಹೋಗಿದೆ. ಅದಾಗ್ಯೂ ಪ್ರಸ್ತುತ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ತುಸು ಹೆಚ್ಚೇ ಖ್ಯಾತಿಯಾಗಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎರಡು ಇಂಗ್ಲೀಷ್ ಬಳಕೆಯಲ್ಲಿ ಕೆಎಸ್ಆರ್ಟಿಸಿ (KSRTC) ಎಂದೇ ಬರುತ್ತದೆ. ಈ ಹಿನ್ನೆಲೆ ಎರಡೂ ಸಾರಿಗೆ ಸಂಸ್ಥೆಗಳ ನಡುವೆ ವಿವಾದ ಉಂಟಾಗಿದ್ದು, ಕೆಎಸ್ಆರ್ಟಿಸಿ ಬ್ರ್ಯಾಂಡ್ ನಮಗೆ ಬೇಕು ಎಂದು ಇವೆರೆಡು ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಹೆಸರು ಬಳಕೆಗೆ ಸಂಬಂಧಿಸಿದಂತೆ ಅನೇಕ ರೀತಿಯ ಚರ್ಚೆ, ವಾದ- ವಿವಾದಗಳು ನಡೆದಿತ್ತು.

ಏನಿದು ಕರ್ನಾಟಕ ಮತ್ತು ಕೇರಳ ಸಾರಿಗೆ ಸಂಸ್ಥೆಗಳ ನಡುವಿನ ವಿವಾದ?

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈಯಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ, ತಿರುವಾಂಕೂರು ರಾಜ್ಯ ಸಾರಿಗೆ 1937 ರಿಂದಲೇ ಇದ್ದು, ಕೇರಳ ರಾಜ್ಯ ಉದಯವಾದ ಮೇಲೆ 1965 ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಯಿತು.
ಕೆಎಸ್ಆರ್ಟಿಸಿ ಲೋಗೊ ಬಳಕೆಯು ಆರಂಭವಾಯಿತು. ಕರ್ನಾಟಕ ರಾಜ್ಯವೂ ಕೆಎಸ್ಆರ್ಟಿಸಿ ಎಂದೇ ಬಳಸುತ್ತಿದೆ ಎಂದು ಆಕ್ಷೇಪಿಸಿತ್ತು. ಹಾಗೂ 42 ವರ್ಷಗಳಿಂದ ಕೇರಳ ರಾಜ್ಯವು ಕೆಎಸ್ಆರ್ಟಿಸಿ ಎಂದೇ ಬಳಸುತ್ತಿರುವುದರಿಂದ ಕರ್ನಾಟಕ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ಅಮಾನ್ಯಗೊಳಿಸಬೇಕೆಂದು ವಾದಿಸಿತ್ತು.

ಕರ್ನಾಟಕ ಲೋಗೊದಲ್ಲಿ ‘ಗಂಡಭೇರುಂಡ’ ಗುರುತು ಬಳಕೆಗೆ ಹಕ್ಕುಸ್ವಾಮ್ಯ ಪಡೆಯಲಾಗಿದೆ. ಕೇರಳದ ಲೋಗೊದಲ್ಲಿ ‘ಆನೆ’ ಗುರುತು ಇದ್ದು, ಪ್ರತ್ಯೇಕ ಟ್ರೇಡ್ ಮಾರ್ಕ್ ಹೊಂದಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಾದಿಸಿತ್ತು.
ಇವರ ವಾದ-ವಿವಾದಗಳನ್ನು ಗಮನಿಸಿದ ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಮಂಡಳಿಯನ್ನು ರದ್ದುಗೊಳಿಸಿ, ಅಲ್ಲಿರುವ ಪ್ರಕರಣಗಳನ್ನು ಮದ್ರಾಸ್ ಹೈಕೋರ್ಟ್ ಗೆ ವರ್ಗಾಯಿಸಿತ್ತು.

ವಿಶೇಷ ಪ್ರಕರಣ ಎಂದು ಪರಿಗಣಿಸಿದ ಮದ್ರಾಸ್ ಹೈಕೋರ್ಟ್:

ಉಭಯ ರಾಜ್ಯಗಳ ವಾದ-ವಿವಾದಗಳನ್ನು ಆಲಿಸಿದ ಮದ್ರಾಸ್ ಹೈಕೋರ್ಟ್ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿತು. ನಂತರ ಕೇರಳದ ಅರ್ಜಿಯನ್ನು ಡಿ.12 ರಂದು ವಜಾಗೊಳಿಸಿತು. ಈ ಮೂಲಕ ಕರ್ನಾಟಕ ವಾದವನ್ನು ಎತ್ತಿ ಹಿಡಿಯಿತು.

50 ವರ್ಷಗಳ ಹಿಂದೆಯೇ ಅಗತ್ಯ ದಾಖಲೆ ಪಡೆದುಕೊಂಡ ಕರ್ನಾಟಕ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್ಆರ್ಟಿಸಿ’ ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣಪತ್ರವನ್ನು ನೀಡಲು ಅರ್ಜಿ ಸಲ್ಲಿಸಿದ್ದು ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013 ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಸಂಸ್ಥೆಯು ದಿನಾಂಕ 1.11.1973 ಯಿಂದ ಬಳಸುತ್ತಿರುವುದನ್ನು ಮಂಜೂರು ಮಾಡಲಾಗಿರುತ್ತದೆ. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್, ರವರಿಂದ ‘KSRTC’ ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗಾಗಿ ಕಾಪಿ ರೈಟ್ ಅನ್ನು ಸಹ ಪಡೆಯಲಾಗಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸಿ ಸಾಕ್ಷ್ಯಗಳನ್ನು ನೀಡಿದ್ದರು.

ಕೇರಳದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್!

ಇದಾದ ನಂತರ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಕೇರಳ ಸಾರಿಗೆ ನಿಗಮದಿಂದ ಪ್ರಶ್ನೆ ಮಾಡಲಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 42 ವರ್ಷಗಳಿಂದ ಕರ್ನಾಟಕ ರಸ್ತೆ ಸಾರಿಗೆ ನಿಮಗದಿಂದ (RTC) ಟ್ರೇಡ್ ಮಾರ್ಕ್ ಅನ್ನು ಬಳಸುವುದರ ಬಗ್ಗೆ ತಿಳಿದಿರುತ್ತದೆ ಆದ್ದರಿಂದ KSRTCಯು ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ನೀವು (ಕೇರಳದ ರಸ್ತೆ ಸಾರಿಗೆ ನಿಗಮ) ಅರ್ಹರಾಗಿರುವುದಿಲ್ಲ ಎಂದು KSRTC ವಾದಿಸಿದೆ.

ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗೆ ಸಿಕ್ಕ ಗೆಲವು:

ಕೇರಳ ಸಾರಿಗೆ ಸಂಸ್ಥೆ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಗಳು ‘ಕೆಎಸ್ಆರ್ಟಿಸಿ’ ಹೆಸರು ಬಳಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ನಲ್ಲಿ ಇದೀಗ ವಜಾಗೊಳಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೆಸರು ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಕೇರಳ ಸರ್ಕಾರದ ರಸ್ತೆ ಸಾರಿಗೆ ನಿಗಮವು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಕರ್ನಾಟಕ ರಾಜ್ಯದ ಸಾರಿಗೆ ಸಂಸ್ಥೆಗೆ ಗೆಲುವು ಸಿಕ್ಕಿದೆ.

“ಕೇರಳ ರಾಜ್ಯದವರೂ ‘ಕೆಎಸ್ಆರ್ಟಿಸಿ’ ಎಂದೇ ಬಳಕೆ ಮಾಡುವುದನ್ನು ನಾವು ಎಂದಿಗೂ ವಿರೋಧಿಸಿಲ್ಲ. ಖುದ್ದಾಗಿ ಕೇರಳ ರಾಜ್ಯವೇ ಆಕ್ಷೇಪಣೆ ಸಲ್ಲಿಸಿದ್ದು, ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಕೇರಳ ರಾಜ್ಯವೂ ಇಲ್ಲಿಯವರೆಗೆ ಇದೇ ಹೆಸರನ್ನೆ ಬಳಸಿದ್ದು, ಇನ್ನೂ ಮುಂದೆಯೂ ಬಳಸುವುದಾದರೆ ಕಾನೂನಾತ್ಮಕವಾಗಿ ಯಾವುದೇ ಅಭ್ಯಂತರವಿಲ್ಲ”

ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಅಧಿಕಾರಿಗಳು

You might also like
Leave A Reply

Your email address will not be published.