ಟಿಪ್ಪುವಿನ ಹೆಸರನ್ನು ಶೌಚಾಲಯಗಳಿಗೆ ಇಡಿ – ಬಸನಗೌಡ ಪಾಟೀಲ್ ಯತ್ನಾಳ್!

ಟಿಪ್ಪು ಸುಲ್ತಾನ್ʼನ ಹೆಸರನ್ನು ಶೌಚಾಲಯಗಳಿಗೆ ಇಡಬೇಕೇ ಹೊರತು, ವಿಮಾನ ನಿಲ್ದಾಣಕ್ಕಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರಿಸಿದ ಪ್ರಸಂಗ ಬೆಳಗಾವಿ ಅಧಿವೇಶನದ ಕೊನೆಯ ದಿನ ನಡೆಯಿತು.

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆದು, ಇದೇ ಡಿಸೆಂಬರ್ 15ರಂದು ಮುಕ್ತಾಯವಾಗಿತು. ಕೊನೆಯ ದಿನದ ಅಧಿವೇಶನದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯನವರು ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪುವಿನ ಹೆಸರಿಡಬೇಕು ಎಂದು ಪ್ರಸ್ತಾಪಿಸಿದ ಬೆನ್ನಲ್ಲೇ, ತಿರುಗೇಟು ನೀಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ನೂರಾರು ದೇವಸ್ಥಾನಗಳನ್ನು ಧ್ವಂಸ ಮಾಡಿದ ದಾಳಿಕೋರನ ಹೆಸರನ್ನು ಶೌಚಾಲಯಗಳಿಗೆ ಇಡಬೇಕೇ ಹೊರತು ವಿಮಾನ ನಿಲ್ದಾಣಕ್ಕಲ್ಲ. ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಇಡಬೇಕು, ಅದೇ ಸೂಕ್ತವಾದುದ್ದು ಎಂದಿದ್ದಾರೆ.

ಇದೇ ಸಂಧರ್ಭದಲ್ಲಿ, ನನಗೆ ಅನುಮತಿ ನೀಡಿದರೆ ಸದನದಲ್ಲಿ ಇರುವ ಸಾವರ್ಕರ್ ಫೋಟೋವನ್ನು ತೆಗೆಸುತ್ತೇನೆ ಎಂದಿದ್ದ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಖಂಡಿಸಿದ ಯತ್ನಾಳ್, 10 ಪ್ರಿಯಾಂಕ್ ಖರ್ಗೆಗಳು ಬಂದರೂ ಸಾವರ್ಕರ್ ಅವರ ಫೋಟೋವನ್ನು ತೆಗೆಯಲು ಆಗುವುದಿಲ್ಲ ಒಂದು ವೇಳೆ ಸಾವರ್ಕರ್ ಫೋಟೋವನ್ನು ತೆಗೆದರೆ ಜವಹರಲಾಲ್ ನೆಹರೂ ಅವರ ಫೋಟೋವನ್ನೂ ಕೂಡಾ ತೆಗೆಯಲಾಗುವುದು ಎಂದು ತಿರುಗೇಟು ನೀಡಿದರು.

ಯತ್ನಾಳ್ ಹೇಳಿಕೆಗೆ ಸಾರ್ವಜನಿಕ ವಲಯದ ಕೆಲವರಿಂದ ಟೀಕೆ ವ್ಯಕ್ತವಾಗಿದ್ದರೂ, ಸಾಕಷ್ಟು ಜನ ಈ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಇನ್ನು, ಫೆಬ್ರವರಿ 2023ರಲ್ಲಿ ನಡೆದ ಚುನಾವಣಾ ರ‍್ಯಾಲಿಯೊಂದರಲ್ಲಿ ‘ನಿಮ್ಮಮತ ಕ್ಷೇತ್ರದಲ್ಲಿ 1 ಲಕ್ಷ ಟಿಪ್ಪುಸುಲ್ತಾನ್ (ಮುಸ್ಲಿಂ ಮತದಾರರಿದ್ದಾರೆ) ಗಳಿದ್ದಾರೆ, ಹಾಗಿದ್ದೂ, ಶಿವಾಜಿ ಮಹಾರಾಜರ ವಂಶಸ್ಥರು ಬಿಜಾಪುರ ಕ್ಷೇತ್ರದಿಂದ ಹೇಗೆ ಗೆಲ್ಲುತ್ತೀರಿ’ ಎಂದು ಎಲ್ಲಾ ಶಾಸಕರು ನನ್ನ ಕೇಳುತ್ತಾರೆ. ಆದರೆ ಇಲ್ಲಿ ಟಿಪ್ಪುವಿನ ಅನುಯಾಯಿಗಳು ಯಾರೂ ಗೆಲ್ಲುವುದಿಲ್ಲ, ಗೆಲ್ಲುವುದು ಶಿವಾಜಿ ಮಹಾರಾಜರ ವಂಶಸ್ಥರೇ ನೀವು ತಪ್ಪಿ ಕೂಡ ಮುಸ್ಲಿಮರಿಗೆ ಮತ ಹಾಕಬಾರದು ಎಂದದ್ದು ಬಾರಿ ವಿವಾದಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.

You might also like
Leave A Reply

Your email address will not be published.