ಹೊಸ ಫೀಚರ್‌ ನೀಡಿದ ವಾಟ್ಸಪ್‌ – AI ಆಧಾರಿತ ಚಾಟ್‌ʼಬೋಟ್‌ ಸೌಲಭ್ಯ

ವಿಶ್ವದ ಜನಪ್ರಿಯ ಆ್ಯಪ್‌ಗಳ ಪೈಕಿ ಒಂದಾದ ವಾಟ್ಸಾಪ್‌ ಇದೀಗ ತನ್ನ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಬೋಟ್‌ ವ್ಯವಸ್ಥೆಯನ್ನು ಪರಿಚಯಿಸಿದೆ. ಭಾರತದಲ್ಲೂ ಆಯ್ದ ಗ್ರಾಹಕರಿಗೆ ಈ ಸೌಲಭ್ಯವನ್ನು ನೀಡಲಾಗಿದೆ. ಬನ್ನಿ ಈ ಸೌಲಭ್ಯದಿಂದ ಏನೇನು ಪ್ರಯೋಜನವಿದೆ ಎಂಬುದನ್ನು ನಾವು ನೋಡೋಣ!

ವಾಟ್ಸಾಪ್‌ ಐಕಾನ್‌ ಕೆಳಗಡೆ ಬರುವ ವಾಟ್ಸಾಪ್‌ ಚಾಟ್‌ ಫೀಡ್‌ನಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. ಇದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಚಾಟ್ ಮಾಡುವಂತೆ ಚಾಟ್‌ ಮಾಡಬಹುದು.

ಚಾಟ್‌ಬೋಟ್‌ನಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ಅವುಗಳ ಮೂಲಕ ಕೃತಕ ಬುದ್ಧಿಮತ್ತೆ ಆಧರಿತ ಚಿತ್ರರಚನೆ ಮಾಡಬಹುದು, ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆಯಬಹುದು, ಕಥೆ ಹೇಳು ಅಥವಾ ಜೋಕ್ಸ್‌ ಎನ್ನಬಹುದು.

WhatsApp introduced a new feature - AI based chatbot facility

ಕೆಲ ತಿಂಗಳ ಹಿಂದೆಯೇ ಜಾಗತಿಕ ಮಟ್ಟದಲ್ಲಿ ಆಯ್ದ ಬಳಕೆದಾರರಿಗೆ ಪ್ರಾಯೋಗಿಕವಾಗಿ ಈ ಅವಕಾಶ ಕಲ್ಪಿಸಲಾಗಿತ್ತು. ಅದನ್ನು ಇದೀಗ ಭಾರತ ಸೇರಿದಂತೆ ಇನ್ನಷ್ಟು ದೇಶಗಳಲ್ಲಿ ವ್ಯಾಪಕ ಪ್ರಮಾಣದ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ.

You might also like
Leave A Reply

Your email address will not be published.