ಬ್ಲಿಂಕಿಟ್‌ʼನಲ್ಲಿ ತರಕಾರಿ ಕೊಂಡರೆ ಕೊತ್ತಂಬರಿ ಉಚಿತ – ಬಳಕೆದಾರರ ಕೋರಿಕೆ ಈಡೇರಿಸಿದ ಸಿಇಓ

ತರಕಾರಿ ಖರೀದಿಸುವಾಗ ಅಂಗಡಿಯವನು ಉಚಿತವಾಗ ಕೊತ್ತಂಬರಿ ಸೊಪ್ಪು ಕೊಡ್ಲಿಲ್ಲ ಅಂದ್ರೆ ಆ ತರಕಾರಿ ಮಾರುವವನ ಕಥೆ ಗೋವಿಂದನೇ! ಹೆಚ್ಚು ತರಕಾರಿ ಕೊಂಡಾಗ ವ್ಯಾಪಾರಿಯಿಂದ ಸ್ವಲ್ಪ ಕೊತ್ತಂಬರಿ ಸೊಪ್ಪನ್ನಾದರು ಹಾಕಿಸಿಕೊಳ್ಳುವುದು ಭಾರತೀಯ ಮಹಿಳೆಯರಿಗೆ ರೂಢಿ ಆಗ್ಬಿಟ್ಟಿದೆ. ಆದರೆ ಆನ್‌ಲೈನ್‌ ಗ್ರಾಸರಿ ಮಾರ್ಕೆಟ್‌ಗಳಲ್ಲಿ ಇಂಥವುಗಳನ್ನು ನಿರೀಕ್ಷಿಸಲು ಸಾಧ್ಯವೇ? ಇಲ್ಲ ಅಲ್ವಾ! ಒಂದೇ ಒಂದು ಟ್ವಿಟ್ ಇದನ್ನು ಸಾಧ್ಯವಾಗಿಸಿದೆ ಅಂದ್ರೆ ನೀವ್ ನಂಬ್ತಿರಾ?

ಹೌದು ಇದನ್ನ ನೀವು ನಂಬ್ಲೆಬೇಕು. ಮುಂಬೈ ನಿವಾಸಿ ಅಂಕಿತ್ ಸಾವಂತ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ತಮಗಾದ ಅನುಭವವನ್ನು ಶೇರ್ ಮಾಡಿದ್ದರ ಪರಿಣಾಮ, ಪಾಸಿಟಿವ್ ರಿಯಾಕ್ಟ್ ಬೀರಿದೆ. ಅಷ್ಟಕ್ಕೂ ಅವರು ಟ್ವೀಟ್ ಮಾಡಿದ್ದಾದರು ಏನು?

ಅಂಕಿತ್ ಸಾವಂತ್ ಅವರ ತಾಯಿ ಬ್ಲಿಂಕಿಟ್‌ನಿಂದ ಆರ್ಡರ್ ಮಾಡುವಾಗ ಕೊತ್ತಂಬರಿ ಸೊಪ್ಪಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗಿರುವುದನ್ನು ತಿಳಿದು ಆಶ್ವರ್ಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ‘ತಮ್ಮ ತಾಯಿ ಬ್ಲಿಂಕಿಟ್‌ನಿಂದ ಆರ್ಡರ್ ಮಾಡುವಾಗ ಕೊತ್ತಂಬರಿ ಸೊಪ್ಪನ್ನು ಫ್ರೀಯಾಗಿ ಕೊಡುತ್ತಿಲ್ಲ ಎಂದಾಗ ಮಿನಿ ಹಾರ್ಟ್‌ ಅಟ್ಯಾಕ್‌ಗೆ ಒಳಗಾದರು. ಆನ್‌ಲೈನ್ ಫ್ಲಾಟ್‌ಫಾರ್ಮ್‌ನಲ್ಲಿ ನೀವು ನಿರ್ದಿಷ್ಟ ಪ್ರಮಾಣದ ತರಕಾರಿಗಳನ್ನು ಖರೀದಿಸಿದಾಗ ಈ ರೀತಿಯ ಸೊಪ್ಪನ್ನು ಉಚಿತವಾಗಿ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

Free coriander on Blinkit's vegetable purchase - CEO fulfills user's request

ಈ ಪೋಸ್ಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಸೇರಿದಂತೆ ಹಲವರ ಗಮನ ಸೆಳೆಯಿತು. ಅಲ್ಬಿಂದರ್ ದಿಂಡ್ಸಾ, ವಿಲ್ ಡು ಎಂದು ಉತ್ತರಿಸಿದರು. ನಂತರ, ದಿಂಡ್ಸಾ ಎಕ್ಸ್‌ನಲ್ಲಿ ತರಕಾರಿ ಶಾಪಿಂಗ್‌ನಲ್ಲಿ ಈ ಬದಲಾವಣೆಯನ್ನು ಅಳವಡಿಸಿಕೊಂಡಿರುವಾಗಿ ಬಹಿರಂಗಪಡಿಸಿದರು.

ಬ್ಲಿಂಕಿಟ್ ಈಗ ಕೆಲವು ತರಕಾರಿ ಆರ್ಡರ್‌ಗಳೊಂದಿಗೆ 100 ಗ್ರಾಂ ಕಾಂಪ್ಲಿಮೆಂಟರಿ ಕೊತ್ತಂಬರಿ ಸೊಪ್ಪನ್ನು ನೀಡುತ್ತಿದೆ ಎಂದು ತೋರಿಸುವ ಸ್ಕ್ರೀನ್‌ಶಾಟ್‌ನ್ನು ಸಹ ಅವರು ಹಂಚಿಕೊಂಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದೆ. 2.6 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದು, ಸುಮಾರು 3,900 ಮಂದಿ ಲೈಕ್‌ ಮಾಡಿದ್ದಾರೆ. ಮಾತ್ರವಲ್ಲ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

‘ಒಬ್ಬ ಬಳಕೆದಾರರು, ‘ಬ್ಲಿಂಕಿಟ್ ಅತಿ ವೇಗವಾಗಿ ಜನರ ಸಮಸ್ಯೆಗೆ ಸ್ಪಂದಿಸಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ಪ್ರತಿ ತಾಯಿಯೂ ಈ ಫ್ರೀ ಕೊತ್ತಂಬರಿ ಸೊಪ್ಪು ಸಿಗುವ ರೀತಿಯನ್ನು ಮೆಚ್ಚುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಉತ್ತಮ ತಂತ್ರ’ ಎಂದು ಟೀಕಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಹೀಗೆಯೇ ಕೊತ್ತಂಬರಿ ಸೊಪ್ಪಿನ ಜೊತೆ ಉಚಿತವಾಗಿ ಹಸಿ ಮೆಣಸನ್ನು ನೀಡುವುದು ಸಹ ಒಳ್ಳೆಯದು’ ಎಂದು ಸಲಹೆ ನೀಡಿದ್ದಾರೆ.

You might also like
Leave A Reply

Your email address will not be published.