ಮೆಟ್ರೋ ಮಹಿಳಾ ಸೆಕ್ಯೂರಿಟಿ ಗಾರ್ಡ್‌ʼಗೆ ಲೈಂಗಿಕ – ಪ್ರಕರಣ ದಾಖಲು

ನಮ್ಮ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ, ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ, ಸಂಬಂಧಪಟ್ಟ ವರದಿಗಳು ಮೇಲಿಂದ ಮೇಲೆ ಕೇಳಿಬರುತ್ತಲೇ ಇತ್ತು. ಇದೀಗ ಮೆಟ್ರೋ ಅಧಿಕಾರಿಯಿಂದಲೇ ಮಹಿಳಾ ಸೆಕ್ಯೂರಿಟಿಗಳಿಗೆ ಲೈಂಗಿಕ ಕಿರುಕುಳವಾಗಿದ್ದು, ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾಹಿಸುವುದಾಗಿ ಬೆದರಿಕೆಯು ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಷ್ಟಕ್ಕೂ ಇದು ಯಾವ ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆ? ಯಾರು ಆ ಆರೋಪಿ? ಎಂಬಿತ್ಯಾದಿ ಮಾಹಿತಿಗಾಗಿ ಈ ವರದಿ ಓದಿ.

ಮಹಿಳಾ ಭದ್ರತಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರೋ ಬಗ್ಗೆ ರಾಜಾಜಿನಗರದ ಮೆಟ್ರೋ ನಿಲ್ದಾಣದ Assistant Section Officer ಗಜೇಂದ್ರ.ಪಿ ಅವರ ಮೇಲೆ ದೂರು ದಾಖಲಾಗಿದ್ದು, ಸುಬ್ರಮ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಗಜೇಂದ್ರ. ಪಿ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

Metro woman security guard sexually assaulted - Case registred

ಮಹಿಳಾ ಸಿಬ್ಬಂದಿಗಳಿಗೆ ಅಶ್ಲೀಲ ಪದಗಳಿಂದ ನಿಂದಿಸೋದಲ್ಲದೆ, ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಹಕರಿಸದ ಮಹಿಳೆಯರಿಗೆ ಬೇರೆ ಕಡೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಅದೇ ವಿರೋಧ ವ್ಯಕ್ತಪಡಿಸಿದ್ರೆ ಸುಳ್ಳು ಕೇಸ್ ಹಾಕಿ ವರ್ಗಾವಣೆ ಮಾಡ್ತೀವಿ ಅಂತ ಬೆದರಿಸ್ತಾರೆ. ಸೆಕ್ಯೂರಿಟಿ ಏಜೆನ್ಸಿ ಮಾಲೀಕನಿಂದಲೂ ಸಹಕರಿಸುವಂತೆ ಒತ್ತಾಯ ಮಾಡಿದ್ದಾರೆ. ಸಹಕರಿಸಲಿಲ್ಲವೆಂದರೆ, ಕೆಲಸದಿಂದ ತೆಗೆಯುತ್ತೇನೆ ಎಂಬ ಆರೋಪಗಳು ಗಜೇಂದ್ರ ವಿರುದ್ಧ ಕೇಳಿ ಬಂದಿದ್ದು, ಎಫ್.ಐ.ಆರ್ ಅಲ್ಲಿ ದಾಖಲಿಸಲಾಗಿದೆ. ಅಲ್ಲದೇ ಈ ಮಹಿಳಾ ಸಿಬ್ಬಂದಿ ಬಿಎಂಆರ್’ಸಿಎಲ್ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ.

You might also like
Leave A Reply

Your email address will not be published.