ಮಾರ್ಚ್‌ 25ಕ್ಕೆ ಮೈತ್ರಿ ಅಭ್ಯರ್ಥಿಗಳ ಘೋಷಣೆ – ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯುತ್ತಾರಾ ನಿಖಿಲ್

ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಮಾರ್ಚ್ 25ಕ್ಕೆ ಅಧಿಕೃತ ಘೋಷಣೆ ಮಾಡಲಿದ್ದು, ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿಯನ್ನು ಒಪ್ಪಿಸುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ತರುವುದಿಲ್ಲ. ನಿಮ್ಮ ಆಸೆಯನ್ನು ನೆರವೇರಿಸಿಕೊಡುತ್ತೇವೆ. ಈ ಮೂಲಕ ಮಂಡ್ಯದಲ್ಲಿ ಮತ್ತೊಮ್ಮೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 21ಕ್ಕೆ ನನಗೆ ಆಪರೇಷನ್ ಇದೆ. ಮಾರ್ಚ್ 25ಕ್ಕೆ ಇಲ್ಲಿಗೆ ಬಂದು ನಾನು ಮೈತ್ರಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುತ್ತೇನೆ. ನಿಖಿಲ್ ಕುಮಾರಸ್ವಾಮಿ ಅವರು ಈ ಹಿಂದೆ ನಾನು ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಹಾಗೆಯೇ ನಾನು ಕೂಡ ಈ ಹಿಂದೆ ಇನ್ನೈದು ವರ್ಷ ನಿಖಿಲ್ ಯಾವುದೇ ಚುನಾವಣೆ ನಿಲ್ಲಲ್ಲ ಎಂದಿದ್ದೆ. ಕಾರ್ಯಕರ್ತರ ಒತ್ತಯದ ಮೇರೆಗೆ ಹಾಗೂ ಅವರ ನಿರೀಕ್ಷೆಯನ್ನು ನಿರಾಸೆ ಮಾಡದೆ, ನಿಖಿಲ್ ಒಪ್ಪಿಸಲು ನಾನು ಮುಂದಾಗುತ್ತೇನೆ ಎಂದು ತಿಳಿಸಿದರು.

Announcement of alliance candidates on March 25 - Will Nikhil be tested again?

ಮಂಡ್ಯದಲ್ಲಿ ಜೆಡಿಎಸ್’ನಿಂದ ಮಾಜಿ ಸಚಿವರಾದ ಸಿಎಸ್‌ ಪುಟ್ಟಸ್ವಾಮಿ ಅಥವಾ ಡಿಸಿ ತಮ್ಮಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಲಾಗಿತ್ತು. ಆದರೆ, ಕಾರ್ಯಕರ್ತರು ಮತ್ತು ಸ್ಥಳೀಯರು ಹೆಚ್.ಡಿ ಕುಮಾರಸ್ವಾಮಿ ಅಥವಾ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆ ಹೆಚ್.ಡಿ ಕುಮಾರಸ್ವಾಮಿ ಅವರು ನಿಖಿಲ್‌ ಅವರಿಗೆ ಸ್ಪರ್ಧಿಸಲು ಸೂಚಿಸುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಈಗಾಗಲೇ ಎಚ್‌ಡಿ ಕುಮಾರಸ್ವಾಮಿ ನಮಗೆ ಮಂಡ್ಯ, ಹಾಸನ, ಕೋಲಾರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ ಪಾಲಾಗಿದ್ದು, ತನ್ನ ಭದ್ರಕೋಟೆಯನ್ನು ವಾಪಸ್‌ ಪಡೆಯಲು ಶತಾಯಗತಾಯ ಪ್ರಯತ್ನವನ್ನು ನಡೆಸುತ್ತಿದೆ.

You might also like
Leave A Reply

Your email address will not be published.