ಪತ್ನಿಯ ‘ಕರಿಮಣಿ ಮಾಲಿಕ ನೀ ನಲ್ಲ’ ರೀಲ್ಸ್‌ನಿಂದ ಮನನೊಂದ ಪತಿ ಆತ್ಮಹತ್ಯೆ

ಇನ್ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು ಟ್ರೆಂಡಿಂಗ್ ರೀಲ್ಸ್‌ಗಳದೇ ಹಾವಳಿ. ಉಪೇಂದ್ರ ಅವರ ಸಿನೆಮಾದಲ್ಲಿ 25 ವರ್ಷಗಳ ಹಿಂದೆ ಗುರುಕಿರಣ್ ಅವರು ಕಂಪೋಸ್ ಮಾಡಿದ ಏನಿಲ್ಲಾ ಏನಿಲ್ಲಾ ನನ್ನ ನಿನ್ನ ನಡುವೆ ಏನಿಲ್ಲ ಎಂಬ ಹಾಡಿನ
‘ಮನಸಿನೊಳಗೆ ಖಾಲಿ ಖಾಲಿ
ನೀ ಮನದೊಳಗೆ ಇದ್ದರೂ..
ಮಲ್ಲಿಗೆ, ಸಂಪಿಗೆ, ತರದೆ ಹೋದರು ನೀ ನನಗೆ..
ಓ ನಲ್ಲ.. ನೀ‌ ನಲ್ಲ.. ಕರಿಮಣಿ ಮಾಲಿಕ ನೀ ನಲ್ಲ..’ ಎಂಬ ಸಾಲುಗಳು ತರ ತರನಾದ ರೀಲ್ಸ್‌ಗಳಿಗೆ ಸಾಕ್ಷಿಯಾಗಿದ್ದವು, ಇನ್ನು ಈ ಹಾಡಿನ ಟ್ರೆಂಡ್ ಖುದ್ದು ಕಂಪೋಸರ್ ಗುರುಕಿರಣ್ ಅವರನ್ನೂ ಬಿಡದೇ ಅವರೇ ನಟ್ಟಿಗರಿಗೆ ಧನ್ಯವಾದ ಹೇಳುವ ‌ಮೂಲಕ ಅವರೇ ಹಾಡಿದ ಒಂದು ತುಣುಕನ್ನೂ ಕೂಡ ಅಪ್ಲೋಡ್ ಮಾಡಿದ್ದರು‌.‌ ಇನ್ನು ವಿಕಿಪೀಡಿಯಾ ಎಂಬ ಇನ್ನೊಂದು ಪೇಜ್ ಈಗಾಗಲೇ ಇದ್ದ ಚಂದ್ರು ಅವರ ರಾವುಲ್ಲ ಎಂಬ ಟ್ರೆಂಡಿಗೆ ಈ ಹಾಡನ್ನು ಲಿಂಕ್ ಮಾಡಿ ‘ಕರಿಮಣಿ‌ ಮಾಲಿಕ ರಾವುಲ್ಲ’ ಎಂದು ಮಾಡಿದ ರೀಲ್ಸ್ ಸಖತ್ ವೈರಲ್ ಆಗಿದೆ.

ಆದರೆ ಈಗ ಇಲ್ಲಿ‌ ಕರಿಮಣಿ ಮಾಲಿಕ ನೀನಲ್ಲ ಎಂಬ ರೀಲ್ಸ್‌ಗೆ ಮಹಿಳೆಯೋರ್ವಳ ನಿಜವಾದ ಕರಿಮಣಿ ಮಾಲಿಕ ಜೀವ ಕಳೆದುಕೊಂಡಿದ್ದು ಮಾತ್ರ ದುರದೃಷ್ಟಕರವಾಗಿದೆ. ಹೌದು ಪತ್ನಿ ರೂಪಾ ಅವರು ಮಾಡಿದ ಕರಿಮಣಿ‌ ಮಾಲಿಕ ನೀ ನಲ್ಲ ಎಂಬ ರೀಲ್ಸ್‌ಗೆ ಬೇಸತ್ತು ಪಿ.ಜಿ. ಪಾಳ್ಯದ ಕುಮಾರ್ (33) ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯ ಈ ರೀಲ್ಸ್‌ನಿಂದ ಇವರ ಗೆಳೆಯರು ಛೇಡಿಸಲಾಗಿ ಇದೇ ವಿಷಯಕ್ಕೆ ಗಂಡ ಹೆಂಡತಿಯ ಮಧ್ಯೆ ವಾಗ್ವಾದ ನಡೆದು ಅದೇ ಈಗ ಈ ದುರಂತಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ.

Husband commits suicide offended by his wife's 'Karimani Malika Nee Nalla' reels

ಯಾವುದೇ ಟ್ರೆಂಡ್ ಆದರೂ ಸರಿ ಅತಿಯಾದರೆ ಅದೂ ವಿಷವೇ ಎಂಬುದಕ್ಕೆ ಇದೇ ಜ್ವಲಂತ ಸಾಕ್ಷಿ. ಹೌದು, ಕೇವಲ ಒಂದು ರೀಲ್ಸ್‌ನ ಹುಚ್ಚಾಟಕ್ಕೆ ಅಮೂಲ್ಯವಾದ ಜೀವನ ಕಳೆದು ಕೊಳ್ಳುವ ಮೊದಲು ಜೀವನದ ಬಗ್ಗೆ ಸ್ವಲ್ಪವಾದರೂ ಯೋಚನೆ ಮಾಡಿದ್ದರೆ ಒಂದು ಜೀವ ಇಂದು ಉಳಿಯುತ್ತಿತ್ತು‌.

You might also like
Leave A Reply

Your email address will not be published.