IAS, IPS, IRS, UPSC ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – ನೂತನ ಅಧಿಸೂಚನೆ

ಐಎಎಸ್, ಐಪಿಎಸ್, ಐಆರ್’ಎಸ್ ಹೀಗೆ ಯುಪಿಎಸ್’ಸಿ ಅಥವಾ ನಾಗರಿಕ ಸೇವೆಯನ್ನು ಸೇರಬಯಸುವವರಿಗಾಗಿ ಗುಡ್ ನ್ಯೂಸ್. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನವಾಗಿದೆ. ಅಧಿಸೂಚನೆಯಲ್ಲಿ ಏನಿದೆ? ಈ ಬಾರಿಯ ಸುತ್ತೋಲೆಗಳೇನು? ಎಂಬಿತ್ಯಾದಿ ಮಾಹಿತಿಗಳಿಗೆ ಈ ವರದಿ ಓದಿ..

ಈ ಬಾರಿ 1,056 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆ ಮೇ.26 ರಂದು ನಡೆಯಲಿದೆ. ಅರ್ಜಿ ಸಲ್ಲಿಸುವವರ ವಯೋಮಾನ 21 ರಿಂದ 32 (2024ರ ಆಗಸ್ಟ್ 1ಕ್ಕೆ) ರವರೆಗೆ ಇರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಿದ್ಯಾರ್ಹತೆ ಪದವಿಯಾಗಿರಬೇಕು. ಲೋಕಸೇವಾ ಆಯೋಗದ ಅಂತರ್ಜಾಲ ಪುಟದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು UPSC ತಿಳಿಸಿದೆ.

ಯು.ಪಿ.ಎಸ್.ಸಿ ಕುರಿತು ಒಂದಿಷ್ಟು!

ಯುಪಿಎಸ್’ಸಿ ಯನ್ನು ಗರಿಷ್ಠ 6 ಬಾರಿಯಷ್ಟೇ ಎದುರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಒಟ್ಟು 3 ಹಂತದ ಪರೀಕ್ಷೆಯನ್ನು ನೀವು ಎದುರಿಸಬೇಕಾಗುತ್ತದೆ. ಯಾವುದೆಂದರೆ,
1. ಪೂರ್ವಭಾವಿ ಪರೀಕ್ಷೆ
2. ಮುಖ್ಯ ಪರೀಕ್ಷೆ
3. ಸಂದರ್ಶನ

ಪೂರ್ವಭಾವಿ ಪರೀಕ್ಷೆ: – ಇದರಲ್ಲಿ 2 ಕಡ್ಡಾಯ ಪತ್ರಿಕೆಗಳಿವೆ. ಅವುಗಳೆಂದರೆ,
a. ಸಾಮಾನ್ಯ ಜ್ಞಾನ 1 – 200 ಅಂಕ, 2 ಗಂಟೆ ಅವಧಿ
b. ಸಾಮಾನ್ಯ ಜ್ಞಾನ 2 – 200 ಅಂಕ, 2 ಗಂಟೆ ಅವಧಿ

ಒಟ್ಟು 400 ಅಂಕಗಳು ಮತ್ತು 4 ಗಂಟೆಯ ಈ ಪರೀಕ್ಷೆಯ ಎರಡೂ ಪತ್ರಿಕೆಗಳು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಸಾಮಾನ್ಯ ಜ್ಞಾನ ಪತ್ರಿಕೆ-2 ಅರ್ಹತೆಯ ಪತ್ರಿಕೆಯಾಗಿದೆ. ಇದರಲ್ಲಿ ಕನಿಷ್ಠ ಶೇ.33ರಷ್ಟು ಅಂಕ ಗಳಿಸುವುದು ಕಡ್ಡಾಯ. ಇದು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಇರಲಿದೆ.

ಮುಖ್ಯ ಪರೀಕ್ಷೆ: – ಮೆರಿಟ್ ಆಧಾರಿತ ಈ ಪರೀಕ್ಷೆಯಲ್ಲಿ ದೀರ್ಘ ಉತ್ತರಗಳನ್ನು ಬರೆಯಬೇಕು. ಇಲ್ಲಿ ಅರ್ಹತೆ ಮತ್ತು ಮೆರಿಟ್ ಪತ್ರಿಕೆಗಳೆಂದು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಆ ಬಗ್ಗೆ ಸಂಪೂರ್ಣವಾಗಿ ಈ ಕೆಳಗಡೆ ತಿಳಿಸಲಾಗಿದೆ.

Good News for IAS, IPS, IRS, UPSC Aspirants - New Notification

1. ಅರ್ಹತೆ ಪತ್ರಿಕೆಗಳು:

a. ಪತ್ರಿಕೆ 1 – ಸಂವಿಧಾನದ 8ನೇ ಶೆಡ್ಯೂನಲ್ಲಿರುವ ಯಾವುದಾದರೂ ಒಂದು ಭಾರತೀಯ ಭಾಷೆ – 300 ಅಂಕ, 3 ಗಂಟೆ ಅವಧಿ
b. ಪತ್ರಿಕೆ 2 – ಇಂಗ್ಲಿಷ್ (ಕಡ್ಡಾಯ) – 300 ಅಂಕ, 3 ಗಂಟೆ ಅವಧಿ

2. ಮೆರಿಟ್ ಆಧಾರಿತ ಪತ್ರಿಕೆಗಳು
a. ಪ್ರಬಂಧ – 250 ಅಂಕ, 3 ಗಂಟೆ ಅವಧಿ
b. ಸಾಮಾನ್ಯ ಜ್ಞಾನ 1 – 250 ಅಂಕ, 3 ಗಂಟೆ ಅವಧಿ
c. ಸಾಮಾನ್ಯ ಜ್ಞಾನ 2 – 250 ಅಂಕ, 3 ಗಂಟೆ ಅವಧಿ
d. ಸಾಮಾನ್ಯ ಜ್ಞಾನ 3 – 250 ಅಂಕ, 3 ಗಂಟೆ ಅವಧಿ
e. ಸಾಮಾನ್ಯ ಜ್ಞಾನ 4 – 250 ಅಂಕ, 3 ಗಂಟೆ ಅವಧಿ
f. ಐಚ್ಛಿಕ ವಿಷಯ ಪತ್ರಿಕೆ 1 – 250 ಅಂಕ, 3 ಗಂಟೆ ಅವಧಿ
g. ಐಚ್ಛಿಕ ವಿಷಯ ಪತ್ರಿಕೆ 2 – 250 ಅಂಕ, 3 ಗಂಟೆ ಅವಧಿ

ಒಟ್ಟಾರೆಯಾಗಿ ಲಿಖಿತ ಪರೀಕ್ಷೆಯಲ್ಲಿ 9 ಪತ್ರಿಕೆಗಳು ಇರಲಿವೆ. ಒಟ್ಟು 1750 ಅಂಕಗಳು ಇದ್ದು, ಪ್ರಬಂಧ ಮಾದರಿಯ ಉತ್ತರಗಳನ್ನು ಬರೆಯಬೇಕಾಗಿರುತ್ತದೆ.

3. ಸಂದರ್ಶನ
ಸಂದರ್ಶನ/ವ್ಯಕ್ತಿತ್ವ ಪರೀಕ್ಷೆಯು 275 ಅಂಕಗಳನ್ನು ಹೊಂದಿರುತ್ತದೆ. ಇವುಗಳಲ್ಲಿ ಕನಿಷ್ಠ ಅರ್ಹತೆಯ ಅಂಕಗಳಿಲ್ಲ. ವ್ಯಕ್ತಿತ್ವ ಪರೀಕ್ಷೆಯು ಐಎಎಸ್ ಪರೀಕ್ಷೆಯ ಅಂತಿಮ ಹಂತವಾಗಿದೆ ಮತ್ತು ನಾಗರಿಕ ಸೇವೆಗಳಲ್ಲಿ ವೃತ್ತಿಜೀವನಕ್ಕೆ ಅಭ್ಯರ್ಥಿಯ ಸೂಕ್ತತೆಯನ್ನು ನಿರ್ಣಯಿಸುತ್ತದೆ. ಇದು ನಿರ್ದಿಷ್ಟ ಪಠ್ಯಕ್ರಮವನ್ನು ಹೊಂದಿಲ್ಲ, ಆದರೆ ಇದು ಸಾಮಾನ್ಯವಾಗಿ ಅಭ್ಯರ್ಥಿಯ ವ್ಯಕ್ತಿತ್ವ, ಸಂವಹನ ಕೌಶಲ್ಯ ಮತ್ತು ಜ್ಞಾನದ ಆಳವನ್ನು ಮೌಲ್ಯಮಾಪನ ಮಾಡುತ್ತದೆ.

ಮುಖ್ಯ ಪರೀಕ್ಷೆಗಾಗಿ, ಅಭ್ಯರ್ಥಿಗಳು UPSC ಒದಗಿಸಿದ ವಿಷಯಗಳ ಪಟ್ಟಿಯಿಂದ ಒಂದು ಐಚ್ಛಿಕ ವಿಷಯವನ್ನು ಆರಿಸಬೇಕಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ಅರ್ಜಿ ಸಲ್ಲಿಸಲು https://upsconline.nic.in/upsc/OTRP/ ಈ ಲಿಂಕನ್ನು ಉಪಯೋಗಿಸಿ.

You might also like
Leave A Reply

Your email address will not be published.