ಸೀತಾರಾಮರನ್ನು ಹೊತ್ತು ಮೆರೆಯಲಿದೆ ಕನ್ನಡ ನಾಡಿನ ಪಲ್ಲಕ್ಕಿ!!

ಅಯೋಧ್ಯೆಗೆ ರಾಮಲಲಾ ಆಗಮಿಸಲು ಇನ್ನು ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಇವೆ. ಉತ್ಸವದ ತಯಾರಿ ಜೋರಾಗಿಯೇ ನಡೆಯುತಿದೆ. ನಾನಾ ಕಡೆಯಿಂದ ಕಾಣಿಕೆ, ಉಡುಗೊರೆಯ ರೀತಿಯಲ್ಲಿ ಹಲವು ತರದ ಅಗತ್ಯ ವಸ್ತುಗಳು ಅಯೋಧ್ಯೆಗೆ ತಲುಪಿವೆ. ಇನ್ನು ಕರ್ನಾಟಕದಿಂದ ಅಯೋಧ್ಯೆಗೆ ತಲುಪಿರುವ ಉಡುಗೊರೆಗಳ ಬಗ್ಗೆ ಈಗಾಗಲೇ ಹೇಳಿದ್ದೇವೆ ಅಂತಹುದಕ್ಕೆ ಹೊಸ ಸೇರ್ಪಡೆ ಇಲ್ಲಿದೆ.

ಶ್ರೀ ರಾಮ ದೇವರ ಉತ್ಸವ‌ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಮೆರವಣಿಗೆ ಮಾಡಲು ಬೇಕಾಗುವ ಪಲ್ಲಕ್ಕಿಯನ್ನು ಕರ್ನಾಟಕದ ರಾಮನಗರ ಜಿಲ್ಲೆಯ‌ ಮೂಲ ಬುಡಕಟ್ಟು ಸಮುದಾಯವಾದ ಇರುಳಿಗರು ಬಿದಿರಿನಿಂದ ಮಾಡಿ ಅಯೋಧ್ಯೆಗೆ ಉಡುಗೊರೆಯಾಗಿ ಕಳುಹಿಸುತ್ತಿದ್ದಾರೆ.

Ayodhya

ರಾಮಜನ್ಮಭೂಮಿ ಟ್ರಸ್ಟ್ ‌ನ ಸೂಚನೆಯ ಮೇರೆಗೆ ಮಾಗಡಿ ತಾಲೂಕಿನ ಜೋಡುಕಟ್ಟೆ ಗ್ರಾಮದ 5 ಜನ ಇರುಳಿಗ ಆದಿವಾಸಿಗಳು ಸತತವಾಗಿ ಹದಿನೈದು ದಿನಗಳ ಕಾಲ ಸಮಯದ ಒಳಗೆ ಬಿದಿರಿನ ಪಲ್ಲಕ್ಕಿಯನ್ನು ನಿರ್ಮಾಣ ಮಾಡಿದ್ದಾರೆ.‌ ರಾಮ ದೇವರ ಪ್ರತಿಷ್ಠಾನ ಆದ ಬಳಿಕ‌ ಮಂದಿರದಲ್ಲಿ ಸತತವಾಗಿ ನಲವತ್ತೆಂಟು ದಿನಗಳ ಕಾಲ ನಿರಂತರವಾಗಿ ಮಂಡಲಪೂಜೆ ನಡೆಯಲಿದ್ದು ಈಗ ತಯಾರಿಸಿದ ಬಿದಿರಿನ ಪಲ್ಲಕ್ಕಿಯು ನಲವತ್ತೆಂಟು ದಿನಗಳ ಕಾಲವು ಸೀತಾರಾಮ ಉತ್ಸವ ಮೂರ್ತಿಯನ್ನು ಹೊತ್ತು ಮೆರೆಯಲಿದೆ. ಈ ಮೆರವಣಿಗೆಗೆಂದೇ ಈ ಪಲ್ಲಕ್ಕಿಯನ್ನು ನಿರ್ಮಿಸಲಾಗಿದೆ.

ಬಿದಿರಿನ ಪಲ್ಲಕ್ಕಿಯನ್ನು ತಯಾರಿಸುವಲ್ಲಿ ಇರುಳಿಗ ಸಮುದಾಯದವರು ಪರಿಣಿತರಾಗಿದ್ದ ಕಾರಣ ಅವರಿಗೆ ವಹಿಸಲಾಗಿದೆ. ಮಾಗಡಿಯ ಸುತ್ತ ಮುತ್ತ ಬೆಟ್ಟ-ಗುಡ್ಡಗಳಲ್ಲಿ ಬೆಳೆದ ಉತ್ಕೃಷ್ಟ ಮಟ್ಟದ ಬಿದಿರನ್ನು ತಂದು ಒಣಗಿಸಿ ಹದಿನೈದು ದಿನಗಳ ಪರಿಶ್ರಮದ ನಂತರವೇ ಈಗ ಅಯೋಧ್ಯೆ ತಲುಪಲಿದೆ. ಕನ್ನಡನಾಡಿನಿಂದ ಪ್ರಭು ರಾಮನಿಗೆ ಇನ್ನೂ ಏನೇನು ಉಡುಗೊರೆಯ ಹೊಳೆ ಹರಿದು ಹೋಗಲಿದೆಯೋ ಕಾದು ನೋಡೋಣ.

You might also like
Leave A Reply

Your email address will not be published.