ಪೈಲಟ್‌ʼಗಳ ಮುಷ್ಕರ‌ ಅಂತ್ಯ : ಕಾರ್ಯಾಚರಣೆ ಆರಂಭಿಸಿದ ವಿಸ್ತಾರ ಏರ್‌ ಲೈನ್ಸ್

ಪೈಲಟ್‌ಗಳ ಮುಷ್ಕರದಿಂದಾಗಿ ವಿಮಾನಗಳ ಹಾರಾಟದಲ್ಲಿ ಉಂಟಾದ ವ್ಯತ್ಯಯದಿಂದ ನಲುಗಿ ಹೋಗಿದ್ದ ವಿಸ್ತಾರಾ ಏರ್‌ಲೈನ್ಸ್‌ ನಿಧಾನವಾಗಿ ಕಾರ್ಯಾಚರಣೆಯಲ್ಲಿ ಸ್ಥಿರತೆ ಸಾಧಿಸುತ್ತಿದೆ. ಅದರ ಭಾಗವಾಗಿ ತಾತ್ಕಾಲಿಕವಾಗಿ ನಿತ್ಯ 25-30 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

‘‘ಎಲ್ಲವನ್ನೂ ನಾವು ಇನ್ನಷ್ಟು ಯೋಜನಾಬದ್ಧಗೊಳಿಸಬೇಕಾಗಿದೆ. ಕಳೆದ ವಾರದ ಘಟನೆಗಳು ನಮಗೆ ದೊಡ್ಡ ಪಾಠ ಕಲಿಸಿವೆ. ಕೆಟ್ಟದ್ದು ನಮ್ಮ ಜತೆಯಲ್ಲಲ್ಲ, ನಮ್ಮ ಹಿಂದೆ ಇದೆ. ಮೇಲ್ನೋಟಕ್ಕೆ ದೊಡ್ಡ ಹಿನ್ನಡೆಯಂತೆ ತೋರಿದರೂ ನಾವು ಯಾವಾಗಲೂ ಕಠಿಣ ಪರಿಸ್ಥಿತಿಗಳಿಂದ ಪಾರಾಗಿದ್ದೇವೆ. ಕಷ್ಟಕರ ಸಂದರ್ಭಗಳಲ್ಲಿ ನಮ್ಮ ಆತ್ಮವಿಶ್ವಾಸ ಮತ್ತು ಶಕ್ತಿಯನ್ನು ತೋರಿದ್ದೇವೆ,’’ ಎಂದು ವಿಸ್ತಾರಾ ಸಿಇಒ ವಿನೋದ್‌ ಕಣ್ಣನ್‌ ಸಂಸ್ಥೆಯ ಉದ್ಯೋಗಿಗಳಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ವಿಸ್ತಾರಾದಲ್ಲಿ ಸದ್ಯ 6,500 ಉದ್ಯೋಗಿಗಳಿದ್ದಾರೆ. ಅವರಲ್ಲಿ 1,000 ಪೈಲಟ್‌ಗಳಿದ್ದಾರೆ. ಟಾಟಾ ಸಮೂಹವು ಏರ್‌ ಇಂಡಿಯಾ ಮತ್ತು ವಿಸ್ತಾರಾ ವಿಲೀನ ಘೋಷಿಸಿದೆ. ಆದರೆ ವಿಸ್ತಾರಾ ಸಿಬ್ಬಂದಿ ತಮಗೆ ರೂಪಿಸಿರುವ ಹೊಸ ಉದ್ಯೋಗ ಒಪ್ಪಂದ, ವೇತನ ಪರಿಷ್ಕರಣೆ ಕುರಿತು ಅಸಮಾಧಾನ ಹೊಂಪೈದಿದ್ದಾರೆ. ಹೀಗಾಗಿಯೇ ಪೈಲಟ್‌ಗಳು ಕಳೆದ ವಾರ ದಿಢೀರ್‌ರ ಮುಷ್ಕರ ನಡೆಸಿದ್ದರು.

You might also like
Leave A Reply

Your email address will not be published.