ಇಬ್ಬರು ವೃದ್ಧರ ಮತಕ್ಕಾಗಿ 107 ಕಿ.ಮೀ ತೆರಳಿದ ಅಧಿಕಾರಿಗಳು : ಪ್ರಶಂಸೆ

ಮನೆಯಿಂದ ಮತದಾನ ಮಾಡಲಿರುವ ಇಬ್ಬರು ವೃದ್ಧರಿಗಾಗಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ದೂರ ತೆರಳಿರುವ ಘಟನೆ ಇಂದು ನಡೆದಿದೆ.

ಹೌದು! ಮಹಾರಾಷ್ಟ್ರದ ಗಡ್ಡಿರೋಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಘಟನೆ ಇದಾಗಿದೆ. ಮತದಾನ ಮಾಡಲಿರುವ ವೃದ್ಧರು ಗಡ್ಡಿರೋಲಿ- ಚಿಮುರ್‌ ಲೋಕಸಭಾ ಕ್ಷೇತ್ರದ 100 ಮತ್ತು 86 ವರ್ಷದವರು. ಈ ಕ್ಷೇತ್ರದಲ್ಲಿ ಏ.19ರಂದು ಮತದಾನ ನಡೆಯಲಿದೆ.

ಈ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ ಮತ್ತು 40 ಪ್ರತಿಶತದಷ್ಟು ಅಂಗವಿಕಲರಾಗಿರುವವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದರಡಿಯಲ್ಲಿ ಚುನಾವಣಾ ಅಧಿಕಾರಿಗಳು 107 ಕಿ.ಮೀ ಸಾಗಿ 100 ವರ್ಷದ ಕ್ಷಿತಯ್ಯ ಮಡರ್ಬೋಯಿನಾ ಮತ್ತು 86 ವರ್ಷದ ಕ್ಷಿತಯ್ಯ ಕೊಮೆರಾ ಎನ್ನುವವರಿಂದ ಮತ ಚಲಾವಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಗಡ್ಡಿರೋಲಿ ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ಚುನಾವಣಾ ಅಧಿಕಾರಿಗಳ ಈ ಕ್ರಮಕ್ಕೆ ನೆಟ್ಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

You might also like
Leave A Reply

Your email address will not be published.