ಅಪರಿಚಿತ ಬಂದೂಕುಧಾರಿಗಳಿಂದ ಅಮೀರ್‌ ಸರ್ಫರಾಜ್‌ ಹತ್ಯೆ

ಅಪರಿಚಿತ ಬಂದೂಕುಧಾರಿಗಳು ಲಾಹೋರ್‌ನಲ್ಲಿ ಅಮೀರ್ ಸರ್ಫರಾಜ್ ಅಲಿಯಾಸ್ ತಂಬಾ ಎಂಬುವವನನ್ನು ಕೊಂದಿದ್ದಾರೆ. ಈ ವ್ಯಕ್ತಿಯು 2013 ರ ಸಾಲಿನಲ್ಲಿ ಭಾರತದ ಪರ ಬೇಹುಗಾರಿಕೆ ಮಾಡುತ್ತಿದ್ದ ಎಂದು ಚಾರ್ಜಸ್ ಎದುರಿಸುತ್ತಿದ್ದ, ಪಾಕಿಸ್ತಾನದ ಜೈಲಿನಲ್ಲಿದ್ದ, ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಕೊಂದ ಆರೋಪ ತಂಬಾನ ಮೇಲಿತ್ತು. ಸರಬ್ಜಿತ್ ಸಿಂಗ್ ಅವರ ಹತ್ಯೆ ವಿಷಯದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತಾದರೂ 2018 ರಲ್ಲಿ ನ್ಯಾಯಾಲಯವು ಬಿಡುಗಡೆ ಗೊಳಿಸಿತ್ತು.

ಪಾಕಿಸ್ತಾನದ ಮಾಧ್ಯಮ ಸಮಾ ಟಿವಿಯ ವರದಿಯ ಪ್ರಕಾರ, ಇಸ್ಲಾಂ ಪುರದ ಗಂಗಾ ನಗರದ ಬಳಿ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಶಂಕಿತರು ತಂಬಾನ ಮನೆಗೆ ನುಗ್ಗಿ ಎದೆಗೆ ಎರಡು, ಕಾಲುಗಳಿಗೆ ಎರಡರಂತೆ ನಾಲ್ಕು ಗುಂಡು ಹಾರಿಸಿ ಹೋಗಿದ್ದಾರೆ ಎನ್ನಲಾಗಿದೆ. ಗುಂಡು ಹಾರಿಸಿದ ಬಂಧೂಕುದಾರಿಗಳಲ್ಲಿ ಓರ್ವ ಹೆಲ್ಮೆಟ್ ಧರಿಸಿದ್ದರೆ, ಇನ್ನೋರ್ವ ಮಾಸ್ಕ್ ಧರಿಸಿದ್ದಾಗಿ ತಿಳಿದು ಬಂದಿದೆ‌.

ಕೆಲ‌ ಸಮಯದಿಂದ ಅಮಿರ್ ಸರ್ಫರಾಜ್‌ಗೆ ಬೆದರಿಕೆಗಳು ಬರುತ್ತಿದ್ದು, ನಿನ್ನೆ ಗುಂಡು ಹಾರಿಸಲಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅತಿಯಾದ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿ ಅಮೀರ್ ಸರ್ಫರಾಜ್ ಮೃತಪಟ್ಟಿದ್ದಾರೆ.

ಇನ್ನು ಗಮನಿಸಿಬೇಕಾಂದ ಅಂಶವೆಂದರೆ ಬಾಬರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಭಯೋತ್ಪಾದಕರೆಲ್ಲಾ ಪಾಕಿಸ್ತಾನದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಅಪರಿಚಿತ ಬಂಧೂಕುದಾರಿಗಳಿಂದ ಕೊಲ್ಲಲ್ಪಟ್ಟಿದ್ದಾರೆ. ಇದು ಭಾರತೀಯ ಗುಪ್ತ ಚರ ಇಲಾಖೆಯ ಕೆಲಸವಿರಬಹುದೇ ಎಂದು ಶಂಕಿಸಲಾಗಿದ್ದು, ಗಾರ್ಡಿಯನ್ ಮಾಧ್ಯಮ ಸಂಸ್ಥೆಯ ಪ್ರಕಾರ ಭಾರತದ ಸರ್ಕಾರದ ಆದೇಶದ ಮೇರೆಗೆ ಅಲ್ಲಿ ಹತ್ಯೆಗಳು ನಡೆಯುತ್ತಿವೆ ಎಂದು ಉಲ್ಲೇಖ ಮಾಡಿತ್ತು ಆದರೆ ಭಾರತ ಸರ್ಕಾರವು ಈ ಆರೋಪವನ್ನು ತಳ್ಳಿಹಾಕಿದೆ.

ಸರಬ್ಜಿತ್ ಸಿಂಗ್ ಓರ್ವ ಭಾರತೀಯ ಪ್ರಜೆ, ಆತನನ್ನು ಪಾಕಿಸ್ತಾನದಲ್ಲಿ 1990 ರ ಸಮಯದಲ್ಲಿ ಲಾಹೋರ್ ಮತ್ತು ಫೈಸಲಾಬಾದ್‌ನಲ್ಲಿ ಬಾಂಬ್ ದಾಳಿ ನಡೆಸಿದ ನಕಲಿ ಆರೋಪದ ಮೇಲೆ ಸರಬ್ಜಿತ್ ಅವರನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿದ್ದರು. ಹಾಗೂ ಅವರ ವಿರುದ್ಧ ಗುಢಾಚಾರಿಕೆ, ಭಯೋತ್ಪಾದನೆ ಹಾಗೂ ಸ್ನೂಪಿಂಗ್ ಆರೋಪಗಳನ್ನು ಹೊರಿಸಲಾಗಿತ್ತು. ವಿಚಾರಣೆಯ ಸಮಯದ ಉದ್ದಕ್ಕೂ ಸಿಂಗ್ ಅವರು ತಮ್ಮ ಮುಗ್ಧತೆಯನ್ನು ಕಾಪಾಡಿಕೊಂಡೇ ಬಂಧಿದ್ದರು ಅವರ ಬಿಡುಗಡೆಗಾಗಿ ಹಲವಾರು ಪ್ರಯತ್ನಗಳು ನಡೆದಿದ್ದವು ಆದಾಗ್ಯೂ, ಜೈಲಿನ‌ ಒಳಗೆ 2013 ರಲ್ಲಿ ಅಮಿರ್ ಸರ್ಫರಾಜ್ ಜೊತೆಗಿನ ಹೋರಾಟದಲ್ಲಿ ಕೊಲ್ಲಲ್ಪಟ್ಟರು.

ಭಾರತ ಸರ್ಕಾರ ‌ಮತ್ತು‌ ಮಾನವ ಹಕ್ಕು ಸಂಘಟನೆಗಳು ಸೇರಿದಂತೆ ಕ್ಷಮದಾನಕ್ಕಾಗಿ ಅಂತರಾಷ್ಟ್ರೀಯ ಮನವಿಗಳ ಹೊರತಾಗಿಯೂ 1991 ರಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಸರಬ್ಜಿತ್ ಅವರಿಗೆ ಮರಣದಂಡನೆ ವಿಧಿಸಿತ್ತು, ಅವರ ಮರಣದಂಡನೆಯನ್ನಯ ಪದೇ ಪದೇ ಮುಂದೂಡಲಾಯಿತಾದರೂ ಅವರ ಪ್ರಕರಣವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದದ ಬಿಂದುವಾಗಿಯೇ ಮುಂದುವರೆಯಿತು.

ಪಾಕಿಸ್ತಾನದ ಲಾಹೋರ್‌ನ ‌ಲಖ್‌ಪತ್ ಜೈಲಿನಲ್ಲಿ ಸಹ ಖೈದಿಗಳ ದಾಳಿಯಿಂದ 2013 ರಲ್ಲಿ, ಆಸ್ಪತ್ರೆಯಲ್ಲಿ ನಿಧನಹೊಂದಿದರು. ಅವರ ಸಾವು ಭಾರತದಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು. ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧದ ಬಿಕ್ಕಟ್ಟಿಗೆ ಅವರು ಗುರಿಯಾದರು ಎಂದು ಹೇಳಲಾಗುತ್ತದೆ. ಇದೀಗ ಅವರನ್ನು ಹತ್ಯೆ ಮಾಡಿದವನನ್ನು ಅಪರಿಚಿತ ಬಂಧೂಕುದಾರಿಗಳು ಮನೆಗೆ ನುಗ್ಗಿ ಹೊಡೆದುರುಳಿಸಿದ್ದಾರೆ.

You might also like
Leave A Reply

Your email address will not be published.