ನೀರಿಲ್ಲಾ….. ನೀರಿಲ್ಲಾ….. ಬೆಂಗಳೂರಿನಲ್ಲಿ ನೀರಿಲ್ಲಾ….. ಕುಡಿಯೋದಕ್ಕೂ ನೀರಿಲ್ಲ, ತೊಳೆಯೋದಕ್ಕೂ ನೀರಿಲ್ಲ

ಒಂದು ಕಡೆ ಜಲಮಂಡಳಿ ನೀರು ಸರಬರಾಜಿನಲ್ಲಿ ವ್ಯತ್ಯಯ, ಇನ್ನೊಂದು ಕಡೆ ಕೈ ಕೊಟ್ಟ ಶುದ್ಧ ನೀರಿನ ಘಟಕ. ಈ ನೀರಿನ ಸಮಸ್ಯೆ ಬೆಂಗಳೂರಿಗರಿಗೆ ಫೆಬ್ರವರಿಯಲ್ಲೆ ಶುರುವಾಗಿದೆ.

ನೀರಿನ ಅಭಾವ ಹೆಚ್ಚಾಗಿರುವುದರಿಂದ ಬಹುತೇಕ ಪ್ರದೇಶದಲ್ಲಿ ನೀರು ಪಡೆಯಲು ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಬೋರ್ಡ್ ಗಳನ್ನು ಅಳವಡಿಸಿ ನೀರಿನ ಅಲಭ್ಯತೆ ಇರುವುದರಿಂದ ಸಮಯ ನಿಗದಿ ಮಾಡಲಾಗಿದೆ. ಹಾಗೂ ಯಾವ ಸಂದರ್ಭಗಳಲ್ಲಿ ನೀರು ಸಿಗುತ್ತದೆ ಎಂಬುದನ್ನು ಪಟ್ಟಿ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

Water problem in Bangalore before summer

ನೀರಿನ ಅಭಾವ ಇರುವುದರಿಂದ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮುಚ್ಚಲಾಗುತ್ತದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ನೀರಿನ ಲಭ್ಯತೆ ಇದೆ ಎಂಬ ಬೋರ್ಡ್ ಅಳವಡಿಸಲಾಗಿದೆ.

You might also like
Leave A Reply

Your email address will not be published.