ಉಳ್ಳವರ ಮನೆ ಬೆಳಗಲು ಬಸ್ ನಿಲ್ದಾಣ ಎತ್ತಂಗಡಿ – ಬಿಬಿಎಂಪಿ ವಿರುದ್ಧ ಆಕ್ರೋಶ

ಖಾಸಗಿ ಅಪಾರ್ಟ್ಮೆಂಟ್ ಗೆ ಬೆಳಕು ಬರಲ್ಲ ಅನ್ನೋ ಒಂದೇ ಒಂದು ಕೋರಿಕೆಗೆ ಮಣಿದ ಬಿಬಿಎಂಪಿ ರಾತ್ರೋ ರಾತ್ರಿ ಬಸ್ ನಿಲ್ದಾಣವನ್ನೇ ಎತ್ತಂಗಡಿ ಮಾಡಿಸಿದೆ. ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಡೋಂಟ್ ಕೇರ್ ಎಂದ ಸರ್ಕಾರ ಲೇಔಟ್ ಜನರ ಕನಸಿಗೆ ತಣ್ಣೀರೆರಚಿರುವುದು ಎಷ್ಟರ ಮಟ್ಟಿಗೆ ಸರಿ? ಬಸ್ ನಿಲ್ದಾಣಕ್ಕಿಂತ ಖಾಸಗಿ ಅಪಾರ್ಟ್ಮೆಂಟ್ ಗೆ ಬೆಳಕು ಬರೋದು ಮುಖ್ಯವಾಯಿತಾ? ಯಾವುದದು ಬಸ್ ನಿಲ್ದಾಣ ಅಂತೀರಾ!! ಯಾವ ನಗರ? ಎಂಬಿತ್ಯಾದಿ ಮಾಹಿತಿಗಳಿಗೆ ಈ ಸ್ಟೋರಿ ಓದಿ..

ಕಗ್ಗದಾಸಪುರದ ಅಭಯರೆಡ್ಡಿ ಲೇಔಟ್, 4ನೇ ಅಡ್ಡ ರಸ್ತೆಯಲ್ಲಿರುವ ವಿ.ಎಂ.ಕೆ ಮೆಡೋಸ್ ಅಪಾರ್ಟ್‌ಮೆಂಟ್ ನ ಮಾಲೀಕರು ಇಲ್ಲಿರುವ ಬಸ್ ತಂಗುದಾಣವು ಅಪಾರ್ಟ್ಮೆಂಟ್ ನ ಬಾಲ್ಕನಿ ಮತ್ತು ಕಿಟಕಿಗಳಿಗೆ ಅಡ್ಡವಾಗಿರುವುದರಿಂದ ಬೆಳಕು ಬರುವುದಿಲ್ಲ. ಆದ್ದರಿಂದ ಈ ಬಸ್ ನಿಲ್ದಾಣವನ್ನು ತಗೆಯುವಂತೆ ಬಿಬಿಎಂಪಿ ಗೆ ಮನವಿ ಮಾಡಿದ್ದರು.

Transfer of bus stop to light up rich man's house - Outrage against BBMP

ಈ ನಿಟ್ಟಿನಲ್ಲಿ ಬಸ್ ನಿಲ್ದಾಣವನ್ನು ತೆರವುಗೊಳಿಸುವ ಕುರಿತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರನ್ನು ಕೋರಲಾಗಿದ್ದು, ಈ ಸ್ಥಳದಲ್ಲಿ ಬಸ್ಸುಗಳು ಹೆಚ್ಚಾಗಿ ಬರುವುದಿಲ್ಲ, ಮೇಲಾಗಿ ಬಸ್ಸುಗಳ ತಿರುವಿಕೆಗೂ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯದ ಮೇರೆಗೆ ಕಗ್ಗದಾಸಪುರದಲ್ಲಿ ಅಳವಡಿಸಿರುವ ಬಸ್ ತಂಗುದಾಣವನ್ನು ತೆರವುಗೊಳಿಸಲು ಸೂಚಿಸಲಾಗಿತ್ತು.

ಒಂದು ಅಪಾರ್ಟ್ಮೆಂಟ್ ಗೆ ಬೆಳಕು ಸರಿಯಾಗಿ ಬರಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್ಸು ನಿಲ್ದಾಣವನ್ನೇ ತೆರವುಗೊಳಿಸಲು ಮುಂದಾದ ಸರ್ಕಾರ ಮತ್ತು ಬಿಬಿಎಂಪಿ ಯಾಕೆ ಆ ಬಸ್ಸು ನಿಲ್ದಾಣವನ್ನು ಅಭಿವೃದ್ಧಿ ಪಡಿಸುವತ್ತ ಚಿಂತಿಸಲಿಲ್ಲ. ಬಸ್ಸುಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಕುರಿತು ಸಾಕಷ್ಟು ಜನರ ಕೋರಿಕೆಯನ್ನು ಯಾಕೆ ನಿರ್ಲಕ್ಷಿಸಿದರು? ಎಂಬ ಪ್ರಶ್ನೆಗೆ ಬಿಬಿಎಂಪಿ ಉತ್ತರಬೇಕಿಸಿದೆ. ಸದ್ಯಕ್ಕೆ ಅಲ್ಲಿಯ ಜನರು ಈ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

You might also like
Leave A Reply

Your email address will not be published.