ಸಿಂಹದ ಬೋನಿಗೆ ನುಗ್ಗಿದವ ಹೆಂಡತಿಯ ರುಂಡ ಕಡಿದ – ಅನುಮಾನಂ ಪೆದ್ದ ರೋಗಂ

“ಅನುಮಾನ” ಅನ್ನೋ ವಿಷದ ಬೀಜ ಇದುವರೆಗೆ ಅದೆಷ್ಟು ಜನರ ಬದುಕಲ್ಲಿ ಬಿರುಗಾಳಿ ಬೀಸಿದೆಯೋ ನಾ ಕಾಣೆ. ಹಾಗೆಯೇ ಇಲ್ಲೊಬ್ಬ ತನ್ನ ಪತ್ನಿಗೆ ಅನೈತಿಕ ಸಂಬಂಧ ಇದೆ ಎಂದು ಅನುಮಾನ ಪಟ್ಟು ಆಕೆಯನ್ನು ಕೊಂದು, ತಲೆಯನ್ನು ಕಡಿದು, ಒಂದು ಕೈಯಲ್ಲಿ ಕಟ್ಲಾಸ್ ಮತ್ತೊಂದು ಕೈಯಲ್ಲಿ ರಕ್ತ ಸೋರುತ್ತಿದ್ದ ತಲೆಯ ಜುಟ್ಟನ್ನಿಡಿದು ಊರೀಡಿ ಸುತ್ತುತ್ತಿದ್ದನಂತೆ. ಇದು ಯಾವುದೋ ಫಿಲಂ ಅಥವಾ ಸೀರಿಯಲ್ ಕಥೆ ಅಲ್ಲ. ಇದು ನೈಜ ಘಟನೆಯಾಧರಿತ ಸ್ಟೋರಿ.. ಹಾಗಾದರೆ ಈ ಘಟನೆ ಎಲ್ಲಿ ನಡೆಯಿತು? ಎಂಬಿತ್ಯಾದಿ ಮಾಹಿತಿಗಳಿಗೆ ಈ ಸ್ಟೋರಿ ಓದಿ.

ಇಂತಹದೊಂದು ಭಯಾನಕ ಘಟನೆ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ. ಗೌತಮ್ ಗುಚ್ಚೈತ್ ಎಂಬಾತನೇ ಹೀಗೆ ಪತ್ನಿಯನ್ನು ಕೊಂದ ವ್ಯಕ್ತಿ. ಮೊದಲಿಗೆ ಪತ್ನಿ ಫೂಲ್ರಾನಿ ಗುಚ್ಚೈತ್‌ ನ ತಲೆಯನ್ನು ಕಟ್ಲಾಸ್‌ ನಿಂದ ಕಡಿದಿದ್ದಾನೆ. ಬಳಿಕ ಒಂದು ಕೈಯಲ್ಲಿ ಕಟ್ಲಾಸ್ ಹಾಗೂ ಇನ್ನೊಂದು ಕೈಯಲ್ಲಿ ಪತ್ನಿಯ ತಲೆಯೊಂದಿಗೆ ಮನೆಯಿಂದ ಹೊರ ಬಂದಿದ್ದಾನೆ.

ಈ ದೃಶ್ಯ ಕಂಡ ನೆಟ್ಟಿಗರು ಭಯಭೀತರಾಗಿದ್ದಾರೆ:

ಬಳಿಕ ಸಮೀಪದ ಟೀ ಶಾಪ್‌ ಗೆ ತೆರಳಿ ಅಲ್ಲಿದ್ದ ಬೆಂಚೊಂದರ ಮೇಲೆ ಕುಳಿತಿದ್ದಾನೆ. ಜೊತೆಗೆ ಪಕ್ಕದಲ್ಲೇ ಕಟ್ಲಾಸ್ ಹಾಗೂ ಪತ್ನಿಯ ತಲೆಯನ್ನು ಇಟ್ಟಿದ್ದಾನೆ. ಅದೆಂಥಾ ಉಗ್ರ ಸ್ವರೂಪದಲ್ಲಿ ಈತ ಇದ್ದನೆಂದರೆ ಈ ದೃಶ್ಯವನ್ನು ನೋಡಿದ ಯಾರೂ ಕೂಡ ಆತನ ಬಳಿ ಹೋಗುವ ಧೈರ್ಯ ತೋರಿರಲಿಲ್ಲ.

ಸಿಂಹದ ಬೋನಿಗೆ ನುಗ್ಗಿದವ ಹೆಂಡತಿಯ ರುಂಡ ಕಡಿದ - ಅನುಮಾನಂ ಪೆದ್ದ ರೋಗಂ

ಬಳಿಕ ಈ ವಿಚಾರವನ್ನು ಯಾರೋ ಪೊಲೀಸರಿಗೆ ತಿಳಿಸಿದ್ದು, ಬಳಿಕ ಸಮೀಪದ ಪಟಾಶ್‌ ಪುರ ಪೊಲೀಸರ ತಂಡವೊಂದು ಸ್ಥಳಕ್ಕೆ ಬಂದು ಆತನನ್ನು ಬಂಧಿಸಿ ಕರೆದೊಯ್ದರು ಎಂದು ಘಟನೆಯನ್ನು ನೋಡಿದ ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

ಗೌತಮ್ ಗುಚೈತ್ ಸಂಚಾರಿ ವ್ಯಾಪಾರಿಯಾಗಿದ್ದು, ಪತ್ನಿಯೊಂದಿಗೆ ಉತ್ತಮ ಬಾಂಧವ್ಯವಿರಲಿಲ್ಲ. ಪತ್ನಿಯ ಮೇಲೆ ಸಂಶಯ ಹೊಂದಿದ್ದ ಆತನಿಗೆ ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನವಿತ್ತು. ಈ ಜೋಡಿಗೆ ಅಪ್ರಾಪ್ತ ಮಗನೋರ್ವನಿದ್ದು, ಆತ 5ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆರೋಪಿ ಬಳಿಯಿಂದ ಕೃತ್ಯಕ್ಕೆ ಬಳಸಿದ ಆಯುಧ ಹಾಗೂ ರಕ್ತಸಿಕ್ತ ತಲೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅದನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ಪತ್ನಿಯ ಕೊಲೆಗೈದ ಈ ಆರೋಪಿ 2021ರ ಮಾರ್ಚ್‌ನಲ್ಲಿ ಕೋಲ್ಕತ್ತಾದಲ್ಲಿರುವ ಅಲಿಪೊರ ಝೂನಲ್ಲಿ ಸಿಂಹಗಳಿರುವ ಬೋನಿನೊಳಗೆ ನುಗ್ಗಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ಸಣ್ಣಪುಟ್ಟ ಗಾಯಗಳಿಂದ ಆತ ಅಂದು ಪಾರಾಗಿದ್ದ. ಈಗ ಪತ್ನಿಯನ್ನು ಹೀಗೆ ಭೀಕರವಾಗಿ ಕೊಂದು ಜೈಲು ಸೇರಿದ್ದಾನೆ.

You might also like
Leave A Reply

Your email address will not be published.