ಗಂಡನ ಮನೆ ಮೇಲಿನ ಸೇಡಿಗೆ ಯಾವುದೇ ಕೋಚಿಂಗ್ ಇಲ್ಲದೇ ಐಎಎಸ್ ಅಧಿಕಾರಿಯಾದ ಸವಿತಾ

16 ವಯಸ್ಸಿಗೆ ಮದುವೆಯಾದ ಈ ಹೆಣ್ಣುಮಗಳು ಗಂಡನ ಮನೆಯಲ್ಲಿ ಅತ್ತೆಯ ಕಾಟ, ಗಂಡನ ಕಾಟ ಹೀಗೆ ಅನುಭವಿಸಬಾರದ ನೋವುಗಳನ್ನು ಅನುಭವಿಸುತ್ತಾರೆ. ಕೊನೆಗೆ ನಿಮ್ಮ ಸಹವಾಸವೇ ಬೇಡ ಎಂದು ಹೊರಗಡೆ ಬಂದ ಈ ಮಹಿಳೆ ಐಎಎಸ್ ಅಧಿಕಾರಿಯಾಗುತ್ತಾರೆ. ಅಧಿಕಾರಿಯಾಗುತ್ತಿದ್ದ ಹಾಗೆ ಮೊದಲು ಮಾಡಿದ ಕೆಲಸ ಗಂಡ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿ ಇಬ್ಬರನ್ನು ಕೂಡ ಜೈಲಿಗೆ ಕಳುಹಿಸುತ್ತಾಳೆ.

ಇವರ ಹೆಸರು ಐಎಎಸ್ ಅಧಿಕಾರಿ ಸವಿತಾ ಪ್ರಧಾನ್. ಮೂಲತಃ ಮಧ್ಯಪ್ರದೇಶದ ಬಡ ಬುಡಕಟ್ಟು ಕುಟುಂಬದಲ್ಲಿ ಮೂರನೇ ಮಗುವಾಗಿ ಜನಿಸಿದರು. ಪೋಷಕರ ಒತ್ತಾಯಕ್ಕೆ ಮಣಿದು ಮದುವೆಯಾದ ಇವರು ಅತ್ತೆ-ಗಂಡನ ಕಾಟ, ಸಾಕಷ್ಟು ಹಿಂಸೆ, ನೋವುಗಳಿಂದ ಬಳಲುತ್ತಿರುತ್ತಾರೆ. ಒಂದು ಕಡೆ ಕೈಯಲ್ಲಿ ಎರಡು ಮಕ್ಕಳು, ಮತ್ತೊಂದು ಕಡೆ ಪೋಷಕರ ಮರ್ಯಾದೆಯ ಕಾರಣದಿಂದ ಎಲ್ಲಾವನ್ನೂ ಸಹಿಸುತ್ತಿರುತ್ತಾರೆ. ನಂತರ ಗಂಡನ ಮನೆಬಿಟ್ಟು ಹೊರಗಡೆ ಬಂದು ಐಎಎಸ್ ಅಧಿಕಾರಿಯಾಗುತ್ತಾರೆ.

ಸವಿತಾ ಅವರ ಬಾಲ್ಯ ಜೀವನ:

ಈ ಮೇಲೆ ಹೇಳಿದಂತೆ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಇವರ ಪರಿಸ್ಥಿತಿ ಕುರಿತು ಹೆಚ್ಚಾಗಿ ಹೇಳಬೇಕಿಲ್ಲ. ಇವರಿಗೆ ಓದಬೇಕೆಂಬುದೇ ದೊಡ್ಡ ಆಸೆ. ಆದರೆ ಆರಂಭದಲ್ಲಿ ವಿದ್ಯಾಭ್ಯಾಸ ಕೊಡಿಸಲು ಆಗುವುದಿಲ್ಲ. ಅದಾಗ್ಯೂ ಹೆಚ್ಚಿನ ಹುಡುಗಿಯರನ್ನು ಓದಲು ಕಳಿಸುತ್ತಿರಲಿಲ್ಲ. ಆಗ ಅವರ ಗ್ರಾಮದಲ್ಲಿ 10 ನೇ ತರಗತಿವರೆಗೆ ಮಾತ್ರ ಶಾಲೆ ಇತ್ತು. ಈ ಜನಾಂಗದವರಿಗೆ ಸರ್ಕಾರದಿಂದ ಸ್ಕಾಲರ್’ಶಿಪ್ ಸಿಗುತ್ತಿರುತ್ತದೆ. ಮಗಳನ್ನು ಶಾಲೆಗೆ ಕಳುಹಿಸಿದ್ರೆ ನಮಗೂ ಕೊಂಚ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಪೋಷಕರು ಸ್ಕೂಲಿಗೆ ಕಳುಹಿಸುತ್ತಾರೆ. ಇದರಿಂದ ತನ್ನ ಹಳ್ಳಿಯಿಂದ 10 ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೊದಲ ಹುಡುಗಿ ಸವಿತ, ಸೆಕೆಂಡ್ ಪಿಯುಸಿ ಜೀವಶಾಸ್ತ್ರ ಅಧ್ಯಯನ ಮಾಡಿದರು.

Savita became an IAS officer without any coaching for revenge on her husband's house

16-17ನೇ ವಯಸ್ಸಿನಲ್ಲಿ ಸವಿತಾ ಅವರ ಇಚ್ಛೆಗೆ ವಿರುದ್ಧವಾಗಿ ಆದ ಮದುವೆ

ಪಿಯುಸಿ ಮುಗಿಯುತ್ತಿದ್ದ ಹಾಗೆ ಸವಿತಾ ಅವರನ್ನು ಮದುವೆ ಆಗಲು ದೊಡ್ಡ ಮನೆಯ ಸಂಬಂಧ ಬಂದಿತ್ತು. ಆರ್ಥಿಕವಾಗಿ ಸದೃಢವಾಗಿದ್ದ ಕುಟುಂಬವನ್ನು ನೋಡಿದ ಸವಿತಾ ಅವರ ಪೋಷಕರು ಹಣವನ್ನು ನೋಡಿದ್ರೆ ವಿನಃ ಆ ಕುಟುಂಬದವರು ಹೇಗಿದ್ದಾರೆ? ತಮ್ಮ ಮಗಳು ಖುಷಿಯಾಗಿರುತ್ತಾಳ? ತಮ್ಮ ಮಗಳಿಗಿಂತ 11 ವರ್ಷ ಹಿರಿಯನಾಗಿದ್ದ ಆ ಹುಡುಗ ತಮ್ಮ ಮಗಳಿಗೆ ಸರಿಯಾದ ಜೋಡಿ ಆಗ್ತಾನಾ? ಹೀಗೆ ಯಾವುದನ್ನೂ ಲೆಕ್ಕಿಸದೆ ತಮ್ಮ 16 ವರ್ಷದ ಮಗಳನ್ನು ಆ ಹುಡುಗನಿಗೆ ಕೊಟ್ಟು ಮದುವೆ ಮಾಡಿಯೇ ಬಿಡುತ್ತಾರೆ.

ಆರ್ಥಿಕವಾಗಿ ಸದೃಢವಾಗಿರುವ ಕುಟುಂಬ. ದೊಡ್ಡ ಫ್ಯಾಮಿಲಿ. ಮದುವೆಯಾದ ಬಳಿಕ ನನ್ನ ವಿದ್ಯಾಭ್ಯಾಸ, ನನ್ನ ಗುರಿ ಹೀಗೆ ಎಲ್ಲಾವನ್ನು ಹೇಳಿಕೊಂಡು ಓದುವುದನ್ನು ಮುಂದುವರಿಸಬಹುದು ಎಂದುಕೊಂಡು ಮದುವೆಯಾಗಿ ಗಂಡನ ಮನೆಗೆ ಹೋದ ಸವಿತಾ ಒಂದೇ ವಾರದಲ್ಲಿ ಆಕೆಯ ಎಲ್ಲಾ ಕನಸುಗಳು ನುಚ್ಚುನೂರಾಗಿ ಬಿಡುತ್ತದೆ.

ಸವಿತಾ ಅವರ ವೈವಾಹಿಕ ಜೀವನ:

ಸವಿತಾ ಪ್ರಧಾನ್ ಅವರ ವೈವಾಹಿಕ ಜೀವನ ಕಷ್ಟಗಳಿಂದ ಕೂಡಿತ್ತು ಮತ್ತೆ ಆಕೆಯನ್ನು ಸಾಕಷ್ಟು ಹಿಂಸಿಸುತ್ತಿದ್ದರು. ಆಕೆಯ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಎಲ್ಲರೊಂದಿಗೆ ಕುಳಿತು ಊಟ ಮಾಡುವ ಹಕ್ಕು ಇರಲಿಲ್ಲ. ಯಾರ ಬಳಿಯೂ ಮಾತನಾಡುವಂತೆಯೂ ಇರಲಿಲ್ಲ. ಊಟ ಸರಿಯಾಗಿ ಕೊಡುತ್ತಿರಲಿಲ್ಲ. ಆಗ ಕದ್ದ ರೊಟ್ಟಿಗಳನ್ನು ಉಡುಪಿನಲ್ಲಿ (ಬಟ್ಟೆ) ಬಚ್ಚಿಟ್ಟುಕೊಂಡು ಯಾರು ಇಲ್ಲದಾಗ ತಿನ್ನುತ್ತಿದ್ದರಂತೆ. ಗರ್ಭಿಣಿಯಾದ ನಂತರವೂ ಆಕೆಯ ಮೇಲಿನ ದೌರ್ಜನ್ಯ ಕಡಿಮೆಯಾಗಲಿಲ್ಲ. ಎರಡನೇ ಮಗ ಹುಟ್ಟಿದ ನಂತರವು ಅವರ ಪತಿ ಮತ್ತು ಅತ್ತೆ ಆಕೆಯನ್ನು ತಳಿಸುತ್ತಲೇ ಇದ್ದರಂತೆ.

Savita became an IAS officer without any coaching for revenge on her husband's house

ಇದರಿಂದ ಬೇಸತ್ತ ಸವಿತಾ ಒಮ್ಮೆ ನೇಣಿಗೆ ಕುಣಿಕೆ ಸಿದ್ಧಪಡಿಸುತ್ತಿದ್ದುದ್ದನ್ನು ನೋಡುತ್ತಿದ್ದ ಅವರ ಅತ್ತೆ ಬಂದು ತಡೆಯಲಿಲ್ಲವಂತೆ. ಅವರ ಮುಖವನ್ನು ನೋಡಿದ ಸವಿತಾ ಗಟ್ಟಿ ನಿರ್ಧಾರಕ್ಕೆ ಬಂದರಂತೆ. ಆಗ ತಾನು ಸಾಯುವ ಅಗತ್ಯವಿಲ್ಲ. ಇನ್ನೂ ನಾನು ಎಲ್ಲಾವನ್ನು ಸಹಿಸಿಕೊಂಡು ಹೋದರೆ ತನ್ನ ಮಕ್ಕಳನ್ನು ಬದುಕಲು ಬಿಡಲ್ಲ. ಏನಾದರು ಸಾಧಿಸಲೇಬೇಕೆಂಬ ಗಟ್ಟಿ ಧೈರ್ಯ ಮಾಡಿಕೊಂಡು ಇಬ್ಬರು ಗಂಡು ಮಕ್ಕಳೊಂದಿಗೆ ರಾತ್ರೋ ರಾತ್ರಿ ಅತ್ತೆ ಮನೆಯನ್ನು ತೊರೆದು ಹೊರಗಡೆ ಬಂದರಂತೆ.

ಸವಿತಾಗೆ ಬೆನ್ನೆಲುಬಾಗಿ ನಿಂತ ಸಹೋದರಿಯರು ಮತ್ತು ಸ್ನೇಹಿತರು:

ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ಮನೆ ಬಿಟ್ಟು ಹೊರಬಂದ ಸವಿತಾಗೆ ಬೆನ್ನೆಲುಬಾಗಿ ನಿಂತಿದ್ದು ಆಕೆಯ ಕೆಲ ಸಹೋದರಿಯರು ಮತ್ತು ಸ್ನೇಹಿತರು. ಅವರಿಗೆ ಒಂದು ಬ್ಯೂಟಿ ಸಲೂನ್ ಹಾಕಿಕೊಡುವುದ್ದಕ್ಕೆ ಸಹಾಯ ಮಾಡಿ ಕೊಡ್ತಾರೆ. ಸಂಜೆಯವರೆಗೆ ಪಾರ್ಲರ್ ನಲ್ಲಿ ಕೆಲಸ ಮಾಡಿ ನಂತರ ಐಎಎಸ್ ಪರೀಕ್ಷೆಗೆ ತಯಾರು ನಡೆಸುತ್ತಾರೆ. ಅತ್ತ ಮಕ್ಕಳಿಗೂ ಟ್ಯೂಷನ್ ಹೇಳಿಕೊಡುತ್ತಿರುತ್ತಾರೆ. ಅದ್ರಲ್ಲೂ ಹೆಣ್ಣುಮಕ್ಕಳಿಗೆ ವಿಶೇಷ ಆದ್ಯತೆ ಕೊಡುತ್ತಿರುತ್ತಾರೆ.

ಅತ್ತೆ ಮೇಲಿನ ಸೇಡಿಗೆ ಉನ್ನತ ಶಿಕ್ಷಣ ಪಡೆಯಲು ಮುಂದಾದ ಸವಿತಾ:

ಪಿಯುಸಿ ಮುಗಿಸಿದ ಸವಿತಾ ಅತ್ತೆ ಮೇಲೆ ಸೇಡನ್ನು ತೀರಿಸಿಕೊಳ್ಳಲೇಬೇಕು. ಯಾಕೆಂದರೆ ನನ್ನ ಹಾಗೆ ಕಷ್ಟ ಪಡುತ್ತಿರುವ ಸಾಕಷ್ಟು ಹೆಣ್ಣುಮಕ್ಕಳಿಗೆ ಇದೊಂದು ಪಾಠ. ಇನ್ನೂ ಮುಂದೆ ಈ ತರ ಯಾರು ಮಾಡಬಾರದು ಎಂದುಕೊಂಡು ಬಿಎ ಕಟ್ಟಿ ಉನ್ನತ ದರ್ಜೆಯಲ್ಲೇ ಪಾಸ್ ಕೂಡ ಆಗುತ್ತಾರೆ.

ಅತ್ತೆ ಮನೆಯವರಿಗೆ ಶಿಕ್ಷೆ ಕೊಡಿಸಲು ಐಎಎಸ್

Savita became an IAS officer without any coaching for revenge on her husband's house

 ಅಧಿಕಾರಿಯಾಗಬೇಕು ಎಂದು ನಿರ್ಧರಿಸಿದ ಸವಿತಾ:

ಬಿಎ ಮುಗಿಸ ಬಳಿಕ ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಿದ್ದ ಸವಿತಾಗೆ ಅದೇ ಸಂದರ್ಭದಲ್ಲಿ ಒಂದಷ್ಟು ಮಂದಿ ಸಲಹೆ ಕೊಡ್ತಾರೆ. ಏನೆಂದರೆ, ನಿನ್ನ ಅತ್ತೆ ಮನೆಯವರಿಗೆ ಶಿಕ್ಷೆ ಕೊಡಿಸಬೇಕೆಂದರೆ, ನೀನೊಂದು ಪೋಸಿಷನ್ ರೀಚ್ ಆಗಬೇಕೆಂದರೆ, ನಿನ್ನ ಗೋಳಾಡಿಸಿದವರಿಗೆ ತಕ್ಕ ಶಾಸ್ತಿಯಾಗಬೇಕೆಂದರೆ, ನಿನ್ನ ರೀತಿಯಲ್ಲಿ ಹಿಂಸೆಗೆ ಒಳಪಟ್ಟವರಿಗೆ ನ್ಯಾಯ ಕೊಡಿಸಬೇಕೆಂದರೆ ನೀನು ಯುಪಿಎಸ್’ಸಿ ಓದಬೇಕೆಂದನ್ನು ಹೇಳುತ್ತಾರೆ. ಅಲ್ಲಿಯವರೆಗೂ ಇದರ ಗಂಧ ಗಾಳಿಯ ಕುರಿತು ತಿಳಿದಿಲ್ಲದ ಸವಿತಾ ಯುಪಿಎಸ್’ಸಿ ಮಾಡಲು ಸಿದ್ಧರಾಗುತ್ತಾರೆ. ಯಾವುದೇ ಕೋಚಿಂಗ್ ಕ್ಲಾಸ್ ಇಲ್ಲದೇ ರಾತ್ರಿ ಹಗಲೆನ್ನದೇ ಓದಲಾರಂಭಿಸುತ್ತಾರೆ.

ತಮ್ಮ 24ನೇ ವಯಸ್ಸಿಗೆ ಮೊದಲ ಬಾರಿ ಯುಪಿಎಸ್’ಸಿ ಪರೀಕ್ಷೆಯನ್ನು ಬರೆಯಲು ಹೋದ ಸವಿದ ತಮ್ಮ ಫಸ್ಟ್ ಅಟೆಂಪ್ಟ್ ಅಲ್ಲೇ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯು ಆಗುತ್ತಾರೆ.

ಇದೇನು ಸಾಮಾನ್ಯವಾದ ಸಾಧನೆ ಅಲ್ವೇ ಅಲ್ಲ:

ಹೌದು! ಸವಿತಾ ಅವರ ಜೀವನದಲ್ಲಿ ಹಲವು ಏರಿಳಿತಗಳಿದ್ದವು. ವಿದ್ಯಾಭ್ಯಾಸದಿಂದ ಹಿಡಿದು ದಾಂಪತ್ಯ ಜೀವನದವರೆಗೆ ಸಾಕಷ್ಟು ಕಷ್ಟ ಪಡಬೇಕಾಯಿತು. ಕೈಯಲ್ಲಿ ಎರಡು ಗಂಡು ಮಕ್ಕಳನಿಡಿದು ಹೊರಬಂದ ಆಕೆ ಪಾರ್ಲರ್ ನಡೆಸುತ್ತಾ, ಮಕ್ಕಳಿಗೆ ಟ್ಯೂಷನ್ ಮಾಡುತ್ತ, ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾ, ಯಾವುದೇ ಕೋಚಿಂಗ್ ಇಲ್ಲದೇ ಫಸ್ಟ್ ಅಟೆಮ್ಟ್ ಅಲ್ಲಿ ಉತ್ತೀರ್ಣರಾಗುವುದು ಎಂದರೆ ಸಾಮಾನ್ಯವಾದ ವಿಚಾರವೇ?

ಯುಪಿಎಸ್ಸಿ ಯಲ್ಲಿ ಉತ್ತೀರ್ಣರಾದ ಬಳಿಕ ಅಪ್ರಸ್ತುತ ಗ್ವಾಲಿಯರ್ ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿದ್ದಾರೆ. 2021ರಲ್ಲಿ ಅವರು ಕಾಣುವ ಮುನ್ಸಿಪಲ್ ಕಾರ್ಪೋರೇಷನ್ ನ ಮೊದಲ ಮಹಿಳಾ ಆಯುಕ್ತರಾಗಿ ಆಯ್ಕೆಯಾಗುತ್ತಾರೆ.

ಐಪಿಎಸ್’ಸಿ ಆಗುತ್ತಿದ್ದಾಗೆ ಅತ್ತೆ-ಗಂಡನನ್ನ ಜೈಲಿಗೆ ಅಟ್ಟುತ್ತಾರೆ:

ಅಧಿಕಾರಿಯಾಗಿ ಸೇರ್ಪಡೆಯಾದ ಬಳಿಕ ಅವರು ಮಾಡಿದ ಮೊದಲ ಕೆಲಸವೇ ಅತ್ತೆ ಮತ್ತು ಗಂಡನ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನ ದಾಖಲಿಸಿ ಇಬ್ಬರನ್ನು ಜೈಲಿಗೆ ಕಳುಹಿಸುತ್ತಾರೆ. ಅಷ್ಟೇ ಅಲ್ಲ, ಇದಾದ ಬಳಿಕ ಅವರ ಹಾಗೆ ಕಷ್ಟ ಪಡುವ ಹೆಣ್ಣುಮಕ್ಕಳನ್ನು ಗುರುತಿಸಿ, ಅವರಿಗೆ ಸಹಾಯ ಮಾಡಲಾರಂಭಿಸುತ್ತಾರೆ. ಪ್ರಸ್ತುತ ಅವರ ಇಬ್ಬರು ಮಕ್ಕಳು ಕಾಲೇಜಿಗೆ ಹೋಗುತ್ತಿದ್ದು, ಇವರು ತಮ್ಮ ಸೇವೆಯನ್ನು ನಿಷ್ಕಲ್ಮಶವಾಗಿ ಮಾಡುತ್ತಿದ್ದಾರೆ.

You might also like
Leave A Reply

Your email address will not be published.