ರಾಜ್ಯ ಆಯವ್ಯಯಕ್ಕೆ ಕ್ಷಣಗಣನೆ – ಏನಿದೆ? ಏನಿಲ್ಲ? ಕುತೂಹಲ

ರಾಜ್ಯ ಸರ್ಕಾರದ ಪೂರ್ಣಾವಧಿ ಬಜೆಟ್ ಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. 2023ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದು, ಇದು ಅವರು ಮಂಡಿಸಲಿರುವ ದಾಖಲೆಯ 15ನೇ ಬಜೆಟ್ ಆಗಿದೆ. ಕಳೆದ ವರ್ಷ ಮಧ್ಯಂತರ ಬಜೆಟ್ ಮಂಡಿಸಿದ್ದು, ಇದೀಗ ಪೂರ್ಣಾವಧಿ ಬಜೆಟ್ ಮಂಡಿಸುತ್ತಿರುವುದರಿಂದ ರಾಜ್ಯದ ಜನರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಬೆಳಗಾವಿ ಮತ್ತು ತುಮಕೂರು ಜಿಲ್ಲೆ ವಿಭಜನೆ ಫಿಕ್ಸ್ ಆಗುತ್ತಾ?

ಇದೇ ಫೆಬ್ರವರಿ 8ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ, ಅಸ್ತಿತ್ವದಲ್ಲಿ ಇರೋ ಜಿಲ್ಲೆಗಳ ಮಿತಿಯನ್ನು ಪುನರ್ ರಚಿಸುವ ಬಗ್ಗೆ ಉಲ್ಲೇಖಿಸಿತ್ತು. ನೋಂದಣಿ ಕಾಯ್ದೆ 1908 (ಕೇಂದ್ರ ಅಧಿನಿಯಮ 16, 1908) ಅಡಿಯಲ್ಲಿ ಜಿಲ್ಲೆಗಳ ಮಿತಿಯನ್ನು ಪುನರ್ ರಚಿಸುವ ಬಗ್ಗೆ ಉಲ್ಲೇಖಿಸಿತ್ತು. ಈ ಪೈಕಿ ರಾಜ್ಯದಲ್ಲಿ ದೊಡ್ಡ ಜಿಲ್ಲೆಗಳಾಗಿರುವ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳ ಹೆಸರನ್ನು ಉಲ್ಲೇಖಿಸಲಾಗಿತ್ತು.

Countdown to State Budget - What's in? what not? curiosity

ಬಜೆಟ್ನಲ್ಲಿ ಸರ್ಕಾರ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡುವ ಸಾಧ್ಯತೆಗಳಿದ್ದು, ಬೆಳಗಾವಿ ಮತ್ತು ತುಮಕೂರು ಜಿಲ್ಲೆ ವಿಭಜನೆ ಫಿಕ್ಸ್ ಆಗುತ್ತಾ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ.

ಸದ್ಯ ಜಿಲ್ಲೆಗಳ ವಿಭಜನೆಯ ಸದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರತ್ಯೇಕ ಜಿಲ್ಲೆಗಾಗಿ ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ ಹಾಗೂ ಅಥಣಿ ನಡುವೆ ಫೈಟ್ ನಡೆಯುತ್ತಿದ್ದು, ಜನಪ್ರತಿನಿಧಿಗಳು ಅಲರ್ಟ್ ಆಗಿದ್ದಾರೆ.

You might also like
Leave A Reply

Your email address will not be published.