ಕಸದಿಂದ ರಸ – ರಸದ ರಾಶಿಯಲ್ಲಿ ಕೋಟಿ ಕೋಟಿ ದುಡ್ಡು

“ಕಸದಿಂದ ರಸ” ಎಂಬ ಗಾದೆ ಎಲ್ರಿಗೂ ಗೊತ್ತು. ಆದ್ರೆ “ಕಸದಿಂದ ಕಂತೆ ಕಂತೆ ದುಡ್ಡು” ಎಂಬುದು ಕೇಳಿದ್ದೀರಾ? ಇಲ್ಲಿ ಕಸದ ರಾಶಿ ನಿಮ್ಮೊಟ್ಟಿಗಿದ್ದರೆ ಖಂಡಿತ ಕೋಟ್ಯಾಧಿಪತಿ ಆಗ್ತಿರ.. ಯಾವುದಪ್ಪ ಆ ಸ್ಥಳ ಅಂತೀರ? ಈ ಸ್ಟೋರಿ ಓದಿ ಹಾಗೆ ಹಣ ಗಳಿಸಿ!

ಪ್ರತಿದಿನದ ಕಸದ ರಾಶಿಯಿಂದ ಇ- ತ್ಯಾಜ್ಯಗಳನ್ನು ಹೆಕ್ಕುವ ಮೂಲಕ ಚಿಂದಿ ಆಯುವವರು ಒಟ್ಟಾರೆ ದಿನಕ್ಕೆ 1.5 ಕೋಟಿ ರೂ. ಹಣ ಗಳಿಸುತ್ತಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿ ನಗರದಲ್ಲಿ ನಡೆದಿದೆ.

ಕಸದಿಂದ ರಸ - ರಸದ ರಾಶಿಯಲ್ಲಿ ಕೋಟಿ ಕೋಟಿ ದುಡ್ಡು

ಇದು ಅಚ್ಚರಿ ಅನಿಸಿದ್ರು ಸತ್ಯ. ಯಾಕಂದ್ರೆ ಪ್ರೆಸ್ಟಿಜ್ ಅನ್ನೋ ನಾವುಗಳು ದಿನದ 24 ತಾಸು ಇದೆ ದುಡ್ಡಿಗಾಗಿ ಹಗಲಿರುಳು ಲೆಕ್ಕಿಸದೆ ದುಡಿತಾನೆ ಇರ್ತಿವಿ. ಆದ್ರು ಕೋಟ್ಯಾಧಿಪತಿ ಬಿಡಿ.. ಲಕ್ಷ್ಯಾಧಿಪತಿಯು ಆಗಿಲ್ಲ.. ದೆಹಲಿಯಲ್ಲಿರುವ ಚಿಂದಿ ಆಯುವವರು ಇ ವೇಸ್ಟ್ ಹೆಕ್ಕುವ ಮೂಲಕ ಕೋಟ್ಯಾಧಿಪತಿ ಆಗ್ತಿದ್ದಾರೆ ಅಂದ್ರೆ ಇಲ್ಲಿ ಯಾರು ಗ್ರೇಟ್ ಅನ್ನೊದನ್ನೊಮ್ಮೆ ಮೆಲುಕು ಹಾಕಿ ನೋಡ್ಬೇಕು.

ಅಡ್ಮಿನಿಸ್ಟ್ರೇಟಿವ್‌ ಸ್ಟಾಫ್‌ ಕಾಲೇಜ್‌ ಆಫ್‌ ಇಂಡಿಯಾ ನಡೆಸಿದ ಲೆಕ್ಕಪರಿಶೋಧನೆಯಲ್ಲಿ ಈ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಹಾಗಾದ್ರೆ ಏನಿದು ಕಸದಿಂದ ಕೋಟಿ?

ದೆಹಲಿಯಲ್ಲಿ ಪ್ರತಿ ದಿನ 11,030 ಮೆಟ್ರಿಕ್‌ ಟನ್‌ಗಳಷ್ಟು ಕಸ ಉತ್ಪಾದನೆಯಾಗುತ್ತದೆ. ಇಲ್ಲಿನ ನಿವಾಸಿಗಳು ಎಸೆಯುವ ಈ ಬೃಹತ್ ಪ್ರಮಾಣದ ಕಸದ ಶೇ.10ರಷ್ಟು ಅಥವಾ 1.10 ಲಕ್ಷ ಕೇಜಿ ಪ್ಲ್ಯಾಸ್ಟಿಕ್‌, ಕಬ್ಬಿಣ, ಕಾಗದ, ರಟ್ಟು, ರಬ್ಬರ್‌ ಮತ್ತು ಇತರ ಇ- ತ್ಯಾಜ್ಯವಿರುತ್ತದೆ. ಅಂದರೆ ದೆಹಲಿ ನಿವಾಸಿಗಳು ಪ್ರತಿ ನಿತ್ಯ 1.5 ಕೋಟಿ ರೂ. ಮೌಲ್ಯದ ಪ್ಲ್ಯಾಸ್ಟಿಕ್‌ ಮತ್ತು ಕಬ್ಬಿಣವನ್ನು ಎಸೆಯುತ್ತಾರೆ.

ಕಸದಿಂದ ರಸ - ರಸದ ರಾಶಿಯಲ್ಲಿ ಕೋಟಿ ಕೋಟಿ ದುಡ್ಡು

ನಗರದ ಎಲ್ಲೆಡೆ ಈ ಕಸದಲ್ಲಿ ಚಿಂದಿ ಆಯುವವರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪ್ರತಿ ಕೆಜಿಗೆ 12 ರೂ.ಗಳಿಗೆ ಮಾರಾಟ ಮಾಡುತ್ತಾರೆ. ಈ ಪ್ರಕಾರ ಪ್ರತಿದಿನ ನಗರದಲ್ಲಿ ಎಲ್ಲ ಚಿಂದಿ ಆಯುವವರು ಒಟ್ಟಾರೆ ಪ್ಲಾಸ್ಟಿಕ್‌ ಮೂಲಕವೇ ಬರೋಬ್ಬರಿ 1.32 ಕೋಟಿ ರೂ. ಗಳಿಸುತ್ತಾರೆ. ಇದರೊಂದಿಗೆ ಕಬ್ಬಿಣ ಹಾಗೂ ಇತರ ತ್ಯಾಜ್ಯಗಳು ಸೇರಿದರೆ ಈ ಪ್ರಮಾಣ ಒಟ್ಟು 5 ಕೋಟಿ ರೂ.ಗೂ ಏರಿಕೆಯಾಗುತ್ತದೆ.

ಅಂದರೆ ಕಸದಲ್ಲಿ ಚಿಂದಿ ಆಯುವ ಪ್ರತಿ ವ್ಯಕ್ತಿ ಪ್ರತಿ ದಿನ 14 ಸಾವಿರ ರೂ.ಗಳಿಗಿಂತ ಹೆಚ್ಚು ಗಳಿಕೆ ಮಾಡುತ್ತಾರೆ ಮತ್ತು ಅವರ ಮೇಲಿನ ಗುತ್ತಿಗೆದಾರ 25 ಸಾವಿರ ರೂ. ಗಳಿಸುತ್ತಾನೆ ಎಂದು ವರದಿ ಹೇಳಿದೆ.

You might also like
Leave A Reply

Your email address will not be published.