ಜೈ ಶ್ರೀರಾಮ್ ಹಾಡಿಗೆ ಟೆಸ್ಲಾ ಡಾನ್ಸ್

ನೂರಾರು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿರುವುದಕ್ಕೆ ರಾಮಭಕ್ತರು ಸಂತಸಗೊಂಡಿದ್ದಾರೆ. ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಇಡೀ ಅಯೋಧ್ಯೆ ರಾಮಮಯವಾಗಿ ಸಿಂಗಾರಗೊಳ್ಳುತ್ತಿದೆ. ದೇಶ-ವಿದೇಶಗಳಲ್ಲೂ ಶ್ರೀರಾಮನ ಮಹಿಮೆ ಕಂಡುಬರುತ್ತಿವೆ. ಈ ನಡುವೆ ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ (Tesla Car), ಆದಿಪುರುಷ್ ಚಿತ್ರದ ʻಜೈ ಶ್ರೀರಾಮ್, ಜೈ ಶ್ರೀರಾಮ್ ರಾಜಾರಾಮ್ʼ ಹಾಡಿಗೆ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ ಮಾಡಿಸಿದೆ.

ವಿಶ್ವಹಿಂದೂ ಪರಿಷತ್ ಅಮೆರಿಕದ ಘಟಕ ಆಯೋಜಿಸಿದ್ದ ಮ್ಯೂಸಿಕಲ್ ಲೈಟ್ಶೋ ಕಾರ್ಯಕ್ರಮದಲ್ಲಿ ಟೆಸ್ಲಾ ಕಂಪನಿಯ ಕಾರುಗಳ ಲೈಟ್ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಹಿಂದೆಯೂ ನೂರಾರು ಕಾರುಗಳನ್ನು ಸಾಲು-ಸಾಲಾಗಿ ನಿಲ್ಲಿಸಿ, ಆರ್.ಆರ್.ಆರ್ ಚಿತ್ರದ ನಾಟು ನಾಟು ಹಾಡಿಗೆ ಇದೇ ರೀತಿ ಡಾನ್ಸ್ ಮಾಡಿಸಲಾಗಿತ್ತು.

ಇದೀಗ, ದೇಶದೆಲ್ಲೆಡೆ ಶ್ರೀರಾಮನ ಸದ್ದು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ನೃತ್ಯದ ಮೂಲಕ ವಿಶೇಷ ಗೌರವವನ್ನು ಟೆಸ್ಲಾ ಕಂಪನಿ ಸಲ್ಲಿಸಿದೆ. ಈ ವೀಡಿಯೋವನ್ನು ಟೆಸ್ಲಾ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ರಾಮಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You might also like
Leave A Reply

Your email address will not be published.