ಮುಸ್ಲಿಮರು ‘ಜೈ ಶ್ರೀ ರಾಮ್’ ಕೂಗಿರುವುದು ಸಂತಸಕರ – ಮುಸ್ಲಿಮ್ ರಾಷ್ಟ್ರೀಯ ಮಂಚ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಶೇ.74ರಷ್ಟು ಮುಸ್ಲಿಂರು ಸಂತಸಗೊಂಡಿದ್ದು, ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೆಚ್ಚಾಗಿ ನಂಬಿದ್ದಾರೆ. ಇವರೆಲ್ಲ ಭಾರತದ ವಿಶ್ವಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ ಅಸಂಖ್ಯಾತ ಮುಸ್ಲಿಂರು ಜೈ ಶ್ರೀರಾಮ್ ಎಂದು ಬಹಿರಂಗವಾಗಿ ಹೇಳಿರುವುದು ಸಂತಸಕರ ಎಂದು ರಾಷ್ಟ್ರೀಯವಾದಿ ಮುಸ್ಲಿಂ ಸಂಘಟನೆ `ಮುಸ್ಲಿಂ ರಾಷ್ಟ್ರೀಯ ಮಂಚ್’ ಹೇಳಿಕೊಂಡಿದೆ.

ಗುಜರಾತ್‍ನ ಸ್ವತಂತ್ರ ಸಂಶೋಧನಾ ಮತ್ತು ಸಮೀಕ್ಷಾ ಸಂಸ್ಥೆ `ಆಯುರ್ವೇದ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್’ ಮೂಲಕ ದೇಶದ ಮುಸ್ಲಿಂರ ಸಮೀಕ್ಷೆ ನಡೆಸಿ ಈ ಬಗ್ಗೆ ವರದಿ ಬಿಡುಗಡೆ ಮಾಡಿರುವ ಕುರಿತು ಎಂ.ಆರ್‍.ಎಂ ಪತ್ರಿಕಾ ಪ್ರಕಟಣೆಯಯಲ್ಲಿ ತಿಳಿಸಿದೆ.

ಮೋದಿ ಅವರು ಭಾರತದ ಅತ್ಯಂತ ಯಶಸ್ವಿ ಪ್ರಧಾನಿಯಾಗಿದ್ದು, ಅವರ ಮಾತುಗಳನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತು ಕೇಳುತ್ತದೆ ಮತ್ತು ಸ್ವೀಕರಿಸುತ್ತದೆ. ಅಲ್ಲದೇ ಅಸಂಖ್ಯಾತ ಮುಸ್ಲಿಂರು ಇಸ್ಲಾಮ್ ಹೆಸರಿನಲ್ಲಿ ತಮ್ಮ ರಾಜಕೀಯ ಹಿತಾಸಕ್ತಿಗೆ ಪ್ರಯತ್ನಿಸುತ್ತಿರುವ ಉಲೇಮಾಗಳು, ಮೌಲಾನಾಗಳು ಮತ್ತು ವಿರೋಧ ಪಕ್ಷದ ನಾಯಕರನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎಂಆರ್ಎಂ ಹೇಳಿಕೊಂಡಿದೆ.

ಸಮೀಕ್ಷೆಯ ವೇಳೆ ಮೋದಿ ಸರ್ಕಾರದ ಅಡಿಯಲ್ಲಿ ಮುಸ್ಲಿಂರು ಸುರಕ್ಷಿತರಾಗಿದ್ದಾರೆ. ಅಲ್ಲದೇ ಎಲ್ಲರಿಗೂ ಅಭಿವೃದ್ಧಿಗೆ ಸಮಾನ ಅವಕಾಶವಿದೆ. ಹಾಗೂ ಇಸ್ಲಾಂ ಧರ್ಮದಲ್ಲಿ ಅನ್ಯ ಧರ್ಮದವರ ಪವಿತ್ರ ಸ್ಥಳವನ್ನು ನಾಶಮಾಡಿ ನಿರ್ಮಿಸಿದ ಮಸೀದಿಯಲ್ಲಿ ಪೂಜೆ ಸಲ್ಲಿಸುವುದು ಹರಾಮ್ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಎಂಆರ್ಎಂ ಹೇಳಿಕೊಂಡಿದೆ.

You might also like
Leave A Reply

Your email address will not be published.