ದಲಿತ ಚಾಲಕನಿಗೆ ಮುಸ್ಲಿಮ್ ಯುವಕರಿಂದ ಅವಮಾನ ; ಗುರಿಯಾದದ್ದು ಮಾತ್ರ ಚಂದ್ರಯಾನ.

ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಅರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಜನ ಮುಸ್ಲಿಂ ಲಾರಿ ಚಾಲಕರು ಇನ್ನೋರ್ವ ದಲಿತ ಲಾರಿ ಚಾಲಕನನ್ನು ಚಪ್ಪಲಿ ಹಾರ ಹಾಕಿ ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬಳಿಕ ಕೆಲವು ಪತ್ರಿಕೆಗಳು ಈ ಪ್ರಕರಣವನ್ನು ವರದಿ ಮಾಡಿದ್ದವು. ಅದನ್ನು ಆದರಿಸಿ ತಪ್ಪಿತಸ್ಥರನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನು ಕೆಲವು ಪತ್ರಿಕೆಗಳು ಒಂದು ಹೆಜ್ಜೆ ಮುಂದೆ ಹೋಗಿ ಘಟನೆಗೆ ರಾಷ್ಟ್ರೀಯ ವಾದಿಗಳನ್ನು ಗುರಿಯಾಗಿಸಿದ್ದಾರೆ.

ಭಾರತಿಯ ನ್ಯಾಯ ಸಂಹಿತೆಯ ಪ್ರಕಾರ ಹೊಸದಾಗಿ ಜಾರಿಗೊಳಿಸಿರುವ ‘ಹಿಟ್ ಅಂಡ್ ರನ್’ ಕಾಯಿದೆಯನ್ನು ವಿರೋಧಿಸಿ ಹಲವು ಚಾಲಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಲಿತ ಚಾಲಕ ತನ್ನ ಲಾರಿಯಲ್ಲಿ ಆ ಮಾರ್ಗವಾಗಿ ಹಾದು ಹೋಗುತ್ತಿರಲಾಗಿ ಅಡ್ಡಗಟ್ಟಿದ ಸಲ್ಮಾನ್ ಖಾನ್, ಅಲ್ತಾಫ್ ಖಾನ್, ರಖೀಬ್ ಖಾನ್ ಮತ್ತು ಇರ್ಫಾನ್ ಖಾನ್ ಎಂಬ ನಾಲ್ಕುಜನ ತಮಗೆ ಬೆಂಬಲಿಸದ್ದಕ್ಕೆ ದಲಿತ ಚಾಲಕನಿಗೆ ಚಪ್ಪಲಿಯ ಹಾರ ಹಾಕಿ ಅವಮಾನಿಸಿದ್ದಾರೆ. ಹೇಗೋ ಘಟನೆ ನಡೆದ ಸ್ಥಳದಿಂದ ತಪ್ಪಿಸಿಕೊಂಡ ಚಾಲಕ ನೇರವಾಗಿ ಪೋಲಿಸ್ ಠಾಣೆಗೆ ಹೋಗಿ ಕಂಪ್ಲೈಂಟ್ ಕೊಡಲಾಗಿ ಪೋಲಿಸರು ಐಪಿಸಿ ಸೆಕ್ಷನ್ಸ್ 341, 294, 323, 355, 506, ಮತ್ತು 34, ಎಸ್ ಸಿ, ಎಸ್ ಟಿ ಕಾಯ್ದೆ 3(1)(d),3(2)(VA),3(1)(D),3(1)(E) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇನ್ನು ಕೆಲವು ಮಾಧ್ಯಮಗಳು ಘಟನೆಗೆ ಸಂಬಂಧವೇ ಇಲ್ಲದಿದ್ದರು ಚಂದ್ರಯಾನದ ಯಶಸ್ಸಿನ ಸಂಧರ್ಭವನ್ನು ಘಟನೆಗೆ ತಳುಕು ಹಾಕಲು ನಡೆಸಿದ ಪ್ರಯತ್ನ ನೋಡಿ, ನೆಟ್ಟಿಗರು ಘಟನೆ ನಡೆಸಿದ ಅಪರಾಧಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿವುದು ಬಿಟ್ಟು ಚಂದ್ರಯಾನ ಹೊಣೆ ಮಾಡುವುದು ಎಷ್ಟು ಸರಿ ಅದಕ್ಕೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸುತ್ತಿದ್ದಾರೆ.

You might also like
Leave A Reply

Your email address will not be published.