ಮೋದಿ ಭಕ್ತನೂ ಅಲ್ಲ, ವಿವೇಕಾನಂದರ ಶಿಷ್ಯನೂ ಅಲ್ಲ. ಯಾರಿವನು ಮನೋರಂಜನ್? – ಸದನ ಹೊಕ್ಕವನ ನಿಜಬಣ್ಣ ನೀವೇ ಓದಿ.

2001ರ ಸಂಸತ್ ದಾಳಿಯ ಸ್ಮರಣೆಯಂದೇ ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿರುವ ಮೈಸೂರಿನ ಮನೋರಂಜನ್ ಮೋದಿ ಭಕ್ತ, ಬಿಜೆಪಿಯವನು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ಅವರಿಂದ ಲೋಕಸಭೆ ಅಧಿವೇಶನ ಪ್ರವೇಶಿಸಲು ಅನುಮತಿ ಪಡೆದ ಹಿನ್ನೆಲೆಯಲ್ಲಿ ಈ ವಾದಕ್ಕೆ ಮತ್ತಷ್ಟು ಪುಷ್ಠಿ ದೊರೆತಂತಾಗಿತ್ತು. ಆದ್ದರಿಂದ ಯಾರು ಈ ಮನೋರಂಜನ್, ಈತನ ಹಿನ್ನೆಲೆ ಏನು ಎನ್ನುವ ಬಗ್ಗೆ ನೋಡೋಣ.

ಡಿಸೆಂಬರ್ 13, ಮಂಗಳವಾರ ನೂತನ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು. ಪ್ರತಿವರ್ಷದಂತೆಯೇ ಈ ವರ್ಷವೂ 2001ರ ಸಂಸತ್ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿ ಸದನ ಆರಂಭಿಸಲಾಗಿತ್ತು. ಸರಿ ಸುಮಾರು 1 ಗಂಟೆಗೆ ಪ್ರೇಕ್ಷಕರ ಗ್ಯಾಲರಿಯಿಂದ ಸಂಸದರ ಗ್ಯಾಲರಿಗೆ ಜಿಗಿದ ಇಬ್ಬರು ಆಗುಂತಕರು ದಾಂಧಲೆ ನಡೆಸಿ, ಕೆಮಿಕಲ್ ಸ್ಪ್ರೇ ಮಾಡಿ ಗೊಂದಲ ಸೃಷ್ಠಿಸಿದರು. ಸಂಸದರೇ ಇಬ್ಬರನ್ನೂ ಸೆರೆಯಿಡಿದು, ಸಾಧ್ಯವಾದಷ್ಟು ಪೆಟ್ಟು ನೀಡಿದ ಸಂಗತಿಯನ್ನು ದೂರದರ್ಶನ ನೇರಪ್ರಸಾರದಲ್ಲಿ ನಾವೆಲ್ಲರೂ ಸಾಕ್ಷೀಭೂತರಾಗಿದ್ದೇವೆ.

ಈ ಘಟನೆ ಬೆನ್ನಲ್ಲೇ, ಇಬ್ಬರನ್ನೂ ಮೈಸೂರಿನ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿತ್ತು ಮತ್ತು ಸಂಸದ ಪ್ರತಾಪ್ ಸಿಂಹರ ಶಿಫಾರಸ್ಸಿನ ಮೇಲೆ ಸದನ ಪ್ರವೇಶಿಸಿದ್ದರು ಎನ್ನುವ ಬಗ್ಗೆ ವರದಿಯಾಗಿತ್ತು. ಈ ಬೆನ್ನಲ್ಲೇ, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮನೋರಂಜನ್ ಅವರ ತಂದೆ ದೇವರಾಜೇಗೌಡ ಅವರು, ಪುತ್ರ ವಿವೇಕಾನಂದರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಹಾಗೂ ಮೋದಿಯವರ ಅಭಿಯಾನಿ ಎಂದು ಹೇಳಿದ್ದರು. ಇದಾದ ಕ್ಷಣಗಳಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಮೋದಿ ಭಕ್ತನಿಂದ ಸಂಸತ್ ಮೇಲೆ ದಾಳಿ ಎಂದು ಅರಚಾಟ ಆರಂಭವಾಗಿತ್ತು.

ಯಾರು ಈ ಮನೋರಂಜನ್?

ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿರುವ ಮೈಸೂರಿನ ಮನೋರಂಜನ್
ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿರುವ ಮೈಸೂರಿನ ಮನೋರಂಜನ್

ಮೈಸೂರಿನ ದೇವರಾಜೇಗೌಡ ಅವರ ಪುತ್ರ ಮನೋರಂಜನ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿ ಸೇರಿಕೊಂಡಿದ್ದ. ಕಾಂಗ್ರೆಸ್ ಪರವಾಗಿರುವ, ಪ್ರತಿಭಟನೆಯನ್ನೇ ವೃತ್ತಿಯಾಗಿಸಿಕೊಂಡಿದ್ದ ನೀಲಮ್ ಕೌರ್ ಹಾಗೂ ಸಾಗರ್ ಶರ್ಮಾ ಎನ್ನುವವರ ಸ್ನೇಹ ಮಾಡಿದ್ದ. ನೀಲಮ್ ಕೌರ್ ಕಾಂಗ್ರೆಸ್ ಪರವಾಗಿ ಮತ ಪ್ರಚಾರ ಮಾಡುವ ವಿಡಿಯೋಗಳು ದೊರಕಿವೆ.

ಈತನ ಮನೆಯಲ್ಲಿ ಎಡಪಂಥೀಯ ಹಾಗೂ ಕ್ರಾಂತಿಕಾರಿ ವಿಚಾರಧಾರೆಯ ಪುಸ್ತಕಗಳೇ ದೊರೆತಿದೆ. ಇದರಲ್ಲಿ ಒಂದೇ ಒಂದು ಪುಸ್ತಕವೂ ಬಲಪಂಥೀಯ ಅಥವಾ ವಿವೇಕಾನಂದರ ಪುಸ್ತಕಗಳು ದೊರೆತಿಲ್ಲ. ಇದರಿಂದಲೇ ಆತ ಎಡಪಂಥೀಯ ವಿಚಾರದಾರೆಯವನೆಂಬುದು ಸಾಬೀತಾಗುತ್ತದೆ.

ಮನೆಯಲ್ಲಿ ಎಡಪಂಥೀಯ ಹಾಗೂ ಕ್ರಾಂತಿಕಾರಿ ವಿಚಾರಧಾರೆಯ ಪುಸ್ತಕ
ಮನೆಯಲ್ಲಿ ಎಡಪಂಥೀಯ ಹಾಗೂ ಕ್ರಾಂತಿಕಾರಿ ವಿಚಾರಧಾರೆಯ ಪುಸ್ತಕ

ಆದ್ದರಿಂದ, ಅವರ ತಂದೆ ದೇವರಾಜೇಗೌಡರು ಹೇಳಿದಂತೆ ಆತ ವಿವೇಕಾನಂದರ ಪುಸ್ತಕಗಳನ್ನು ಓದುತ್ತಿದ್ದ, ಬಿಜೆಪಿ ಪರವಾಗಿದ್ದ ಎಂಬುದೆಲ್ಲ ಬೋಗಸ್ ಎಂಬುದು ರುಜುವಾತಾದಂತೆ ಆಗಿದೆ. ಬಂಧನದಲ್ಲಿ ಈತನ ವಿಚಾರಣೆ ನಡೆಸಲಾಗುತ್ತಿದೆ. ಈ ಷಡ್ಯಂತ್ರದ ಹಿಂದೆಯಿರುವ ಕಾರಣಗಳು ಶೀಘ್ರವೇ ಹೊರಬರಲಿವೆ.

You might also like
Leave A Reply

Your email address will not be published.