ಯುಧಿಷ್ಠರ ನೀಡಿದ ಶಾಪದಿಂದ ಇಂದಿಗೂ ಬಳಲುತ್ತಿರುವ ಮಹಿಳೆಯರು : ಆ ಶಾಪ ಮತ್ತು ಶಾಪ ನೀಡಲು ಕಾರಣವೇನು ಗೊತ್ತೇ?

ಧರ್ಮ‍ವನ್ನೇ ಎತ್ತಿ ಹಿಡಿಯುವ ಮಹಾಭಾರತದಲ್ಲಿ ಅಧರ್ಮದ ಮಾರ್ಗದಲ್ಲಿ ನಡೆದವರೇ ಹೆಚ್ಚು ಎಂದರೆ ತಪ್ಪಾಗಲಾರದು. ಅಂತವರ ಮಧ್ಯೆ ಸತ್ಯ ಮತ್ತು ಧರ್ಮವನ್ನು ಎತ್ತಿ ಹಿಡಿದವನೆಂದರೆ ಯುಧಿಷ್ಠಿರ. ಈತ ಧರ್ಮರಾಜನೆಂದೇ ಪ್ರಸಿದ್ಧನಾದವನು. ಇತರರು ಕೂಡ ತನ್ನಂತೆ ಸತ್ಯದ ಮಾರ್ಗದಲ್ಲಿ ನಡೆಯಬೇಕೆಂದು ಬಯಸುವವನು. ಆದರೆ, ಅವನ ಸ್ವಂತ ತಾಯಿ ಕುಂತಿಯೇ ಆತನಿಗೆ ಸುಳ್ಳು ಹೇಳಿದಾಗ ಕೋಪಗೊಂಡು ತನ್ನ ತಾಯಿ ಎಂಬುದನ್ನು ನೋಡದೆ ಕುಂತಿಯೊಂದಿಗೆ ಸಂಪೂರ್ಣ ಸ್ತ್ರೀ ಕುಲಕ್ಕೆ ಘೋರ ಶಾಪವನ್ನು ನೀಡುತ್ತಾನೆ. ಈ ಶಾಪ ಇಂದಿಗೂ ಪ್ರಸ್ತುತದಲ್ಲಿದೆ. ಅಷ್ಟಕ್ಕೂ ಸ್ತ್ರೀ ಕುಲಕ್ಕೆ ನೀಡಿದ ಶಾಪವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ…

ಮಹಾಭಾರತ ಯುದ್ಧದ ಸಮಯದಲ್ಲಿ ಅರ್ಜುನನು ಕರ್ಣನನ್ನು ಕೊಲ್ಲುತ್ತಾನೆ. ಕುಂತಿ ಕರ್ಣನ ಮೃತ ದೇಹವನ್ನು ನೋಡುತ್ತಿದ್ದಂತೆ ಜೋರಾಗಿ ಅಳುತ್ತಾ ಓಡಿ ಬಂದು ಅವನ ದೇಹವನ್ನು ತಬ್ಬಿಕೊಂಡು ಗೋಗರೆದಳು. ಕುಂತಿ ಪುತ್ರರು ತಮ್ಮ ತಾಯಿ ಕುಂತಿಯ ದುಃಖಕ್ಕೆ ಹೆಗಲಾಗುವ ಬದಲು ಆಶ್ಚರ್ಯಕ್ಕೆ ಒಳಗಾದರು. ನಮ್ಮ ತಾಯಿ ಯಾಕೆ ಹೀಗೆಲ್ಲಾ ವರ್ತಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿಯದೇ ಹೋಯಿತು. ಏಕೆಂದರೆ ಕರ್ಣ ಇವರಿಗೆ ಶತ್ರುವಾಗಿದ್ದ. ಶತ್ರು ಮರಣ ಹೊಂದಿದ ತಕ್ಷಣ ನಮ್ಮ ತಾಯಿ ಯಾಕೆ ಅಳುತ್ತಿದ್ದಾಳೆ ಎಂದು ಯೋಚಿಸಲಾರಂಭಿಸಿದರು. ನಂತರ ಪಾಂಡುವಿನ ಮಗ ತಾಯಿ ಕುಂತಿಯನ್ನು ಕುರಿತು ನಮ್ಮ ಶತ್ರು ಕರ್ಣನ ದೇಹವನ್ನು ನೋಡಿ ಇಷ್ಟೊಂದು ಅಳಲು ಕಾರಣವೇನೆಂದು ಕೇಳುತ್ತಾನೆ.

ಒಡಲೊಳಗಿನ ಸತ್ಯ ಬಹಿರಂಗವಾದ ಪ್ರಸಂಗ:

ಬಳಿಕ ಕುಂತಿಯು ತನ್ನ ಒಡಲೊಳಗಿನ ಸತ್ಯವನ್ನು ನುಂಗಿಕೊಳ್ಳಲಾಗದೆ ಪಾಂಡು ಪುತ್ರರಿಗೆ ಕರ್ಣ ನಿಮ್ಮ ಶತ್ರುವಲ್ಲ, ಕರ್ಣ ನಿಮ್ಮೆಲ್ಲರ ಸಹೋದರ ಎನ್ನುವ ಕಟು ಸತ್ಯವನ್ನು ಹೇಳುತ್ತಾಳೆ. ತನಗೆ ಮದುವೆಯಾಗುವ ಮೊದಲೇ ಓರ್ವ ಮಗನಿದ್ದ. ಆತನೇ ಈ ಕರ್ಣ ಎಂದು ಹೇಳುತ್ತಾಳೆ. ದುರ್ವಾಸ ಮುನಿಗಳಿಂದ ಮಂತ್ರವನ್ನು ಪಡೆದುಕೊಂಡು ಕರ್ಣನಿಗೆ ಜನ್ಮ ನೀಡಿರುವ ವಿಚಾರವನ್ನು ತಿಳಿಸುತ್ತಾಳೆ.

Women are still suffering from Yudhishthara's curse: Do you know the reason for that curse?

ಯುದಿಷ್ಠಿರ ಸ್ತ್ರೀ ಕುಲಕ್ಕೆ ಶಪಿಸಿದ ಶಾಪವೇನು?

ತಾಯಿ ಕುಂತಿಯಿಂದ ಇದನ್ನು ಕೇಳಿದ ಧರ್ಮರಾಜ ಯುಧಿಷ್ಠಿರನಿಗೆ ತನ್ನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ನಮ್ಮ ಮತ್ತು ಕರ್ಣನ ತಾಯಿಯಾಗಿ ಈ ಸತ್ಯವನ್ನು ನಮ್ಮಿಂದ ಮರೆಮಾಚಿದ್ದರಿಂದ ನಾವು ಸಹೋದರನನ್ನೇ ಕೊಂದ ಕಳಂಕಕ್ಕೆ ಒಳಗಾಗಿದ್ದೇವೆ ಎಂದು ಕೋಪವನ್ನು ಹೊರಹಾಕುತ್ತಾನೆ. ಈ ಸಮಯದಲ್ಲಿ ಯುಧಿಷ್ಠಿರನು ತಮ್ಮ ತಾಯಿ ಕುಂತಿ ಮಾಡಿದ ತಪ್ಪಿಗೆ ಬ್ರಹ್ಮಾಂಡದ ಸ್ತ್ರೀಕುಲವನ್ನೇ ಶಪಿಸುತ್ತಾನೆ.

ಅದೇನೆಂದರೆ, “ಮಹಿಳೆಯರು ಇಂದಿನಿಂದ ತಮ್ಮ ಮನಸ್ಸಿನಲ್ಲಿ ಯಾವುದೇ ವಿಚಾರವನ್ನು ಬಚ್ಚಿಟ್ಟುಕೊಳ್ಳದಂತಾಗಲಿ ಎಂದು ಶಪಿಸುತ್ತಾನೆ. ಅಂದಿನಿಂದ ಬ್ರಹ್ಮಾಂಡದ ಯಾವುದೇ ಮಹಿಳೆಗೆ ರಹಸ್ಯವನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ”.

ಆತನ ಶಾಪದ ಪರಿಣಾಮವಾಗಿ ಇಂದಿಗೂ ಮಹಿಳೆಯರಿಗೆ ತಮ್ಮ ಮನಸ್ಸಿನಲ್ಲಿ ರಹಸ್ಯವನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ.

You might also like
Leave A Reply

Your email address will not be published.