ಅಪ್ಪ ಮಕ್ಕಳಿಗೆ ಬೇಡವಾದ್ರು ಯತ್ನಾಳ್‌, ಸಿಟಿ ರವಿ, ಪ್ರತಾಪ್‌ ಸಿಂಹ – ಕಾರ್ಯಕರ್ತರ ಆಕ್ರೋಶ

“ಅಪ್ಪ ಮಕ್ಕಳಿಗೆ ಯತ್ನಾಳ್ ಬೇಡ, ಸಿಟಿ ರವಿ ಬೇಡ, ಸೋಮಣ್ಣ ಬೇಡ, ಎನ್.ಆರ್. ರಮೇಶ್ ಬೇಡ, ಈಶ್ವರಪ್ಪ ಬೇಡ ಇದೀಗ ಪ್ರತಾಪ್ ಸಿಂಹ ಸೇರಿದಂತೆ ಹಿಂದುತ್ವವೂ ಬೇಡ. ಎಲ್ಲವೂ ತನಗೆ ತನ್ನ ಕುಟುಂಬಕ್ಕೆ ಬೇಕು ಅಂದರೆ ಇನ್ನೂ ರಾಜ್ಯದಲ್ಲಿ ಹೇಗೆ ಬಿಜೆಪಿ ಬೆಳೆಯುತ್ತೆ ಸ್ವಾಮಿ?” ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದ್ದು, ಲೋಕಸಭೆಯ ರಾಜ್ಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಹುತೇಕ ರಾಜ್ಯದ ಜನತೆಗೆ ನಿರಾಸೆಯನ್ನುಂಟು ಮಾಡಿದೆ ಎಂಬುದನ್ನು ಈ ಪೋಸ್ಟ್ ಎತ್ತಿ ಹಿಡಿಯುತ್ತಿದೆ. ಹಾಗಾದರೆ, ಈ ಬಾರಿಯು ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿತೇ? ಯಾರು ಆ 9 ಹಾಲಿ ಸಂಸದರು? ನಡೆದದ್ದಾರು ಏನು?

ಈ ಬಾರಿಯ ಲೋಕಸಭೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೈಲೆಂಟ್ ಹಾಗೆ ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದ್ದು, ತಮ್ಮ ನಿಲುವಿನಂತೆಯೇ ತಮ್ಮವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರು. ಹಾಗೆಯೇ ತಮ್ಮ ವಿರೋಧಿ ಗುಂಪಿನವರದ್ದು ಸದ್ದನ್ನು ಅಡಗಿಸಿದರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿರೋಧ ಎದುರಿಸಿದ್ದ ಶೋಭಾ ಕರಂದ್ಲಾಜೆಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಉಡುಪಿ-ಚಿಕ್ಕಮಗಳೂರಲ್ಲಿ ತಮ್ಮದೇ ಬಣದ ಕೋಟ ಶ್ರೀನಿವಾಸ ಪೂಜಾರಿಯನ್ನು ಕೂರಿಸಿದರು. ಹಾಗೆಯೇ ಹಲವು ಕ್ಷೇತ್ರಗಳಲ್ಲಿ ತಮ್ಮ ಮಾಸ್ಟರ್ ಪ್ಲ್ಯಾನ್ ನಂತೆ ಸೀಟು ಹಂಚಿಕೆ ಮಾಡುವಲ್ಲಿ ಸಫಲರಾದರು ಎಂಬ ಮಾತುಗಳು ಇದೀಗ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿ 2 ನೇ ಪಟ್ಟಿ ಬಿಡುಗಡೆಯಾಗಿದ್ದು, 9 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ ಅವರಲ್ಲಿ ಮರು ಸ್ಪರ್ಧೆಗೆ ತಯಾರಾಗಿದ್ದ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಮತ್ತು ಡಿ.ವಿ.ಸದಾನಂದ ಗೌಡ ಅವರಿಗೆ ತುಂಬಾ ನಿರಾಸೆಯಾಗಿದೆ.

ಡಿವಿಎಸ್ ಅವರದ್ದಂತೂ ವಿಶಿಷ್ಟ ಪ್ರಕರಣವೆಂದರೆ ತಪ್ಪಾಗಲಾರದು. ಯಾಕೆಂದರೆ, ಚುನಾವಣಾ ರಾಜಕಾರಣದಿಂದ ನಿವೃತ್ತರಾಗಿ ಘೋಷಿಸಿದ್ದ ಅವರು ನಂತರ ಆಸಕ್ತಿ ತೋರಿದ್ದರು. ತಮ್ಮ ಸ್ಪರ್ಧೆಗೆ ಕ್ಷೇತ್ರದಲ್ಲಿ ಒತ್ತಡವಿದೆ ಎಂದು ಹೇಳಿಕೊಂಡಿದ್ದರು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಂತದಲ್ಲೂ ತಾವು ಪ್ರಬಲ ಆಕಾಂಕ್ಷಿಯೆಂದು ಬಿಂಬಿಸಿಕೊಂಡಿದ್ದರು.

ಇನ್ನು, ಪಕ್ಷದ ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಯಾರನ್ನಾದರೂ ನಿಲ್ಲಿಸಿ ಗೆಲ್ಲಿಸಿಕೊಳ್ಳಬಹುದು ಎನ್ನುವುದು ಬಿಜೆಪಿಯ ಲೆಕ್ಕಾಚಾರ. ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷರಾಗಿದ್ದವರು. ಅವರ ಕುರಿತು ಇತ್ತೀಚೆಗೆ ಕ್ಷೇತ್ರದಲ್ಲಿ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದವು. ಹಾಗಿದ್ದರೂ, ಅವರು ಮತ್ತೊಮ್ಮೆ ಅವಕಾಶದ ನಿರೀಕ್ಷೆಯಲ್ಲಿದ್ದರು. ಪ್ರತಾಪ್ ಸಿಂಹ ಅವರಂತೂ ಹೈಕಮಾಂಡ್’ನೊಂದಿಗೆ ಉತ್ತಮ ಸಂಪರ್ಕವಿರುವ ಕಾರಣ ಟಿಕೆಟ್ ಪಕ್ಕಾ ಎಂದು ಭಾವಿಸಿದ್ದರು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದೆ.

Yatnal, CT Ravi, Pratap Sinha do not want Bsy and Byv - outrage of activists

ಆ 9 ಹಾಲಿ ಸಂಸದರು ಯಾರು ಎಂಬುದನ್ನು ನೋಡುವುದಾದರೆ,

1. ಡಿ.ವಿ.ಸದಾನಂದಗೌಡ
2. ವಿ. ಶ್ರೀನಿವಾಸ ಪ್ರಸಾದ್
3. ಜಿ.ಎಸ್. ಬಸವರಾಜು
4. ಕರಡಿ ಸಂಗಣ್ಣ
5. ಜಿ.ಎಂ. ಸಿದ್ಧೇಶ್ವರ್
6. ನಳಿನ್ ಕುಮಾರ್ ಕಟೀಲ್
7. ಪ್ರತಾಪ್ ಸಿಂಹ
8. ಶಿವಕುಮಾರ ಉದಾಸಿ
9. ದೇವೇಂದ್ರಪ್ಪ

You might also like
Leave A Reply

Your email address will not be published.