ಅಶ್ಲೀಲ ವಿಡಿಯೋ ಹಾಗೂ ಕಾರ್ಯಕ್ರಮಗಳ ಪ್ರಸಾರ : 18 OTT, 10 ವೆಬ್ಸೈಟ್‌ʼಗಳು ಬ್ಯಾನ್

ಅಶ್ಲೀಲ ವಿಡಿಯೋ ಹಾಗೂ ಕಾರ್ಯಕ್ರಮಗಳ ಪ್ರಸಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಾಗಲೇ ಅಶ್ಲೀಲ, ಅಸಭ್ಯ, ನಿಂದನೆ ಹಾಗೂ ಪೋರ್ನೋಗ್ರಾಫಿಕ್ ದೃಶ್ಯಗಳನ್ನು ಪ್ರದರ್ಶಿಸದಂತೆ ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದರೂ ಅದಕ್ಕೆ ಕಿವಿಗೊಡದೆ ನಿರ್ಲಕ್ಷಿಸಿದ ಆನ್ಲೈನ್ ಮಾಧ್ಯಮಗಳ ವಿವಿಧ ವೇದಿಕೆಗಳಾದ ಒಟಿಟಿಗಳು, ಆಪ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಯಾವುದೇ ಮುಲಾಜಿಲ್ಲದೇ ಬ್ಲಾಕ್ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದೆ. ಹಾಗಾದ್ರೆ ಬ್ಯಾನ್‌ ಆದ ಒಟಿಟಿ ಫ್ಲಾಟ್’ಫಾರ್ಮ್ ಗಳು ಯಾವವು? ಬನ್ನಿ ನೋಡೋಣ.

ಕೇಂದ್ರ ಸರ್ಕಾರವು ‘ಸೃಜನಶೀಲ ಅಭಿವ್ಯಕ್ತಿ’ ಹೆಸರಿನಲ್ಲಿ ಅಶ್ಲೀಲ, ಅಸಭ್ಯ ಹಾಗೂ ನಿಂದನೆಗಳನ್ನು ಹಾಗೂ ಪೋರ್ನೋಗ್ರಾಫಿಕ್ ದೃಶ್ಯಗಳ ಪ್ರಸಾರವನ್ನು ಮಾಡದಂತೆ ಎಚ್ಚರಿಕೆ ನೀಡಿದ್ದರೂ, ಕಿವಿಗೊಡದೇ ಮುಂದುವರಿಸಿದ 18 ಒಟಿಟಿ ವೇದಿಕೆಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ನಿಯಮಗಳ ಅಡಿಯಲ್ಲಿ ಇಂದು (ಗುರುವಾರ) ಬ್ಲಾಕ್ ಮಾಡಿದೆ. ಇವುಗಳ ಜತೆಗೆ 19 ವೆಬ್’ಸೈಟ್ಗಳು, 10 ಆಪ್’ಗಳು (7 ಗೂಗಲ್ ಪ್ಲೇ ಸ್ಟೋರ್ ಮತ್ತು 3 ಆಪಲ್ ಸ್ಟೋರ್) ಹಾಗೂ ಈ ವೇದಿಕೆಗಳಿಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

Broadcasting of obscene videos and programs: 18 OTT, 10 websites banned

ನಿರ್ಬಂಧಿಸಲಾದ ಒಟಿಟಿ ಪ್ಲಾಟ್ಫಾರ್ಮ್ಗಳು

1. ಡ್ರೀಮ್ಸ್ ಫಿಲಂಸ್
2. ವೂವಿ
3. ಯೆಸ್ಮಾ
4. ಅನ್ಕಟ್ ಅಡ್ಡಾ
5. ಟ್ರೈ ಫ್ಲಿಕ್ಸ್
6. ಎಕ್ಸ್ ಪ್ರೈಮ್
7. ನಿಯೋನ್ ಎಕ್ಸ್ ವಿಐಪಿ
8. ಬೇಶರಮ್ಸ್
9. ಹಂಟರ್ಸ್
10. ರಾಬಿಟ್
11. ಎಕ್ಸ್ಟ್ರಾಮೂಡ್
12. ನ್ಯೂಫ್ಲಿಕ್ಸ್
13. ಮೂಡ್ಎಕ್ಸ್
14. ಮೋಜ್ಫಿಕ್ಸ್
15. ಹಾಟ್ ಶಾಟ್ಸ್ ವಿಐಪಿ
16. ಫೂಗಿ
17. ಚಿಕೂಫಿಕ್ಸ್
18. ಪ್ರೈಮ್ ಪ್ಲೇ

ಈ 18 ಒಟಿಟಿ ವೇದಿಕೆಗಳ ಕುರಿತು ಐಬಿ ಸಚಿವಾಲಯ ಹೇಳಿದ್ದೇನು?

1. ಮಹಿಳೆಯರನ್ನು ಕೀಳು ಸ್ವರೂಪದಲ್ಲಿ ತೋರಿಸುತ್ತವೆ.
2. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ, ಕೌಟುಂಬಿಕ ಸಂಬಂಧಗಳಂತಹ ವಿಷಯಗಳಲ್ಲಿ ವಿವಿಧ ಅಸಮರ್ಪಕ ಸನ್ನಿವೇಶಗಳ ಮೂಲಕ ನಗ್ನತೆ ಹಾಗೂ ಲೈಂಗಿಕ ಚಟುವಟಿಕೆಗಳನ್ನು ಪ್ರದರ್ಶಿಸುತ್ತವೆ.
3. ಬಹುತೇಕವಾಗಿ ಇವುಗಳಲ್ಲಿ ಪ್ರಸಾರವಾಗುವ ಕಂಟೆಂಟ್’ಗಳು ಲೈಂಗಿಕ ಅಂಶಗಳನ್ನು ಒಳಗೊಂಡಿರುತ್ತವೆ.
4. ಕೆಲ ಸಂದರ್ಭಗಳಲ್ಲಿ ಯಾವುದೇ ವಿಷಯಾಧಾರಿತ ಹಾಗೂ ಸಾಮಾಜಿಕ ಪ್ರಸ್ತುತತೆಗಳನ್ನು ಕಡೆಗಣಿಸಿ ಪೋರ್ನೋಗ್ರಫಿ ಹಾಗೂ ಲೈಂಗಿಕತೆಗೆ ಸಂಬಂಧಿಸಿದ ದೃಶ್ಯಗಳನ್ನು ಪ್ರಸಾರ ಮಾಡುತ್ತವೆ.
5. ಈ ಓಟಿಟಿ ಪ್ಲಾಟ್ಫಾರ್ಮ್ಗಳು ತಮ್ಮ ವೆಬ್ಸೈಟ್ಗಳು ಮತ್ತು ಆಪ್’ಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಗುರಿಯೊಂದಿಗೆ ಟ್ರೇಲರ್ಗಳು, ನಿರ್ದಿಷ್ಟ ದೃಶ್ಯಗಳು ಹಾಗೂ ಬಾಹ್ಯ ಲಿಂಕ್ಗಳನ್ನು ಪ್ರಸಾರ ಮಾಡಲು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚಾಗಿ ಬಳಸುತ್ತಿದ್ದವು.
6. ಅಲ್ಲದೇ ಒಂದು ಒಟಿಟಿ ಆಪ್, 1 ಕೋಟಿಗೂ ಅಧಿಕ ಡೌನ್’ಲೋಡ್’ಗಳನ್ನು ಹೊಂದಿರುತ್ತವೆ. ಇನ್ನು ಎರಡು ಆಪ್ಗಳು 50 ಲಕ್ಷಕ್ಕೂ ಅಧಿಕ ಬಾರಿ ಡೌನ್’ಲೋಡ್ ಆಗಿವೆ. ಈ ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು 32 ಲಕ್ಷಕ್ಕೂ ಅಧಿಕ ಫಾಲೋವರ್’ಶಿಪ್ ಹೊಂದಿವೆ.

You might also like
Leave A Reply

Your email address will not be published.