ಪಕ್ಷವಿರೋಧಿ ಕೆಲಸ ಮಾಡಿದ್ದಕ್ಕೆ ತಕ್ಕ ಪಾಠ – ಸಿ.ಟಿ ರವಿಗೆ ಟಾಂಗ್‌ ಕೊಟ್ಟ ಶೋಭಾ ಕರಂದ್ಲಾಜೆ

ಲೋಕಸಭಾ ಚುನಾವಣೆಯ ಪ್ರಯುಕ್ತ ಬಿಜೆಪಿ ಪಕ್ಷವು ನಿನ್ನೆಯಷ್ಟೆ ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹಲವರಲ್ಲಿ ಇದ್ದ ಗೊಂದಲಗಳಿಗೆ ಬ್ರೇಕ್ ನೀಡಿದರೆ, ಮತ್ತೊಂದೆಡೆ ಬಹುತೇಕ ಅಭ್ಯರ್ಥಿಗಳಿಗೆ ನಿರಾಸೆಯನ್ನುಂಟುಮಾಡಿದೆ. ಇನ್ನು ಉಡುಪಿ-ಚಿಕ್ಕಮಂಗಳೂರು ಕ್ಷೇತ್ರ ಕೈಕೊಟ್ಟರು ಬೆಂಗಳೂರು ಉತ್ತರ ಕ್ಷೇತ್ರ ಕೈಹಿಡಿದ ಬೆನ್ನಲ್ಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಇದಾದ ಬಳಿಕ ಮಾಧ್ಯಮದವರ ಮುಂದೆ ಮಾತನಾಡಿದ ಶೋಭಾ ಕಿಡಿಕಾರಿದ್ಯಾಕೆ?

ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ, ನನಗೆ ವಿಶ್ವಾಸ ಇತ್ತು, ನನ್ನ ನಾಯಕತ್ವದ ಮೇಲೆ ವಿಶ್ವಾಸ ಇತ್ತು. ರಾಷ್ಟ್ರೀಯ ನಾಯಕರ ಮೇಲೆ ವಿಶ್ವಾಸ ಇತ್ತು. ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಪಕ್ಷ ವಿರೋಧಿ, ಗಲಭೆ, ಅವಮಾನ ಮಾಡಿದವರಿಗೆ ಟಿಕೆಟ್ ಸಿಗಲ್ಲ ಎಂದು ನನ್ನಿಂದ ಸಾಬೀತಾಗಿದೆ ಎಂದು ಹೇಳುವ ಮೂಲಕ ಸಿ.ಟಿ.ರವಿ ವಿರುದ್ಧ ಪರೋಕ್ಷ ಟಾಂಗ್ ನೀಡಿದ್ದಾರೆ.

Adequate lesson for anti-party work - Shobha Karandlaje expressed outrage against CT Ravi

ಉಡುಪಿ- ಚಿಕ್ಕಮಗಳೂರಲ್ಲಿ ಬಹಳ ದೊಡ್ಡ ಅಭಿವೃದ್ಧಿ ಕೆಲಸ ಆಗಿದೆ. ಆದರೆ ಅದನ್ನು ಪರಿಗಣಿಸದೇ ಕೆಲವರು ವಿರೋಧ ಮಾಡಿದ್ದರು. ಕೇವಲ ಪ್ರಾಯೋಜಿತ ಗುಂಪು ತಮಗೆ ಟಿಕೆಟ್ ಬೇಕೆಂಬ ಕಾರಣಕ್ಕೆ ಏನೇನೋ ಮಾಡಿತ್ತು. ಆದರೆ ಅವರು ಯಶಸ್ವಿಯೂ ಆಗಿಲ್ಲ, ಟಿಕೆಟ್ ತಗೊಂಡು ಬರೋಕು ಆಗಿಲ್ಲ. ಇನ್ನಾದ್ರು ಇವರು ಪಾಠ ಕಲಿಯಲಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಒಂದು ಶಿಸ್ತಿನ ಪಕ್ಷ. ಈ ರೀತಿಯ ಪಕ್ಷಕ್ಕೆ ಅವಮಾನ ಮಾಡಿದರೆ ಇಲ್ಲಿ ಯಾರು ಮಣೆ ಹಾಕಲ್ಲ ಎಂಬುದಾಗಿ ವರಿಷ್ಠರು ತೋರಿಸಿಕೊಟ್ಟಿರುವುದು ನನಗೆ ಆನಂದವಾಗಿದೆ. ನಾನು ಬೆಂಗಳೂರಲ್ಲಿ ಶಾಸಕಿಯಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಹಾಗೆಯೇ ನಾನು ಸದಾನಂದಗೌಡರ ಮನೆಗೆ ಹೋಗಿ ಬಂದಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿದೆ ಎಂದು ತಿಳಿಸಿದರು.

You might also like
Leave A Reply

Your email address will not be published.