ವಿಸ್ತಾರಗೊಂಢ ಭಾರತ, ಯುಎಇ ಗೆಳೆತನ – ಟ್ರಾನ್ಸ್ ಕಾಂಟಿನೆಂಟಲ್ ಟ್ರೇಡ್ ಕಾರಿಡಾರ್ ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಯುಎಇ ಮಧ್ಯಪ್ರಾಚ್ಯ ದೇಶಗಳು ಯುರೋಪ್ ಅನ್ನು ಭಾರತದೊಂದಿಗೆ ಸಂಪರ್ಕಿಸಲು ಮಧ್ಯ ಪ್ರಾಚ್ಯದ ಮೂಲಕ ಟ್ರಾನ್ಸ್ ಕಾಂಟಿನೆಂಟಲ್ ಟ್ರೇಡ್ ಕಾರಿಡಾರ್‌ಅನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ ಮಧ್ಯ ಪ್ರಾಚ್ಯ ದೇಶಗಳ‌ ಮೂಲಕ ಸಮುದ್ರ ಮತ್ತು ರೈಲು ಸೇವೆಗಳನ್ನು ಬಳಸಿ ಭಾರತದೊಂದಿಗೆ ಯುರೋಪನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ್ದು, ಇದು ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದ ಬೆಂಬಲದೊಂದಿಗೆ ಪೂರ್ಣಗೊಳ್ಳಲಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಈ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಯುಎಇ ಭೇಟಿಯಲ್ಲಿ ಅಲ್ಲಿನ ಅಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಕಾರ್ಯತಂತ್ರದ ಕುರಿತು ಮಾತುಕತೆ ನಡೆಸಿದರು.‌ ಅಲ್ಲದೇ ಕಾರ್ಯತಂತ್ರಗಳ ಕುರಿತು ಪರಿಶೀಲಿಸಿ ಸಹಕಾರದ ಹೊಸ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿದರು. ಅವುಗಳೆಂದರೆ ವ್ಯಾಪಾರ ಮತ್ತು ಹೂಡಿಕೆ, ಡಿಜಿಟಲ್ ಮೂಲಸೌಕರ್ಯ, ಫಿನ್‌ಟೆಕ್, ಇಂಧನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಇತರ ವಿಷಯಗಳ ಕುರಿತು ಮಾತನಾಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

India, UAE Friendship - Signing of Transcontinental Trade Corridor Agreements

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗಲ್ಫ್ ರಾಷ್ಟ್ರ ಮಾಡಿಕೊಂಡ ಕೆಲವು ಒಪ್ಪಂದಗಳನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಸಾರ್ವಜನಿಕಗೊಳಿಸಿದ್ದು, ಅಲ್ಲಿ ನಡೆದ ಮಾತು ಕಥೆಗಳು ಭಾರತ ಮತ್ತು ಯುಎಇ ಸಂಬಂಧವನ್ನು ಉತ್ತಮಗೊಳಿಸುವುದಲ್ಲದೆ ಹಲವಾರು ಕ್ಷೇತ್ರಗಳಲ್ಲಿ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಭಾರತ ಮತ್ತು ಯುಎಇ ಸಹಕಾರವನ್ನು ಉತ್ತೇಜಿಸಲಿದೆ ಎಂದು ಸಚಿವಾಲಯವು ತಿಳಿಸಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ G20 ಶೃಂಗ ಸಭೆಯ ಸಂದರ್ಭದಲ್ಲಿ ಘೋಷಿಸಲಾದ ಕಾರಿಡಾರ್ ಯೋಜನೆಯು ಜೋರ್ಡಾನ್ ಮತ್ತು ಇಸ್ರೇಲ್ ಮೂಲಕ ಯುರೋಪ್‌ಗೆ ಸಂಪರ್ಕಿಸುವ ಮೊದಲು ಭಾರತದಿಂದ ಅರಬ್ಬಿ ಸಮುದ್ರದಾದ್ಯಂತ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಮೂಲಕ ಈ ಯೋಜನೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.‌

You might also like
Leave A Reply

Your email address will not be published.