ಮದ್ಯದ ಗಲಾಟೆ : ಎರಡು ಟ್ರಕ್ ಮದ್ಯ ವಶಪಡಿಸಿಕೊಂಡದ್ದು ಇಲಾಖೆಯ ತಪ್ಪು – ಹೈಕೋರ್ಟ್

ಮದ್ಯ ಪೂರೈಕೆಗೆ ಅನುಮತಿ ನೀಡಿ ಮತ್ತೊಂದೆಡೆ ಅದೇ ಇಲಾಖೆಯ ಅಧಿಕಾರಿಗಳು ಮಾದರಿ ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಎರಡು ಟ್ರಕ್‌ಗಳಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕರ್ನಾಟಕ ಹೈಕೋರ್ಟ್‌ ಪ್ರಶ್ನಿಸಿದೆ.

ಏನಿದು ಘಟನೆ?

ಮಾರ್ಚ್ 18 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯ ಸೋಂಪುರದಲ್ಲಿನ ಕಲ್ಪತರು ಬ್ರಿವರೀಸ್‌ ಆ್ಯಂಡ್‌ ಡಿಸ್ಟಿಲರೀಸ್‌ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಎರಡು ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ.

ಎಫ್‌ಐಆರ್‌ ಹಾಕಿದ್ದನ್ನು ಪ್ರಶ್ನಿಸಿ ಕಲ್ಪತರು ಬ್ರಿವರೀಸ್‌ ಆ್ಯಂಡ್‌ ಡಿಸ್ಟಿಲರೀಸ್‌ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

”ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗಲೇ ಮದ್ಯ ಸಾಗಣೆಗೆ ಅಬಕಾರಿ ಇಲಾಖೆಯೇ ಪರ್ಮಿಟ್‌ ನೀಡಿ, ಮತ್ತೆ ಅದೇ ಇಲಾಖೆಯ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಕಾರಣ ನೀಡಿ ಟ್ರಕ್‌ಗಳಲ್ಲಿ ತುಂಬಿದ್ದ ಮದ್ಯ ವಶಪಡಿಸಿಕೊಂಡಿರುವುದು ಕಾನೂನಿನ ದುರ್ಬಳಕೆಯಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಮದ್ಯ ತುಂಬಿದ ಟ್ರಕ್ ಕಂಪೆನಿ ಆವರಣದಲ್ಲಿ ಪಾರ್ಕ್ ಮಾಡಲಾಗಿದೆ ಎಂಬ ಒಂದೇ ಕಾರಣಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

Liquor riot: Department's fault for seizing two truckloads of liquor - High Court

ಎಂಸಿಸಿ (ಮಾದರಿ ಚುನಾವಣಾ ನೀತಿ ಸಂಹಿತೆ) ಜಾರಿಯಲ್ಲಿದ್ದಾಗ ಅರ್ಜಿದಾರರ ಕಂಪನಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮಕ್ಕೆ (ಕೆಎಸ್‌ಬಿಸಿಎಲ್‌) ಮದ್ಯ ಪೂರೈಸಲು ಏಕೆ ಅನುಮತಿ ನೀಡಬೇಕಿತ್ತು ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಕಲ್ಪತರು ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಅದರ ವಿರುದ್ಧ ಅಬಕಾರಿ ಇಲಾಖೆ ದಾಖಲಿಸಿದ ಎಫ್‌ಐಆರ್‌ಗಳನ್ನು ರದ್ದುಗೊಳಿಸಿದೆ.

ಒಂದು ವೇಳೆ ಎಫ್‌ಐಆರ್‌ ಒಪ್ಪಿದರೂ ಅರ್ಜಿದಾರರು ಇನ್‌ವಾಯ್ಸ್ ಮತ್ತು ಪರ್ಮಿಟ್‌ ಹೊಂದಿರುವುದರಿಂದ ಕರ್ನಾಟಕ ಅಬಕಾರಿ ಕಾಯಿದೆ 1965ರ ಸೆಕ್ಷನ್‌ 32 ಹಾಗೂ 34ರ ಅಡಿ ಅಪರಾಧವಲ್ಲ. ಮೇಲ್ನೋಟಕ್ಕೆ ಇದು ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಇಲಾಖೆ ಮಾಡಿರುವ ಕಾನೂನು ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?

ಅರ್ಜಿದಾರರ ಕಂಪೆನಿಗೆ ವಿಸ್ಕಿ, ಬಿಯರ್‌ ಮತ್ತಿತರ ಮದ್ಯಗಳನ್ನು ಕೆಎಸ್‌ಬಿಸಿಎಲ್‌ಗೆ ಮಾತ್ರ ಪೂರೈಕೆ ಮಾಡಲು ಅಬಕಾರಿ ಇಲಾಖೆ ಅನುಮೋದನೆ ನೀಡಿತ್ತು. ಅದಕ್ಕಾಗಿ ಅಬಕಾರಿ ಇಲಾಖೆ ಮಾರ್ಚ್ 16ಂದು ಪರ್ಮಿಟ್‌ ನೀಡಿದ್ದು, ಅದರ ಅವಧಿ ಮಾರ್ಚ್ 22ರವರೆಗೆ ಅಸ್ತಿತ್ವದಲ್ಲಿತ್ತು. ಆದರೆ ಮಾರ್ಚ್ 18ರಂದು ಎರಡು ಟ್ರಕ್‌ಗಳಲ್ಲಿ ತಲಾ 26 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದರು.

ಮದ್ಯ ತುಂಬಿದ್ದ ಟ್ರಕ್‌ಗಳನ್ನುಕಂಪೆನಿಯ ಆವರಣದಲ್ಲಿ ಜಪ್ತಿ ಮಾಡಿದ್ದ ಅಬಕಾರಿ ನಿರೀಕ್ಷಕರು, ಕರ್ನಾಟಕ ಅಬಕಾರಿ ಕಾಯಿದೆ ಸೆಕ್ಷನ್‌ 32 (ಅಕ್ರಮ ಮದ್ಯ ಸಾಗಾಣೆ) ಮತ್ತು ಸೆಕ್ಷನ್‌ 34 (ಅಕ್ರಮ ಮದ್ಯ ಸಂಗ್ರಹ) ಆರೋಪಗಳ ಅಡಿ ಎರಡು ಎಫ್‌ಐಆರ್‌ಗಳನ್ನು ಹಾಕಿದ್ದರು. ಅಬಕಾರಿ ಅಧಿಕಾರಿಯ ಕ್ರಮ ಕಾನೂನುಬಾಹಿರವೆಂದು ಕಂಪೆನಿ ಹೈಕೋರ್ಟ್‌ ಮೊರೆ ಹೋಗಿತ್ತು.

You might also like
Leave A Reply

Your email address will not be published.