ಬಿಹಾರ – ಸಿಖ್ ಸಮುದಾಯದ ಜನರಿಗೆ ಊಟ ಬಡಿಸಿದ ಮೋದಿ

ಬಿಹಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಪಾಟ್ನಾ ನಗರದಲ್ಲಿನ ತಾಖತ್ ಶ್ರೀ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರಕ್ಕೆ ಇಂದು ಭೇಟಿ ನೀಡ, ಬೆಳಿಗ್ಗೆ ಗುರುದ್ವಾರದಲ್ಲಿದ್ದ ಸಿಖ್ ಸಮುದಾಯದ ಜನರಿಗೆ ಆಹಾರ ಬಡಿಸುವ ಸೇವಾ ಕಾರ್ಯ ನಡೆಸಿದರು.

ಸಿಖ್ ಸಮುದಾಯದ ಜನರಿಗೆ ಊಟ ಬಡಿಸಿದ ಮೋದಿ:

ಕಿತ್ತಳೆ ಬಣ್ಣದ ಸಿಖ್ ಪೇಟ ಧರಿಸಿದ್ದ ಪ್ರಧಾನಿ ಮೋದಿ, ರಾಜಧಾನಿಯಲ್ಲಿ ರೋಡ್ ಶೋ ಬಳಿಕ ಐತಹಾಸಿಕವಾಗಿ ಪ್ರಾಮುಖ್ಯವಾಗಿರುವ ಗುರುದ್ವಾರಕ್ಕೆ ತೆರಳಿದರು. ನಂತರ ಅಲ್ಲಿಯ ಸಿಖ್ ಸಮುದಾಯದ ಅಡುಗೆ ಹಾಲ್‌ಗೆ ತೆರಳಿ ಸ್ಟೀಲ್ ಬಕೆಟ್‌ನಲ್ಲಿದ್ದ ಆಹಾರವನ್ನು ಸಾಲಿನಲ್ಲಿ ಕುಳಿತಿದ್ದ ಜನರಿಗೆ ಬಡಿಸಿದರು. ಅಲ್ಲದೆ ಅಡುಗೆ ಕೋಣೆಯಲ್ಲಿ ದಾಲ್ ಹಾಗೂ ಇತರೆ ಖಾದ್ಯ ತಯಾರಿಸುವ ಕಾರ್ಯದಲ್ಲಿಯೂ ನೆರವಾದರು. ಚಪಾತಿ ಕೂಡ ಲಟ್ಟಿಸಿ ಗಮನ ಸೆಳೆದರು.

ಮಕ್ಕಳು ಸೇರಿದಂತೆ ಗುರುದ್ವಾರದಲ್ಲಿ ನೆರೆದಿದ್ದ ಜನರ ಕೈಕುಲುಕಿ ಶುಭಾಶಯ ವಿನಿಮಯ ಮಾಡಿಕೊಂಡರು. ಶ್ರೀ ಗುರು ಗೋವಿಂದ್ ಸಿಂಗ್ ಅವರ ಜನ್ಮಸ್ಥಳವಾದ ದರ್ಬಾರ್ ಸಾಹಿಬ್‌ನಲ್ಲಿ ವಂದನೆ ಸಲ್ಲಿಸಿದರು. ಅಲ್ಲಿ ಕೀರ್ತನೆಯನ್ನು ಆಲಿಸಿದರು. ನಂತರ ಶ್ರೀ ಗುರು ಗೋವಿಂದ್ ಸಿಂಗ್ ಅವರು ಬಳಸುತ್ತಿದ್ದ ಅಪರೂಪದ ಶಸ್ತ್ರಗಳ ದರ್ಶನ ಪಡೆದರು.

ಗುರುದ್ವಾರದಲ್ಲಿ ‘ಕರಾಹ್ ಪ್ರಸಾದ’ ಸ್ವೀಕರಿಸಿದ ಅವರು, ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿಸಿದರು. ಗುರುದ್ವಾರ ಸಮಿತಿಯು ಮೋದಿ ಅವರಿಗೆ ‘ಸನ್ಮಾನ ಪತ್ರ’ ನೀಡಿದರೆ, ಸಿಖ್ ಬೀಬಿಯರು ಮಾತಾ ಗುಜ್ರಿ ಅವರ ಭಾವಚಿತ್ರ ನೀಡಿದರು.

Bihar - Modi served food to the Sikh community

ಹಾಜಿಪುರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಜನರು ಸರ್ಕಾರ ನಡೆಸುತ್ತಿದ್ದಾಗ, ಹತ್ತು ವರ್ಷಗಳಲ್ಲಿ ಕೇವಲ 35 ಲಕ್ಷ ರೂ ಅಕ್ರಮ ಹಣ ಜಪ್ತಿ ಮಾಡಿದ್ದರು. ಆದರೆ ಬಡವರ ಹಣ ಲೂಟಿ ಮಾಡಿದ ಕಳ್ಳರ ಮನೆಗಳಲ್ಲಿ ಮೋದಿ ಶೋಧ ನಡೆಸಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ 2,200 ಕೋಟಿ ರೂ ಜಪ್ತಿ ಮಾಡಿದ್ದಾರೆ. ಈ ಹಣವನ್ನು ಸಾಗಣೆ ಮಾಡುವುದಾದರೆ 70 ಸಣ್ಣ ಟ್ರಕ್‌ಗಳು ಬೇಕಾಗುತ್ತದೆ” ಎಂದರು.

“ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಆದ್ಯತೆಗಳು ನೀವಲ್ಲ, ಆದರೆ ತಮ್ಮ ವೋಟ್ ಬ್ಯಾಂಕ್. ಅವರು ಬಿಹಾರಕ್ಕೆ ‘ಜಂಗಲ್ ರಾಜ್’ ತಂದ ಜನರು. ಮೇವು ಹಗರಣದಲ್ಲಿ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾದ ವ್ಯಕ್ತಿಯು, ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದು ಹೇಳುತ್ತಾರೆ, ಅದೂ ಸಂಪೂರ್ಣ ಮೀಸಲಾತಿ. ಅವರು ದಲಿತರು, ಹಿಂದುಳಿದವರು ಮತ್ತು ಪರಿಶಿಷ್ಟರ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಬಯಸಿದ್ದಾರೆ” ಎಂದು ಆರೋಪಿಸಿದರು.

“ಇದು ದೇಶದ ಚುನಾವಣೆ. ಇದು ಭಾರತದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ. ಈ ದೇಶವು ದುರ್ಬಲ ಹಾಗೂ ಅಸ್ಥಿರ ಕಾಂಗ್ರೆಸ್ ಸರ್ಕಾರವನ್ನು ಯಾವ ಕಾರಣಕ್ಕೂ ಬಯಸುವುದಿಲ್ಲ” ಎಂದು ಮೋದಿ ಹೇಳಿದರು.

You might also like
Leave A Reply

Your email address will not be published.