ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆಯ ಮೇಲೆ ಹಲ್ಲೆ ಮಾಡಿದ ಅರವಿಂದ್ ಕೇಜ್ರಿವಾಲ್ ಪಿಎ – ಏನಿದು ಪ್ರಕರಣ?

ದೆಹಲಿ ಮಹಿಳಾ ಆಯೋಗದ‌ ಮಾಜಿ ಮುಖ್ಯಸ್ಥೆ ಸ್ವಾತಿ‌ ಮಲಿವಾಲ್ ಅವರು ಅರವಿಂದ್ ಕೇಜ್ರಿವಾಲ್ ಅವರ ವೈಯಕ್ತಿಕ ಕಾರ್ಯದರ್ಶಿ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ದೆಹಲಿ‌ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಿಂದಲೇ ಪೋಲಿಸ್ ಕಂಟ್ರೋಲ್ ರೂಮ್‌ಗೆ ಬೆಳಿಗ್ಗೆ 10 ಗಂಟೆಗೆ ಕರೆಮಾಡಿ ದೂರು ದಾಖಲಿಸಲಾಗಿದ್ದು, ಅದರ ಮೇರೆಗೆ ಪೋಲಿಸರ ತಂಡ ಸ್ಥಳಕ್ಕೆ ತಲುಪಿರುವುದಾಗಿ ತಿಳಿದುಬಂದಿದೆ.

ಆರೋಪಿಯನ್ನು ಬಿಭವ್ ಕುಮಾರ್ ಎಂದು ಗುರುತಿಸಲಾಗಿದ್ದು, 2007 ರಲ್ಲಿ ಸಾರ್ವಜನಿಕ ನೌಕರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಿಲೆನ್ಸ್ ಇಲಾಖೆಯ ಆಪ್ತ ಕಾರ್ಯದರ್ಶಿ ಸ್ಥಾನದಿಂದ ಇತ್ತೀಚೆಗೆ ಆತನನ್ನು ವಜಾಗೊಳಿಸಲಾಗಿತ್ತು.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಅಮಿತ್ ಮಾಳವಿಯಾ, ದಿಲ್ಲಿ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಭಾ ಸಂಸದೆ ಮತ್ತು DCWನ ಮಾಜಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆರೋಪ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಮನೆಯಿಂದ ಕರೆ ಮಾಡಲಾಗಿದೆ. ಕೇಜ್ರಿವಾಲ್ ಬಂಧನದ ಬಗ್ಗೆಯೂ ಸ್ವಾತಿ ತುಟಿಬಿಚ್ಚಿರಲಿಲ್ಲ ಹಾಗೂ ದೀರ್ಘ ಸಮಯಗಳ ಕಾಲ ವಿದೇಶದಲ್ಲಿದ್ದರು ಎಂಬುದು ಗಮನಿಸಬೇಕಾದ ಅಂಶವಾಗಿದೆ.

You might also like
Leave A Reply

Your email address will not be published.