ಆಟದ ಸ್ಟೇಡಿಯಂಗೆ ನುಗ್ಗಿ ಧೋನಿ ಕಾಲಿಡಿದ ಅಭಿಮಾನಿ – ಪೊಲೀಸರನ್ನು ಕಂಡು ಬೆಚ್ಚಿದ ಅಭಿಮಾನಿ ಧೋನಿ ಕಿವಿಯಲ್ಲಿ ಹೇಳಿದ್ದೇನು?

ಐಪಿಎಲ್ 2024ರ 56ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಈ ನಿರ್ಧಾರದ ಪರಿಣಾಮವನ್ನು ಆರಂಭದಿಂದಲೇ ಎದುರಿಸಬೇಕಾಯಿತ್ತಾದರು, ಧೋನಿಗಾಗಿ ಮೈದಾನಕ್ಕೆ ಹಾರಿದ ಆ ಯುವಕನಿಂದ ಬಚಾವ್ ಆಗಲು ಓಡಿ ಹೋದ ಮಹಿ ವಿಡಿಯೋ ಸದ್ಯಕ್ಕೆ ಭಾರೀ ಟ್ರೆಂಡ್ ಆಗಿದೆ. ಅಷ್ಟಕ್ಕೂ ನಡೆದ ಘಟನೆ ಏನು? ಯಾರು ಆ ಯುವಕ? ಮಹಿ ಓಡಿದ್ಯಾಕೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಗುಜರಾತ್ ಟೈಟಾನ್ಸ್ ಪರ ಓಪನರ್‌ ಆಗಿ ಕಣಕ್ಕಿಳಿದಿದ್ದ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಬೌಂಡರಿ ಹಾಗೂ ಸಿಕ್ಸರ್‌ ಗಳ ಸುರಿಮಳೆಗೈದರು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕದ ಇನಿಂಗ್ಸ್‌ ಆಡಿದರು. ಸಾಯಿ ಸುದರ್ಶನ್ ಅವರ ಬ್ಯಾಟ್‌ನಿಂದ ಪಂದ್ಯದಲ್ಲಿ ಅದ್ಭುತ ಶತಕ ಕಂಡುಬಂದಿತು.

ಅದೇ ವೇಳೆ ಗಿಲ್ ಕೂಡ ಶತಕ ಬಾರಿಸಿದರು. ಈ ಐಪಿಎಲ್‌ನಲ್ಲಿ ಆರಂಭಿಕ ಶತಕ ಬಾರಿಸಿದ ಮೊದಲ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಗುಜರಾತ್‌ ಟೈಟನ್ಸ್‌ ತಂಡವು ನಿಗದಿತ 20 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 231 ರನ್‌ ಗಳಿಸಿತು

ಈ ಬೃಹತ್‌ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ನಿಗದಿತ 20 ಓವರ್‌ಗೆ 8 ವಿಕೆಟ್ ನಷ್ಟಕ್ಕೆ 196 ರನ್‌ ಗಳಿಸುವ ಮೂಲಕ 35 ರನ್‌ ಗಳಿಂದ ಸೋಲನ್ನಪ್ಪಿತು.

ಈ ನಡುವೆ ಧೋನಿ ಬ್ಯಾಟಿಂಗ್‌ ಮಾಡುವಾಗ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದಾನೆ. ಧೋನಿ ಕಡೆ ಓಡಿ ಬರುತ್ತಿದ್ದ ಅಭಿಮಾನಿಯನ್ನು ಕಂಡ ಮಹಿ ತಮಾಷೆಯಾಗಿ ಓಡಿ ಹೋಗಲು ಯತ್ನಿಸಿದ್ದಾರೆ. ಈ ವಿಡಿಯೋ, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

ಇನ್ನೂ ಆ ಯುವಕ ಓಡಿ ಬಂದು ಧೋನಿ ಕಾಲಿಗೆ ಬಿದ್ದಿದ್ದಾನೆ. ಈ ಕ್ಷಣದಲ್ಲಿ ಇಡೀ ಗ್ರೌಂಡ್‌ನಲ್ಲಿ ಸೇರಿದ್ದ ಜನರೆಲ್ಲಾ ಜೋರಾಗಿ ಧೋನಿ ಧೋನಿ ಅಂತ ಕೂಗಿದ್ದಾರೆ. ಕೂಡಲೇ ಸಿಬ್ಬಂದಿಗಳು ಆ ಯುವಕನನ್ನು ಹಿಡಿಯಲು ಓಡಿ ಬರುತ್ತಾರೆ.

ಇದನ್ನು ಗಮನಿಸಿದ ಯುವಕ ಧೋನಿ ಬಳಿ ಒಂದು ಮನವಿ ಮಾಡಿಕೊಂಡಿದ್ದಾನೆ. ಪ್ಲೀಸ್‌ ನನಗೆ ಹೊಡೆಯದಂತೆ ಅವರಿಗೆ ಹೇಳಿ ಅಂತ ಧೋನಿ ಬಳಿ ಕೇಳಿಕೊಂಡಿದ್ದಾನೆ. ಕೂಡಲೇ ಧೋನಿ ಆತನ ಹೆಗಲ ಮೇಲೆ ಕೈ ಹಾಕಿ ಏನು ಮಾಡಬೇಡಿ ಅಂತ ಸಿಬ್ಬಂದಿಗೆ ಹೇಳಿದ್ದಾರೆ.

You might also like
Leave A Reply

Your email address will not be published.