ಬಳಸಿದ ನೀರು ನಿರ್ವಹಣೆಯಲ್ಲಿ ಟಾಪ್ ನಗರಗಳ ಪಟ್ಟಿ ಬಿಡುಗಡೆ – ಬೆಂಗಳೂರಿಗೆ ಎಷ್ಟನೇ ಸ್ಥಾನ?

ದೇಶದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ನಮ್ಮ ಬೆಂಗಳೂರು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿರುವುದು ಗೊತ್ತೇ ಇದೆ. ಬೇಸಿಗೆಯ ಆರಂಭದಲ್ಲೇ ನೀರಿಗೆ ಬರ ಎದುರಾಗಿರುವುದು ಮಹಾನಗರಿಯ ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿರುವುದರ ನಡುವೆಯೇ, ನೀರಿನ ಮರುಬಳಕೆಯ ಪಟ್ಟಿ ಬಿಡುಗಡೆಗೊಂಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ನಿಮ್ಮ ಊಹೆಗೂ ನಿಲುಕದ ಸ್ಥಾನವನ್ನು ಪಡೆದಿದೆ. ಹಾಗಿದ್ದರೆ ಬೆಂಗಳೂರು ಪಡೆದ ಸ್ಥಾನವೇನು? ಇಲ್ಲಿದೆ ವಿವರ.

ದ ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ, ಏನ್ವಿರಾನ್ಮೆಂಟ್ & ವಾಟರ್ (CEEW) ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ, ಭಾರತದ ಅಗ್ರ ನಗರಗಳು ಬಳಸಿದ ನೀರು ನಿರ್ವಹಣೆಯಲ್ಲಿ ಸ್ಥಾನವನ್ನು ಪಡೆದಿವೆ. 5 ಅಂಕಗಳಲ್ಲಿ ಬಿಡುಗಡೆಗೊಳಿಸಲಾಗುವ ಈ ಪಟ್ಟಿಯಲ್ಲಿ ಸೂರತ್ ಮತ್ತು ಬೆಂಗಳೂರು ಅಗ್ರ 2 ಸ್ಥಾನವನ್ನು ಪಡೆದಿವೆ.

5 ಅಂಕಗಳಲ್ಲಿ ಸೂರತ್ 3.32 ಅಂಕವನು ಪಡೆದರೆ, ಬೆಂಗಳೂರು 3.23 ಅಂಕವನು ಪಡೆದಿದೆ. ಈ ಎರಡು ನಗರಗಳನ್ನು ಹೊರತುಪಡಿಸಿ, ದೇಶದ ಇತರ ಯಾವುದೇ ನಗರಗಳು 3 ಕ್ಕಿಂತ ಅಧಿಕ ಅಂಕವನ್ನು ಪಡೆಯದಿದ್ದು, 47 ನಗರಗಳು 2.25 ಕ್ಕಿಂತ ಹೆಚ್ಚು ಹಾಗೂ 151 ಸ್ಥಳಗಳು 1.5 ರಿಂದ 2.25 ಅಂಕಗಳ ನಡುವೆ ಸ್ಥಾನ ಪಡೆದಿವೆ.

Release of the list of top cities in used water management - Bangalore ranks?

ಆರ್ಥಿಕತೆ, ಮೂಲಸೌಕರ್ಯ, ಕಾರ್ಯಕ್ಷಮತೆ, ಆಡಳಿತ, ಮಾಹಿತಿ ಮತ್ತು ದತ್ತಾಂಶ ವಿಭಾಗಗಳಲ್ಲಿ 25 ಅಂಶಗಳ 27 ಸೂಚ್ಯಂಕಗಳನ್ನು ಆಧರಿಸಿ, ನಗರಗಳಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದ್ದು, ಆಂಧ್ರಪ್ರದೇಶ, ಛತ್ತೀಸ್’ಘಡ್, ಗುಜರಾತ್, ಹರ್ಯಾಣ, ಝಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಪ.ಬಂಗಾಳ – ಈ ಹತ್ತು ರಾಜ್ಯಗಳನ್ನಷ್ಟೇ ಈ ಸಮೀಕ್ಷೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಹತ್ತು ರಾಜ್ಯಗಳಲ್ಲಿ ನೀರು ಸಂಸ್ಕರಣಾ ಕಾಯ್ದೆಯನ್ನು ಅನುಷ್ಠಾನಗೊಳಿಸಿ, ದೈನಂದಿನ ಬಳಕೆಯ ನೀರನ್ನು ಸಂಸ್ಕರಿಸಿ ಬಳಸಲಾಗುತ್ತಿರುವುದರಿಂದ, ಈ ರಾಜ್ಯಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

2021 ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ (CPCB) ನಡೆಸಿದ ಸಮೀಕ್ಷೆಯನ್ನೂ ಆಧರಿಸಿ ಈ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಸಮೀಕ್ಷೆಯ ನಂತರದಲ್ಲಿ ಅಷ್ಟೇನೂ ಮಹತ್ವದ ಬದಲಾವಣೆಯನ್ನು ಕಂಡಿಲ್ಲ ಎಂದು ನೂತನ ಪಟ್ಟಿ ಬಿಡುಗಡೆ ಮಾಡಿರುವ CEEW ಸಂಸ್ಥೆ ಹೇಳಿಕೊಂಡಿದೆ.

https://www.ceew.in/press-releases/karnataka-punjab-lead-municipal-used-water-management-index-for-indian-urban-cities

ಈ ವರದಿಯು, ನಗರದಲ್ಲಿ ಹೆಚ್ಚುತ್ತಿರುವ ನೀರಿನ ಬೇಡಿಕೆಯನ್ನು ಹಾಗೂ ಅಂತರ್ಜಲ ಮಟ್ಟದ ಕುಸಿತವನ್ನು ಮನಗಂಡು, ದೈನಂದಿನ ಬಳಕೆಯನು ಹೊರತುಪಡಿಸಿ, ಕೃಷಿ ಮತ್ತು ಇತರ ಕೈಗಾರಿಕಾ ಬಳಕೆಗಳಿಗೆ ಮರುಬಳಕೆಯಾದ ಸಂಸ್ಕರಿಸಿದ ನೀರಿನ ಬಳಕೆಯನ್ನೇ ಒತ್ತಿ ಹೇಳುತ್ತದೆ.

ಗಣನೆಗೆ ತೆಗೆದುಕೊಳ್ಳಲಾದ 10 ರಾಜ್ಯಗಳ 503 ಸ್ಥಳಗಳು ಅತ್ಯಂತ ಕಡಿಮೆ ಅಂಕವನ್ನು ಪಡೆದಿದ್ದು, ನೀರು ಮರುಬಳಕೆ ಅಥವಾ ಸಂಸ್ಕರಣೆಯನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಸಂಸ್ಥೆ ಹೇಳಿದೆ. ಈ ನಡುವೆ, ಕರ್ನಾಟಕದ ಬೆಂಗಳೂರು ಹಾಗೂ ಇತರ ನಗರಗಳು ಅತ್ಯಂತ ಕಡಿಮೆಯಲ್ಲದ ಸ್ಥಾನವನ್ನೇನೂ ಪಡೆಯದಿದ್ದರೂ ಕೂಡ, ರಾಜ್ಯದಲ್ಲಿ ಸಂಪೂರ್ಣವಾಗಿ ನೀರಿನ ನಿರ್ವಹಣೆಯನ್ನು ಅಳವಡಿಸಿಕೊಳ್ಳಬೇಕಾದರೆ ಬಹಳಷ್ಟು ದೂರ ಸಾಗಬೇಕಿದೆ ಎಂದಿದೆ.

ಏನೇ ಇರಲಿ, ಅತ್ಯಂತ ಭೀಕರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಬೆಂಗಳೂರಿಗೆ, ಈ ಪಟ್ಟಿಯಲ್ಲಿ ಅಗ್ರ-2 ರ ಸ್ಥಾನ ಸ್ವಲ್ಪ ಸಮಾಧಾನ ತಂದರೂ ಕೂಡ, ಅತ್ಯಂತ ಕ್ರಿಪ್ರಗತಿಯಲ್ಲಿ ನೀರು ಪೂರೈಕೆಯ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕಾಗಿರುವ ಪರಿಸ್ಥಿತಿ ಎದುರಾಗಿರುವುದಂತೂ ಖಂಡಿತ.

You might also like
Leave A Reply

Your email address will not be published.