1.25 ಲಕ್ಷ ಕೋಟಿಯ ಯೋಜನೆಗಳಿಗೆ ಮೋದಿ ಚಾಲನೆ – ಯಾವುದದು ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾರ್ಚ್ 13) ವಿಡಿಯೊ ಕಾನ್ಫರೆನ್ಸ್ ಮೂಲಕ ಸುಮಾರು ₹1.25 ಲಕ್ಷ ಕೋಟಿ ಮೌಲ್ಯದ ಮೂರು ಸೆಮಿಕಂಡಕ್ಟರ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಸೆಮಿಕಂಡಕ್ಟರ್ ಗಳ ಕೇಂದ್ರವಾಗಿಸಲು ಭಾರತದ ಪ್ರಯತ್ನಗಳಲ್ಲಿ ಈ ದಿನ ವಿಶೇಷವಾದ ದಿನವಾಗಿದೆ ಎಂದರೆ ತಪ್ಪಾಗಲಾರದು. ಹಾಗಾದರೆ, ಆ ಮೂರು ನಿರ್ಣಾಯಕ ಯೋಜನೆಗಳು ಯಾವ್ಯಾವು? ಎಂಬುದನ್ನು ನೋಡೋಣ ಬನ್ನಿ.

ಹೌದು! ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘India’s Techade: Chips for Viksit Bharat’ ಕಾರ್ಯಕ್ರಮದಲ್ಲಿ ಭಾಗವಹಿಸಿ 1.25 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ ಮೂರು ಸೆಮಿಕಂಡಕ್ಟರ್ ಸೌಲಭ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ 60,000 ಕ್ಕೂ ಹೆಚ್ಚು ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಲ್ಲದೇ ಯುವ ಸಮೂಹ ಮತ್ತು ವಿಶೇಷವಾಗಿ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವವರು ಕೂಡ ಪಾಲ್ಗೊಂಡಿದ್ದರು.

ಭಾರತದ ಪ್ರಮುಖ ಪ್ರಯತ್ನಗಳಲ್ಲಿ ಒಂದಾದ ಸೆಮಿಕಂಡಕ್ಟರ್ ಗಳ ಸೌಲಭ್ಯಗಳಿಗೆ ಅಡಿಪಾಯ ಹಾಕಿದ ಮೂರು ನಿರ್ಣಾಯಕ ಯೋಜನೆಗಳು ಯಾವುವು?

1. ಗುಜರಾತ್ನ ಧೋಲೇರಾ ವಿಶೇಷ ಹೂಡಿಕೆ ಪ್ರದೇಶದಲ್ಲಿ (DSIR) ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಸೌಲಭ್ಯ
2. ಅಸ್ಸಾಂನ ಮೊರಿಗಾಂವ್
3. ಗುಜರಾತ್ನ ಸಾನಂದ್ನಲ್ಲಿ ಔಟ್ ಸೋರ್ಸ್ಡ್ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (OSAT) ಸೌಲಭ್ಯ

ಕಾರ್ಯಕ್ರಮದ ವಿಡಿಯೊ

ಭಾರತವು ಪ್ರಮುಖ ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವಾಗಲು ಸಜ್ಜಾಗಿದೆ. ಮೂರು ಸೌಲಭ್ಯಗಳು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುತ್ತವೆ ಎಂದು ಮೋದಿ ಸಮಾರಂಭದ ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗಾಗಿ ಭಾರತವನ್ನು ಪ್ರಮುಖ ಜಾಗತಿಕ ಕೇಂದ್ರವಾಗಿ ಇರಿಸುವ ಪ್ರಧಾನ ಮಂತ್ರಿಯವರ ದೃಷ್ಟಿಗೆ ಅನುಗುಣವಾಗಿ ಈ ಯೋಜನೆಗಳು ದೇಶದ ಯುವಕರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

You might also like
Leave A Reply

Your email address will not be published.