ಸಿಎಎ ಕಾಯ್ದೆಯ ಬಗ್ಗೆ ಸರಳವಾಗಿ ವಿವರಣೆ ನೀಡಿದ ಮೇಜರ್ ನೀಲ್!

ಸಿಎಎ ಕುರಿತು ದೇಶದೆಲ್ಲೆಡೆ ಪರ ವಿರೋಧದ ಚರ್ಚೆಗಳು ಆಗುತ್ತಲೇ ಇವೆ, ಇನ್ನು ಕೆಲವರಂತೂ ಭಾರತೀಯ ನಾಗರಿಕರಿಗೆ ಇದರಿಂದ ಅಪಾಯ ತಪ್ಪಿದ್ದಲ್ಲ ಎಂಬಂತೆ ಬಿಂಬಿಸುತ್ತಲಿವೆ. ಹೀಗಿರುವಾಗ ಸ್ಕಿನ್‌ಡಾಕ್ಟರ್ ಹೆಸರಿನ ಎಕ್ಸ್ ಖಾತೆಯಲ್ಲಿ ಮೇಜರ್ ನೀಲ್ ಸಿಎಎ ಯನ್ನು ಸರಳವಾಗಿ ವಿವರಿಸುವ ಪ್ರಯತ್ನ ಮಾಡಿದ್ದಾರೆ, ಹಾಗಾದರೆ ಮೇಜರ್ ನೀಲ್‌ ಹೇಳಿದ್ದೇನು? ನೋಡೋಣ ಬನ್ನಿ.

1. CAAಗೂ ಭಾರತೀಯರಿಗೂ ಯಾವುದೇ ರೀತಿಯಾದ ಸಂಬಂಧವಿಲ್ಲ.

2. ಇದು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವವನ್ನು ನೀಡುತ್ತದೆ.

3. ಈ ಕಾಯ್ದೆಯು ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ. ಏಕೆಂದರೆ, ಅವರು ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಧಾರ್ಮಿಕವಾಗಿ ಕಿರುಕುಳಕ್ಕೆ ಒಳಗಾಗುವುದಿಲ್ಲ.

4. ಸುನ್ನಿಗಳು ಶಿಯಾಗಳು ಮತ್ತು ಅಹ್ಮದೀಯರನ್ನು ಧಾರ್ಮಿಕವಾಗಿ ನಿಂದಿಸಬಹುದು ಎಂದು ನೀವು ವಾದಿಸುವಿರಾದರೆ, (ಎ) ಅದು ಪಂಥದ ಒಳಗಡೆಯ ಚರ್ಚೆಯೇ ಹೊರತು ಧಾರ್ಮಿಕ ಕಾನೂನು ಕ್ರಮವಲ್ಲ. (b) ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಶಿಯಾ ಮತ್ತು ಅಹ್ಮದೀಯ ಜನಸಂಖ್ಯೆಯು ಭಾರತದ ವಿಭಜನೆಯನ್ನು ಬೆಂಬಲಿಸಿತು. ಅವರನ್ನು ರಕ್ಷಿಸುವುದು ಭಾರತೀಯರ ನೈತಿಕ ಹೊಣೆಗಾರಿಕೆಯಲ್ಲ, ಆದರೆ ಈ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಂದರೆ ಹಿಂದೂಗಳು, ಸಿಖ್ಖರು, ಬೌಧ್, ಇತ್ಯಾದಿಗಳಿಗೆ ಅಲ್ಲಿ ಧರ್ಮದಲ್ಲಿ ಮೆಜಾರಿಟಿ ಇರುವವರು ಕಿರುಕುಳ ನೀಡುವುದಿಲ್ಲ ಎಂದು ಪಾಕಿಸ್ತಾನದ ಸಂಸ್ಥಾಪಕ ಆಡಳಿತಗಾರರಿಂದ ಭರವಸೆ ನೀಡಲಾಯಿತು, ಆದರೆ ಅವರು ಆ ಮಾತಿಗೆ ವಿರುದ್ಧವಾಗಿ ನಡೆದುಕೊಂಡರು. ಹಾಗಾಗಿ ದೇಶದ ವಿಭಜನೆಯು ಧರ್ಮಾಧಾರಿತವಾಗಿದೆ ಎಂದು ಪರಿಗಣಿಸಿ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಭಾರತದ ನೈತಿಕ ಹೊಣೆಗಾರಿಕೆಯಾಗಿದೆ. (ಸಿ) ಸುಮಾರು 40 ಇಸ್ಲಾಮಿಕ್ ರಾಷ್ಟ್ರಗಳು, 100+ woke ದೇಶಗಳು ಮತ್ತು UN ಏಜೆನ್ಸಿಗಳಿವೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ವಿಚಾರಣೆಗೆ ಒಳಗಾದ ಮುಸ್ಲಿಮರು ಅವರನ್ನು ಸಂಪರ್ಕಿಸಬಹುದು.

ಹೀಗೆ ಸರಳವಾಗಿ ಮನಮುಟ್ಟುವಂತೆ ಸಿಎಎ ಎಂದರೇನು ಎಂದು ವಿವರಿಸಿದ್ದಾರೆ.

You might also like
Leave A Reply

Your email address will not be published.