ಕಗ್ಗಂಟಾದ ಲೋಕಸಭಾ ಟಿಕೆಟ್ ಹಂಚಿಕೆ – ಚುನಾವಣಾ ಚಾಣಕ್ಯ ಅಮಿತಾ ಶಾ ಹೊಸ ತಂತ್ರ

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸುತ್ತಿರುವುದು 05 ಲೋಕಸಭಾ ಕ್ಷೇತ್ರಗಳು. ಅದರಲ್ಲಿ ಪ್ರಮುಖವಾಗಿ ಮೈಸೂರು-ಮಂಡ್ಯ ಲೋಕಸಭಾ ಕ್ಷೇತ್ರ. ಮೈಸೂರಿನಲ್ಲಿ ಯಾರು ಸ್ಪರ್ಧಿ ಎಂಬುದಾದರೆ, ಮತ್ತೊಂದು ಕಡೆ ಮಂಡ್ಯದಲ್ಲಿ ಬಿಜೆಪಿಯೋ ಅಥವಾ ಜೆಡಿಎಸ್ಸೋ ಎಂಬುವುದು ಕಂಗಟ್ಟಾಗಿದೆ. ಒಂದು ವೇಳೆ ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧಿಸಿದರೆ ಸುಮಲತಾ ಭವಿಷ್ಯ ಏನು? ಮೈಸೂರಿನಿಂದ ಯದುವೀರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರ? ಎಂಬ ಅನುಮಾನವೂ ಮನೆಮಾಡಿದೆ. ಇವುಗಳಿಗೆ ಅಮಿತ್ ಶಾ ತೆಗೆದುಕೊಂಡಿರೋ ಮಾಸ್ಟರ್ ಪ್ಲ್ಯಾನ್ ಆದ್ರು ಏನು? ಏನಿದು ಸುದ್ದಿ ಬನ್ನಿ ನೋಡುವ..

ಮೈಸೂರಿನಲ್ಲಿ ಬಹುತೇಕ ಹಾಲೀ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಎಂಬ ಸುದ್ದಿಗೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹೆಚ್ಚಿನ ಪ್ರತಿಕ್ರಿಯೆಗಳು ಬರುತ್ತಿವೆ. ಇವರ ಬದಲಿಗೆ ಮೈಸೂರು ರಾಜರಾದ ಯದುವೀರ್ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಾಗಲೇ ಪ್ರತಾಪ್ ಸಿಂಹ ಅವರ ಪ್ರತಿಕ್ರಿಯೆಯೂ ಖಾರವಾಗಿ ಬರಲಾರಂಭಿಸಿತು. ಆದರೆ ಇಲ್ಲಿ ಟ್ವಿಸ್ಟ್ ಅಂದ್ರೆ, ಯದುವೀರ್ ಚುನಾವಣೆಯಲ್ಲಿ ತಾವು ಭಾಗವಹಿಸುವ ಕುರಿತು ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ.

ಯದುವೀರ್ ಅವರನ್ನು ಬಿಜೆಪಿ ಹೇಗೆ ಕಣಕ್ಕಿಳಿಸಲು ಹೋರಾಡುತ್ತಿದೆಯೋ ಹಾಗೆಯೇ ಕಾಂಗ್ರೆಸ್ ಕೂಡಾ ಟಿಕೆಟ್ ನೀಡಲು ಉತ್ಸುಕವಾಗಿದೆ. ಯದುವೀರ್ ಅವರನ್ನು ದೆಹಲಿಯ ನಾಯಕರು ತೆರೆಮೆರೆಯಲ್ಲಿ ಸಂಪರ್ಕಿಸಿದ್ದಲ್ಲದೇ, ಯದುವೀರ್ ಪತ್ನಿಯ ಕಡೆಯಿಂದ ಚುನಾವಣಾ ಟಿಕೆಟಿಗೆ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಸುದ್ದಿ ಮೂಲಗಳಿಂದ ತಿಳಿದು ಬರುತ್ತಿದೆ.

ಮೈಸೂರಿನಲ್ಲಿ ಬಹುತೇಕ ಹಾಲೀ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲಿದೆ ಇವರ ಬದಲಿಗೆ ಮೈಸೂರು ರಾಜರಾದ ಯದುವೀರ್ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ

ಅದೇನೆ ಇದ್ದರು, ಯದುವೀರ್ ಮಾತ್ರ ಚುನಾವಣೆಗೆ ಸ್ಪ್ರರ್ಧಿಸುತ್ತಾರೋ ಅಥವಾ ಇಲ್ಲವೋ? ಸ್ಪರ್ಧಿಸುವುದಾದರೆ ಯಾವ ಪಕ್ಷದಲ್ಲಿ ನಿಲ್ಲುತ್ತಾರೆ? ಅಷ್ಟಕ್ಕೂ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆಯೋ ಅಥವಾ ಇಲ್ಲವೋ? ಎಂಬಿತ್ಯಾದಿ ಪ್ರಶ್ನೆಗಳಿಗೆ ಖುದ್ದಾಗಿ ಅವರೇ ಉತ್ತರಿಸಬೇಕಿದೆ.

ಇನ್ನೂ ಯದುವೀರ್ ಅವರಿಗೆ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇಲ್ಲದೇ ಇದ್ದ ಪಕ್ಷದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರನ್ನು ನಿಲ್ಲಿಸಿದರೆ ಹೇಗೆ ಎಂದು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇದೆಲ್ಲರೊಂದಿಗೆ, ಅಮಿತ್ ಶಾ ತಮ್ಮ ಆಪ್ತರಿಂದ ಮತ್ತೊಂದು ಸಮೀಕ್ಷೆಯನ್ನು ತರಿಸಿಕೊಂಡಿದ್ದು, ಪ್ರತಾಪ್ ಸಿಂಹ, ಯದುವೀರ್, ಡಾ.ಮಂಜುನಾಥ್ ಹೊರತಾಗಿ ಹೊಸ ಮುಖವನ್ನು ಕರೆತರುವ ಲೆಕ್ಕಾಚಾರವೂ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಅಮಿತ್ ಶಾ ತರೆಸಿಕೊಂಡಿರುವ ಸಮೀಕ್ಷೆ ಯಾರ ಪರವಾಗಿ ಇದೆ ಎನ್ನುವ ಮಾಹಿತಿಯಿಲ್ಲದಿದ್ದರೂ, ಸದ್ಯದ ಮಟ್ಟಿಗೆ ಮಹಾರಾಜರ ಹೆಸರೇ ಮಂಚೂಣಿಯಲ್ಲಿ ಕೇಳಿ ಬರುತ್ತಿದೆ. ಮೈಸೂರು ಕ್ಷೇತ್ರದ ಅಭ್ಯರ್ಥಿ ಸ್ಥಾನವೂ ಯದುವೀರ್ ಅವರ ಹೇಳಿಕೆಯ ಮೇಲೆಯೇ ನಿಂತಿದೆ ಎಂಬುದಾಗಿ ಹೇಳಬಹುದೇನೋ!

You might also like
Leave A Reply

Your email address will not be published.