ಅಭಿವೃದ್ಧಿಗೆ ಹಣವಿಲ್ಲ, ವಕ್ಫ್ ಆಸ್ತಿಗೆ ಬೇಲಿ ಕಟ್ಟಲು ಕೊರತೆಯಿಲ್ಲ

ಸರ್ಕಾರ ವಕ್ಫ್ ಆಸ್ತಿಗಳಿಗೆ ಕಾಂಪೌಂಡ್ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು ಯಾಕೆ? ರಾಜ್ಯ ಸರ್ಕಾರ ರಿಲೀಸ್ ಮಾಡಿದ ನೋಟಿಫಿಕೇಷನ್ ಅಲ್ಲಿ ಇರುವುದಾದರೂ ಏನು? ಬನ್ನಿ ನೋಡೋಣ..!!

ಪೋಸ್ಟ್ನಲ್ಲಿ ಏನಿದೆ?

ರಾಜ್ಯ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿ ರಾಜ್ಯದ ಒಟ್ಟು 416 ವಕ್ಫ್ ಆಸ್ತಿಗಳ (Waqf Property) ಸಂರಕ್ಷಣೆಗಾಗಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು 31.84 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.

ಬರದಿಂದ ಹೈರಾಣಾಗಿರುವ ರೈತರಿಗೆ ನೆರವು ನೀಡಲು ಹಣವಿಲ್ಲ ಎಂದು ಗಾಯದ ಮೇಲೆ ಬರೆ ಎಳೆಯುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ವಕ್ಫ್ ಆಸ್ತಿಗಳಿಗೆ ಮಾತ್ರ ಕಾಂಪೌಂಡ್ ಕಟ್ಟಿಸಿಕೊಡಲು 31 ಕೋಟಿ ರೂಪಾಯಿ ಉಡುಗೊರೆ ನೀಡಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ?

There is no money for development, there is no shortage to fence the waqf property

ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ನಾಡಿಗೆ ಅನ್ನ ನೀಡುವ ರೈತರ ಹಿತರಕ್ಷಣೆಗಿಂತ ಮುಸ್ಲಿಮರ ಓಲೈಕೆ ಮಾಡಿ ತಮ್ಮ ವೋಟ್ ಬ್ಯಾಂಕ್ ರಕ್ಷಣೆ ಮಾಡಿಕೊಳ್ಳುವುದೇ ಆದ್ಯತೆಯಾಗಿದೆ ಎಂಬುದು ಕಣ್ಣಿಗೆ ಕಟ್ಟಿದಂತೆ ಕಾಣಿಸುತ್ತಿದೆ.

ಕರ್ನಾಟಕದಲ್ಲಿರುವುದು ಮುಸ್ಲಿಂ ಪರ ಸರ್ಕಾರ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಮುಸ್ಲಿಮರ ಮತದಿಂದ ಅಂತ ಹೇಳಿದ್ದೀರಲ್ಲ ಡಿಸಿಎಂ ಡಿಕೆ ಶಿವಕುಮಾರ್ ಅವರೇ ನಾಡಿನ ರೈತರು ಲೋಕಸಭೆ ಚುನಾವಣೆಯಲ್ಲಿ ತಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

You might also like
Leave A Reply

Your email address will not be published.