ಪೆಂಟಾ ಲಸಿಕೆ ಪಡೆದ ಒಂದೂವರೆ ತಿಂಗಳ ಗಂಡು ಮಗು ನಿಧನ – ರಾಮನಗರದಲ್ಲಿ ಘಟನೆ

ಪೆಂಟಾ ಲಸಿಕೆ ಪಡೆದ ಒಂದೂವರೆ ತಿಂಗಳ ಗಂಡು ಮಗು ಕೆಲವೇ ಹೊತ್ತಿನಲ್ಲಿ ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ.

ದೊಡ್ಡಮಳೂರು ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ 18 ಮಕ್ಕಳಿಗೆ ಪೆಂಟಾ ಲಸಿಕೆ ನೀಡಿದ್ದಾರೆ. ಈ ಮಕ್ಕಳ ಪೈಕಿ ಸ್ಪೂರ್ತಿ ಮತ್ತು ಮೋಹನ್ ದಂಪತಿಯ ಮಗು ಕೂಡ ಒಂದಾಗಿತ್ತು. ಆದರೆ ಜಸ್ವಿಕ್ ಗೆ ಚುಚ್ಚುಮದ್ದು ನೀಡಿದ ಒಂದು ಗಂಟೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದೆ.

ಸೂಕ್ತ ರೀತಿಯಲ್ಲಿ ಮಗು ತಪಾಸಣೆ ಮಾಡದೇ ವ್ಯಾಕ್ಸಿನ್ ಹಾಕಿರುವ ಆರೋಪ ಕೇಳಿಬಂದಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಅದೇ ಗ್ರಾಮದಲ್ಲಿ 18 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. 18 ಮಕ್ಕಳ ಪೈಕಿ 17 ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಈ ಕುರಿತು ತಕ್ಷಣವೇ ವರದಿ ದಾಖಲಾಗಬೇಕು ಎಂದು ಗ್ರಾಮದ ಜನರು ತಿಳಿಸುತ್ತಿದ್ದಾರೆ.

You might also like
Leave A Reply

Your email address will not be published.