ಮಂಗಳನ ಅಂಗಳದಲ್ಲಿದ್ದರೂ ತನ್ನವರನ್ನು ಕರೆತರಬಲ್ಲದು ಭಾರತ

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಎಂಟು ಜನ ಮಾಜಿ ನೌಕಾಪಡೆಯ ಅಧಿಕಾರಿಗಳು ಫೆಬ್ರವರಿ 12ರಂದು ಬಿಡುಗಡೆಯಾಗಿ ಅದರಲ್ಲಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಘೋಷಣೆ ಮಾಡಿದೆ. ಬಿಡುಗಡೆಯಾದ ಅಧಿಕಾರಿಗಳು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವೈಯಕ್ತಿಕ ಮಧ್ಯಸ್ಥಿಕೆ ತಮ್ಮ ಬಿಡುಗಡೆಗೆ ಹೇಗೆ ಕಾರಣವಾಗಿದೆ ಎಂಬುದನ್ನು ಮಾಧ್ಯಮಗಳಿಗೆ ವಿವರಿಸಿದರು.

Even if it is in the court of Mars, India can bring its own people

ಎಂಟು ಜನ ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳನ್ನು ಇಸ್ರೇಲ್ ಸರ್ಕಾರಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಕತಾರ್ ಸರ್ಕಾರವು ಬಂಧಿಸಿತ್ತು. ಆದರೆ ಬಂಧನಕ್ಕೆ ನಿಖರವಾದ ಆರೋಪಗಳನ್ನು ಅಥವಾ ಕಾರಣಗಳನ್ನು ಬಹಿರಂಗಪಡಿಸಿರಲಿಲ್ಲ. ಆರೋಪಗಳು ಮಾಧ್ಯಮಗಳ ವರದಿಗಳನ್ನೇ ಆಧರಿಸಿತ್ತು, ಅಕ್ಟೋಬರ್ 2023 ರಲ್ಲಿ ಎಲ್ಲಾ ಎಂಟು ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಕತಾರ್ ನ್ಯಾಯಲಯವು ಮರಣದಂಡನೆ ವಿಧಿಸಲಾಗಿತ್ತು.

ಕತಾರ್‌ನ ಎಮಿರ್ ಶೇಕ್ ತಮೀಮ್ ಇಬ್ನ್ ಹಮದ್ ಅಲ್‌ ಥಾನಿ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವೈಯಕ್ತಿಕ ಸಂಬಂಧ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ತೆರೆಮರೆಯ ರಾಜತಾಂತ್ರಿಕ ಚತುರತೆಯಿಂದ ಮಾಜಿ ನೌಕಾಪಡೆಯ ಅಧಿಕಾರಿಗಳನ್ನು ಬಂಧನದಿಂದ ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂಬುದು ಬೆಳಕಿಗೆ ಬಂದಿದೆ. ವಿದೇಶಾಂಗ ಮಂತ್ರಿ ಶ್ರೀ ಎಸ್ ಜೈ ಶಂಕರ್ ಅವರು ರಾಜತಾಂತ್ರಿಕ ವಿಷಯದಲ್ಲಿ ಮುಂದಾಳತ್ವ ವಹಿಸಿದರೆ ನರೇಂದ್ರ ಮೋದಿಯವರ ಸಲಹೆಗಾರರಾಗಿದ್ದುಕೊಂಡು ವೈಯಕ್ತಿಕವಾಗಿ ಈ ವಿಷಯವನ್ನು ಹೇಗೆ ತಿಳಿಗೊಳಿಸಬಹುದು ಎಂಬುದರಲ್ಲಿ ಅಜಿತ್ ದೋವಲ್ ಅವರು ಪಾತ್ರ ನಿರ್ವಹಿಸಿದ್ದಾರೆ. ಭಾರತದ ದೃಷ್ಟಿಕೋನವನ್ನು ಸಮರ್ಪಕವಾಗಿ ಪ್ರಸ್ತುತಪಡಿಸಲು ಅಥವಾ ಭಾರತದ ನಿಲುವನ್ನು ಖಚಿತವಾಗಿ ತಿಳಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ದೋವಲ್ ಅವರು ಕತಾರ್‌ನ ದೋಹಾಗೆ ಅನೇಕ ಬಾರಿ ರಾಜತಾಂತ್ರಿಕ ಪ್ರವಾಸಗಳನ್ನು ಕೈಗೊಂಡಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.

https://aninews.in/news/world/asia/pm-modi-personally-supervised-developmentsworking-for-return-of-eighth-national-mea-on-release-of-navy-veterans-from-qatar20240212171504/?s=08 

ಕಳೆದ ಅಕ್ಟೋಬರ್ 2023ರಲ್ಲಿ ಎಲ್ಲ ಎಂಟು ಜನ ಅಧಿಕಾರಿಗಳಿಗೆ ಮರಣದಂಡನೆ ಘೋಷಣೆಯಾದ ಬಳಿಕ ಭಾರತದ ಕಡೆಯಿಂದ ಪ್ರಯತ್ನಗಳು ನಿಧಾನವಾಗದೆ ನವೆಂಬರ್ 2023ರಲ್ಲಿ ಭಾರತವು ಮರಣದಂಡನೆ ವಿರುದ್ಧ ಮೇಲ್ಮನೆ ಸಲ್ಲಿಸಿತ್ತು. ಅದಾದ ನಂತರದ ಬೆಳವಣಿಗೆಯನ್ನು ನೋಡುವುದಾದರೆ ಕತಾರ್ ನ್ಯಾಯಾಲಯವು ಮರಣದಂಡನೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಿದಾಗಲೇ ಮಾಜಿ ನೌಕಾಪಡೆಯ ಅಧಿಕಾರಿಗಳನ್ನು ಭಾರತಕ್ಕೆ ಕರೆತರುವ ಲಕ್ಷಣಗಳು ಕಾಣಿಸಿದವು ಹಾಗೂ ನವೆಂಬರ್ 2023ರಲ್ಲಿ ದುಬೈನಲ್ಲಿ COP 28 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್‌ನ ಎಮಿರ್ ಶೇಕ್ ಅಲ್‌ಥಾನಿ ಅವರನ್ನು ಭೇಟಿ ಮಾಡಿದರು ಹಾಗೂ ಕತಾರ್‌ನಲ್ಲಿ ವಾಸಿಸುವ ಭಾರತೀಯ ಸಮುದಾಯದ ಯೋಗ ಕ್ಷೇಮದ ಕುರಿತು ಚರ್ಚೆ ನಡೆಸಿದ್ದರು.

ಜನವರಿ 2024ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ರಣಧೀರ ಜೈಸ್ವಾಲ್ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು ಕತಾರ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಧಿಕಾರಿಗಳ ಸಮಸ್ಯೆಗೆ ಸಂಬಂಧಿಸಿದಂತೆ, ಮೇಲ್ಮನವಿ ಸಲ್ಲಿಸಲು ನಮಗೆ ಇನ್ನೂ ಅವಕಾಶವಿದೆ. ಮೂಲತಃ ಮರಣದಂಡನೆಗೆ ಗುರಿಯಾಗಿದ್ದ ಅಧಿಕಾರಿಗಳ ಮರಣದಂಡನೆಯನ್ನು ಜೈಲು ಶಿಕ್ಷೆಯಾಗಿ ಬದಲಾಗಿದೆ. ಈಗ ಅವರು ಮರಣದಂಡನೆಯಿಂದ ಮುಕ್ತರಾಗಿದ್ದಾರೆ ಎಂದು ಹೇಳಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸತತವಾಗಿ ಈ ವಿಷಯದ ಕುರಿತು ಕತಾರ್‌ನೊಂದಿಗೆ ಸಂಪರ್ಕದಲ್ಲೇ ಇತ್ತು.‌ ಹಾಗೂ ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಲು ಪ್ರಧಾನಿ ಮೋದಿ ಮತ್ತು ಕತಾರ್ ಎಮಿರ್ ಶೇಕ್ ಹಮೀದ್ ಅವರು ಭೇಟಿಯಾಗಿದ್ದಾರೆ ಎಂದು ಸಚಿವಾಲಯವು ಈ ಸಭೆಯ ಇತರ ವಿವರಗಳನ್ನು ಬಹಿರಂಗಪಡಿಸದಿದ್ದರೂ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಮರಣದಂಡನಿಗೆ ಗುರಿಯಾದ ಅಧಿಕಾರಿಗಳ ವಿಷಯವನ್ನು ಪ್ರಸ್ತಾಪಿರಬಹುದು ಎಂದು ನಂಬಲಾಗಿದೆ.

You might also like
Leave A Reply

Your email address will not be published.