ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ – ಎಷ್ಟು ಗೊತ್ತಾ ? – ಜನತೆಗೆ ಮೋದಿ ಕೊಟ್ರು ಗುಡ್ ನ್ಯೂಸ್.

ಶ್ರೀ ನರೇಂದ್ರ ಮೋದಿಜೀಯವರ ಸರ್ಕಾರ ದೇಶದ ಸಾಮಾನ್ಯ ಜನತೆಗೆ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು ಇಳಿಕೆ ಮಾಡುವ ಮುನ್ಸೂಚನೆ ನೀಡುವ ಮೂಲಕ ಸಿಹಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಮೋದಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸಬಾರದು ಎಂದು ಎಚ್ಚೆತ್ತಿರುವ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆಯ ಇಳಿಕೆ ಮಾಡಲು ಆಯಿಲ್ ಮಾರ್ಕೆಟಿಂಗ್ ಕಂಪನಿ(OMC) ಜೊತೆ ಮಾತುಕತೆ ನಡೆಸಿದೆ. ಕಳೆದ ವರ್ಷ ಪೆಟ್ರೋಲ್‌ ಬೆಲೆ 100ರ ಗಡಿ ದಾಟಿತ್ತು ಹಾಗೂ ಡೀಸೆಲ್‌ ಬೆಲೆಯೂ 100ರ ಆಸುಪಾಸಿನಲ್ಲಿತ್ತು. ಇದರಿಂದಾಗಿ ದೇಶದ ಜನತೆ ಸಂಕಷ್ಟದಿಂದ ಸಮಯ ದೂಡಿದ್ದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೈಲ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ಕುರಿತು ತೈಲ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ವರ್ಷದ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 8 ರಿಂದ 10 ರೂಪಾಯಿ ಹಾಗೂ ಡೀಸೆಲ್ ಮೇಲೆ 3 ರಿಂದ 4 ರೂಪಾಯಿ ಲಾಭ ಗಳಿಸಿವೆ. ಒಟ್ಟಾರೆಯಾಗಿ, IOC, HPCL ಹಾಗೂ BPCL ಸೇರಿದಂತೆ ತೈಲ ಕಂಪನಿಗಳು ಈ ವರ್ಷ 28,000 ಕೋಟಿ ರೂಪಾಯಿ ಲಾಭಗಳಿಸಿದೆ.

ಈ ಲಾಭದಿಂದ ಕಾರಣದಿಂದ ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುತ್ತಿರುವುದು ಮೋದಿ ಸರ್ಕಾರಕ್ಕೆ ಧನಾತ್ಮಕ ಪರಿಣಾಮವಾಗಲಿದೆ.

You might also like
Leave A Reply

Your email address will not be published.