ಭಜನ್ ಲಾಲ್ ಶರ್ಮಾ ರಾಜಸ್ಥಾನದ ನೂತನ ಮುಖ್ಯಮಂತ್ರಿ – ಪ್ರಥಮ ಬಾರಿ ಶಾಸಕ ಪ್ರಥಮ ಬಾರಿ ಮುಖ್ಯಮಂತ್ರಿ.

ಮರಭೂಮಿಯ ನಾಡು ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ 199 ಸ್ಥಾನಗಳಲ್ಲಿ ಬಿಜೆಪಿಯು 115 ಸ್ಥಾನಗಳನ್ನು ಗಳಿಸುವ ಮೂಲಕ ಭರ್ಜರಿ ವಿಜಯ ಸಾಧಿಸಿತ್ತು. ಆಡಳಿತಾರೂಢ ಕಾಂಗ್ರೆಸ್ ಕೇವಲ 66 ಸ್ಥಾನಗಳಿಗೆ ಕುಸಿದು ಸೋಲು ಅನುಭವಿಸಿತ್ತು.

ಬಿಜೆಪಿ ಹೈಕಮಾಂಡ್ 10 ದಿನಗಳ ಸಮಯದ ನಂತರ ರಾಜಸ್ಥಾನದ ಹೊಸ ಮುಖ್ಯಮಂತ್ರಿ ಯಾರೆಂಬ ಕುತೂಹಲಕ್ಕೆ ತೆರೆ ಎಳೆದಿದೆ. ಛತ್ತೀಸ್ʼಗಢ ಹಾಗೂ ಮಧ್ಯಪ್ರದೇಶದಂತೆ ಇಲ್ಲಿಯೂ ಹೊಸ ಮುಖಕ್ಕೆ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡಿದೆ.

ರಾಜಸ್ಥಾನದ ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಅವರೇ ಮರಳಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಅಂದಾಜಿಸಲಾಗಿತ್ತು. ಆದರೆ, ಬಿಜೆಪಿ ಹೈಕಮಾಂಡ್ ನಡೆ ಇಲ್ಲಿಯೂ ನಿಗೂಢತೆಯಿಂದಲೇ ಜಾಣ್ಮೆಯನ್ನು ಪ್ರದರ್ಶಿಸಿದೆ.

ಯಾರು ಈ ಭಜನ್ ಲಾಲ್ ಶರ್ಮಾ?

ಭಜನ್ ಲಾಲ್ ಶರ್ಮಾ ರಾಜಸ್ಥಾನದ ನೂತನ ಮುಖ್ಯಮಂತ್ರಿ
ಭಜನ್ ಲಾಲ್ ಶರ್ಮಾ ರಾಜಸ್ಥಾನದ ನೂತನ ಮುಖ್ಯಮಂತ್ರಿ

ಬಿಜೆಪಿಯ ಭಜನ್ ಲಾಲ್ ಶರ್ಮಾ ಅವರು ರಾಜಕೀಯ ಪಯಣವು ಗಮನಾರ್ಹ ಸಾಧನೆಗಳಿಂದ ಗುರುತಿಸಲ್ಪಟ್ಟಿದೆ. ಇವರು ರಾಜಸ್ಥಾನ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಾಲ್ಕು ಸಲ ಸೇವೆ ಸಲ್ಲಿಸಿದ್ದಾರೆ.

ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರು ಸಂಗನೇರ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪುಷ್ಪೇಂದ್ರ ಭಾರಧ್ವಾಜ್‌ ವಿರುದ್ಧ 1,45,162 ಮತಗಳನ್ನು ಪಡೆಯುವ ಮೂಲಕ ಬರೋಬ್ಬರಿ 48,081 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದರು.

ಭಜನ್‌ ಲಾಲ್‌ ಶರ್ಮಾ ಅವರು ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಎಬಿವಿಪಿಯ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಹಾಗೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದೆ.

You might also like
Leave A Reply

Your email address will not be published.