ಪರೀಕ್ಷೆಯಲ್ಲಿ ಕಳೆದ ವರ್ಷಕ್ಕಿಂತ ಶೇ.340 ರಷ್ಟು ವ್ಯತ್ಯಾಸ – NTA ವಿರುದ್ಧ ಅಭ್ಯರ್ಥಿಗಳ ಆಕ್ರೋಶ

ಈ ವರ್ಷದ NEET-UG ಫಲಿತಾಂಶ ಪ್ರಕಟವಾದ ನಂತರ ರ್‍ಯಾಂಕ್ ವಿಷಯದಲ್ಲಿ ಭಾರೀ ವಿವಾದವೆದ್ದಿರುವುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರವೇ. ಕರ್ನಾಟಕದ ನೀಟ್-ಯುಜಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ರ್‍ಯಾಂಕ್ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು ಎಂಬ ಆತಂಕದಲ್ಲಿದ್ದಾರೆ.

ಕಳೆದ ವರ್ಷದ NEET ಫಲಿತಾಂಶಗಳಿಗೆ ಹೋಲಿಸಿದರೆ, ಅವರ ನಿರೀಕ್ಷಿತ ರ್ಯಾಂಕ್ ಶ್ರೇಣಿಗಳು ಈಗ 20ರಿಂದ 25 ಸಾವಿರದಷ್ಟು ಕೆಳಗೆ ಇಳಿದಿದೆ. ಇದರಿಂದಾಗಿ ಅವರು ಬಯಸಿದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಸಿಗುತ್ತಿಲ್ಲ. ವೈದ್ಯಕೀಯ ಪದವಿ ಗಳಿಸುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಅನಿವಾರ್ಯವಾಗಿ ಸಣ್ಣ ಪಟ್ಟಣಗಳಲ್ಲಿರುವ ವೈದ್ಯಕೀಯ ಕಾಲೇಜುಗಳನ್ನು ನೋಡಬೇಕಾಗಿದೆ ಎಂದು ಹಲವರು ಅಸಹಾಯಕತೆ ತೋರಿಸಿಕೊಳ್ಳುತ್ತಿದ್ದಾರೆ.

340% difference in exam compared to last year - Candidates' outrage against NTA

ಈ ವರ್ಷದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 720 ಕ್ಕೆ 640 ಅಂಕಗಳನ್ನು ಗಳಿಸಿದ ಮತ್ತು 2024ರಲ್ಲಿ 38,000 ರ್‍ಯಾಂಕ್ ಪಡೆದ ವಿದ್ಯಾರ್ಥಿಯು 2023 ರ ಮಾನದಂಡಕ್ಕೆ ಹೋಲಿಸಿದ್ದರೆ ತಮ್ಮ ರ್‍ಯಾಂಕ್ 10 ಸಾವಿರದೊಳಗೆ ಬರಬೇಕಾಗಿತ್ತು ಎನ್ನುತ್ತಾರೆ.

ಈ ಬಗ್ಗೆ TNIE ಪ್ರತಿನಿಧಿಯೊಂದಿಗೆ ಮಾತನಾಡಿದ ಅಖಿಲ್ ಶೀಲಂ, “ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA)ಯ ನಡೆಯಿಂದಾಗಿ ನನ್ನ ರ್ಯಾಂಕ್ ಶ್ರೇಯಾಂಕವು ಶೇಕಡಾ 340ರಷ್ಟು ಏರಿಳಿತ ಕಂಡಿದ್ದು, ಇದು ಸ್ಪರ್ಧಾತ್ಮಕ ಪರೀಕ್ಷೆಗಳ ವಿಚಾರದಲ್ಲಿ ಬಹಳ ಅಪರೂಪ ಪ್ರಕರಣ. ಈ ಹಿಂದೆ ದೇಶದಲ್ಲಿ ಇಂತಹ ಘಟನೆ ಆಗಿರಲಿಲ್ಲ. ನನ್ನ ಸ್ನೇಹಿತ 582 ಅಂಕಗಳನ್ನು ಗಳಿಸಿದ್ದಾನೆ, ಇದು ಬೆಂಗಳೂರಿನಲ್ಲಿ ಖಾಸಗಿ ಅಥವಾ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಉತ್ತಮ ಅಂಕವಾಗಿದೆ. ಆದರೆ ಈಗ, ಅವನು ಈ ವರ್ಷವನ್ನು ಸುಮ್ಮನೆ ಕಳೆದು ಮುಂದಿನ ವರ್ಷ NEET ಪರೀಕ್ಷೆಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ.

ತನ್ನ ಕಷ್ಟವನ್ನು ವಿವರಿಸಿದ ಅವರು, ನನಗೆ ಬೆಂಗಳೂರಿನ ಕಾಲೇಜಿನಲ್ಲಿ ಓದುವ ಆಸೆಯಿದೆ. ಆದರೆ ರ್‍ಯಾಂಕ್‌ನ ಏರಿಳಿತದಿಂದ ಎರಡನೇ ದರ್ಜೆ ಹೋಗಬೇಕು ಎನಿಸುತ್ತಿದೆ ಎಂದರು.

ನನ್ನ ಪೋಷಕರು ನನ್ನೊಂದಿಗೆ ಹೋಗಬೇಕಾಗಿರುವುದರಿಂದ ನಮ್ಮ ಜೀವನ ವೆಚ್ಚದ ಮೇಲೆ ಇದು ಪರಿಣಾಮ ಬೀರುತ್ತದೆ. ನಾನು ನಗರದ ಹೊರಗಿನ ಕಾಲೇಜಿನ ಬಗ್ಗೆ ಎಂದಿಗೂ ಯೋಚಿಸಲಿಲ್ಲ, ಆದರೆ ಈಗ ನಾನು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಹುಬ್ಬಳ್ಳಿಯ ಕಿಮ್ಸ್ ಮತ್ತು ಮಂಡ್ಯ ವೈದ್ಯಕೀಯ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ ಎಂದರು.

720 ರಲ್ಲಿ 550 ಮತ್ತು 1.3 ಲಕ್ಷ ರ‍್ಯಾಂಕ್ ಗಳಿಸಿರುವ ಮತ್ತೊಬ್ಬ ವಿದ್ಯಾರ್ಥಿನಿ ದೇವಿಕಾ ಎನ್, ಈ ವರ್ಷ ಬಿಟ್ಟುಬಿಟ್ಟು ಮುಂದಿನ ವರ್ಷ NEET ಪರೀಕ್ಷೆ ಬರೆಯುವ ಅನಿವಾರ್ಯ ಪರಿಸ್ಥಿತಿ ನನಗೆ ಉಂಟಾಗಿದೆ. ಈ ವರ್ಷದ ರ್ಯಾಂಕ್‌ ಹಿಡಿದು ಹೋದರೆ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಕೂಡ ನನಗೆ ಪ್ರವೇಶ ಸಿಗುವುದಿಲ್ಲ. ನನ್ನ ಪೋಷಕರಿಗೆ ಖಾಸಗಿ ಕಾಲೇಜುಗಳಲ್ಲಿ ಸೀಟು ಗಿಟ್ಟಿಸುವಷ್ಟು ಆರ್ಥಿಕ ಪರಿಸ್ಥಿತಿಯಿಲ್ಲ ಎಂದರು.

You might also like
Leave A Reply

Your email address will not be published.