ಕಿಂಗ್ ಕೊಹ್ಲಿ ದಾಖಲೆ‌ ಮುರಿದ ಪ್ರಿನ್ಸ್ ಶುಭ್ʼಮನ್ ಗಿಲ್!

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ʼಮನ್ ಗಿಲ್ ಅವರು ವಿರಾಟ್ ಕೊಹ್ಲಿಯ ದಾಖಲೆಯೊಂದನ್ನು ಮುರಿದಿದ್ದಾರೆ. ಇಲ್ಲಿಯ ತನಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 3‌,000 ರನ್ ಗಳಿಸಿದ ಅತೀ ಕಿರಿಯ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರವಾಗಿದ್ದರು. ಆದರೆ ಈಗ ಸ್ಥಾನ ಶುಭ್ʼಮನ್ ಗಿಲ್ ಪಾಲಾಗಿದೆ!

ಕೇವಲ 24 ವರ್ಷ 215 ದಿನಗಳಲ್ಲಿ ಶುಭ್ʼಮನ್ ಈ ದಾಖಲೆ ಮಾಡಿದ್ದಾರೆ.‌ ಶುಭ್ʼಮನ್ ‌ನಂತರ ವಿರಾಟ್ ಕೊಹ್ಲಿ‌ ಮತ್ತು ಸಂಜು ಸ್ಯಾಮ್ಸನ್ ಕ್ರಮವಾಗಿ ಈ ದಾಖಲೆ ಹೊಂದಿದ್ದಾರೆ. ವಿರಾಟ್ 26 ವರ್ಷ 186 ದಿನಗಳಲ್ಲಿ 3000 ರನ್ ಪೂರೈಸಿದರೆ, ಸಂಜು ಸ್ಯಾಮ್ಸನ್ 26 ವರ್ಷ 320 ದಿನಗಳನ್ನು ತೆಗೆದುಕೊಂಡಿದ್ದರು. ಇನ್ನು ಟಾಪ್ 5 ನಲ್ಲಿ ಇರುವ ಇತರ ಇಬ್ಬರು ಆಟಗಾರರನ್ನು‌ ನೋಡುವುದಾದರೆ ಸುರೇಶ್ ರೈನಾ 27 ವರ್ಷ 161 ದಿನಗಳಲ್ಲಿ 3,000 ರನ್ ಪೂರೈಸಿದರೆ, ರೋಹಿತ್ ಶರ್ಮಾ 27 ವರ್ಷ 343 ದಿನಗಳನ್ನು ತೆಗೆದುಕೊಂಡಿದ್ದರು.

ನಿನ್ನೆ ಕಿರಿಯ ವಯಸ್ಸಿನಲ್ಲೇ 3000 ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯ ಜೊತೆಗೆ ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ 3000 ರನ್ ಗಳಿಸಿದ ನಾಲ್ಲನೇಯ ಆಟಗಾರ ಎಂದೆನಿಸಿಕೊಂಡಿದ್ದಾರೆ.‌ ಇನ್ನು ಈ ವಿಭಾಗದಲ್ಲಿ 75 ಇನ್ನಿಂಗ್ಸ್‌ನಲ್ಲಿ ವೇಗವಾಗಿ 3000 ರನ್ ಪೂರೈಸಿದ ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಮೊದಲನೇ ಸ್ಥಾನದಲ್ಲಿದ್ದರೆ, 80 ಇನ್ನಿಂಗ್ಸ್‌ನಲ್ಲಿ ಪೂರೈಸಿದ ಕೆ.ಎಲ್. ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ, ಇಂಗ್ಲೆಂಡ್‌ನ ಜಾಸ್ ಬಟ್ಲರ್ 85 ಇನ್ನಿಂಗ್ಸ್‌ನಲ್ಲಿ ನಲ್ಲಿ ಪೂರೈಸಿ ಮೂರ‌ನೇ ಸ್ಥಾನದಲ್ಲಿದ್ದರೆ ಶುಭ್ಮನ್ 94 ಇನ್ನಿಂಗ್ಸ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

Prince Shubman Gill broke King Kohli's record!

ಕಳೆದ ಬಾರಿ ಐಪಿಎಲ್ ನಲ್ಲಿ ‌ಫ್ರಾಂಚೈಸಿ ಒಂದಕ್ಕೆ 890 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಆಡಗಾರನಾಗಿ ಹೊರ‌ಹೊಮ್ಮಿದ್ದರು. ಇನ್ನು ಜಿಟಿ ಮೊದಲ ಬಾರಿ ಕಪ್ ಎತ್ತುವಲ್ಲಿಯೂ ತಂಡಕ್ಕೆ ಶುಭ್ಮನ್ ಗಿಲ್ ಅವರ ಕೊಡುಗೆಯೂ ಅಪಾರವಾಗಿತ್ತು.

ನಿನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 44 ಎಸೆತಗಳಲ್ಲಿ 72 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಶುಭ್ಮನ್ ಅಡಿಪಾಯ ಹಾಕಿದರೆ, ಕೊನೆಯ ಎಸೆತದಲ್ಲಿ ರಶೀದ್ ಖಾನ್ ಅವರ ಮ್ಯಾಜಿಕ್ ಬ್ಯಾಟ್‌ನಿಂದ ಹೊಮ್ಮಿದ ರನ್ ಗುಜರಾತ್ ಗೆಲುವಿಗೆ ಕಾರಣವಾಗಿದೆ. ಈ ಮೂಲಕ 2024 ರ ಐಪಿಎಲ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಮಣಿಸಿದ ಮೊದಲ ತಂಡವಾಗಿ ಗುಜರಾತ್ ಟೈಟಾನ್ ಹೊರಹೊಮ್ಮಿದೆ.

You might also like
Leave A Reply

Your email address will not be published.